ಶಬರಿಮಲೆಗೆ ಮಹಿಳಾ ವರದಿಗಾರ್ತಿಯರನ್ನು ಕಳಿಸಬೇಡಿ: ಹಿಂದೂ ಸಂಘಟನೆಗಳಿಂದ ಮನವಿ

ಶಬರಿಮಲೆಯಲ್ಲಿ ಮಹಿಳೆಯರ ಪ್ರವೇಶಕ್ಕೆ ಒಪ್ಪದ ದೇವಸ್ವಂ ಮಂಡಲಿ ಹಾಗೂ ಹಿಂದೂ ಪರ ಸಂಘಟನೆಗಳು, ಅಯ್ಯಪ್ಪ ಭಕ್ತರುಗಳು ಒಂದು ದಿನದ ವಿಶೇಷ ಊಜೆಗಾಗಿ ಸೋಮವಾರ ಬಾಗಿಲು....
ಶಬರಿಮಲೆಗೆ ಘಿಳೆಯರ ಪ್ರವೇಶ ಯತ್ನ(ಸಂಗ್ರಹ ಚಿತ್ರ)
ಶಬರಿಮಲೆಗೆ ಘಿಳೆಯರ ಪ್ರವೇಶ ಯತ್ನ(ಸಂಗ್ರಹ ಚಿತ್ರ)
Updated on
ಕೊಟ್ಟಾಯಂ(ಕೇರಳ): ಶಬರಿಮಲೆಯಲ್ಲಿ ಮಹಿಳೆಯರ ಪ್ರವೇಶಕ್ಕೆ ಒಪ್ಪದ ದೇವಸ್ವಂ ಮಂಡಳಿ ಹಾಗೂ ಹಿಂದೂ ಪರ ಸಂಘಟನೆಗಳು, ಅಯ್ಯಪ್ಪ ಭಕ್ತರುಗಳು ಒಂದು ದಿನದ ವಿಶೇಷ  ಪೂಜೆಗಾಗಿ ಸೋಮವಾರ ಬಾಗಿಲು ತೆರೆಯಲಿರುವ ಅಯ್ಯಪ್ಪನ ಸನ್ನಿಧಾನಕ್ಕೆ ವರದಿಗಾರಿಕೆಗಾಗಿ ಮಾದ್ಯಮಗಳು ಮಹಿಳಾ ಪತ್ರಕರ್ತೆಯರನ್ನು ಕಳಿಸಬಾರದು ಎಂದು ಒತ್ತಾಯಿಸಿವೆ.
ವಿಶ್ವ ಹಿಂದೂ ಪರಿಷತ್ (ವಿಹೆಚ್ಪಿ) ಮತ್ತು ಹಿಂದೂ ಐಕ್ಯವೇದಿ ಸೇರಿದಂತೆ ಬಲಪಂಥೀಯ ಸಂಘಟನೆಗಳ ಜಂಟಿ ವೇದಿಕೆಯಾದ ಶಬರಿಮಳ ಕರ್ಮ ಸಮಿತಿ ಈ ಮೇಲ್ಮನವಿ ಪತ್ರವನ್ನು ಭಾರತೀಯ ಮೀಡಿಯಾ ಹೌಸ್ ಗಳಿಗೆ ರವಾನಿಸಿದೆ.
ಸುಪ್ರೀಂ ಕೋರ್ಟ್ ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯ ಪ್ರವೇಶಕ್ಕೆ ಅನುಮತಿ ನೀಡಿದ ಬಳಿಕ ಸೋಮವಾರದಂದು ದೇವಸ್ಥಾನವು ಎರಡನೇ ಬಾರಿಗೆ ತೆರೆಯಲಿದೆ. ಅಯ್ಯಪ್ಪ ಬ್ರಹ್ಮಚಾರಿಯಾಗಿದ್ದು 10-50 ವಯಸ್ಸಿನ ಮಹಿಳೆಯರು ದೇವರ ದರ್ಶನ ಮಾಡುವಂತಿಲ್ಲ ಎನ್ನುವ ಕುರಿತಂತೆ ಆಂದೋಲನ ನಡೆಯುತ್ತಿದ್ದು ಸಮಿತಿಯು ಇದೇ ವಾದವನ್ನು ಮುಂದಿಟ್ಟು ಮನವಿ ಸಲ್ಲಿಸಿದೆ.
"ಕರ್ತವ್ಯದ ನೆಪದಲ್ಲಿ ಮಹಿಳೆಯರನ್ನು ದೇವಸ್ಥಾನದ ಒಳಪ್ರವೇಶಿಸುವಂತೆ ಮಾಡುವುದರಿಂದ ಪರಿಸ್ಥಿತಿ ಇನ್ನಷ್ಟು ಜಟಿಲವಾಗಲಿದೆ.ಶಬರಿಮಲೆಗೆ ಮಹಿಳೆಯರ ಪ್ರವೇಶ ಸಂಬಂಧ ಭಕ್ತರ ನಿಲುವಿನ ಕುರಿತು ನಿಮಗೂ ಅರಿವಿದ್ದು ಪರಿಸ್ಥಿತಿ ಕೈಮೀರುವುದಕ್ಕೆ ನೀವು ಅವಕಾಶ ನೀಡುವುದಿಲ್ಲ ಎನ್ನುವ ಆಶಾಭಾವನೆ ನಮ್ಮದಾಗಿದೆ" ಪತ್ರದಲ್ಲಿ ಬರೆಯಲಾಗಿದೆ.
ಕಳೆದ ತಿಂಗಳು ಐದು ದಿನಗಳ ಕಾಲ ದೇವಸ್ಥಾನವನ್ನು ತೆರೆದಾಗ, ನ್ಯಾಯಾಲಯದ ಆದೇಶದ ಅನುಸಾರ ಮಾದ್ಯಮದಲ್ಲಿದ್ದ ಮಹಿಳಾ ವರದಿಗಾರ್ತಿಯರು ದೇವಸ್ಥಾನಕ್ಕೆ ತೆರಳಿ ವರದಿಗಾರಿಕೆಗೆ ಮುಂದಾದಾಗ ಅವರ ವಾಹನಗಳ ಂಏಲೆ ದಾಳಿ ನಡೆದಿತ್ತು. ಅಲ್ಲದೆ ಕೆಲ ಯುವ ಮಹಿಳೆಯರು ಪ್ರತಿಭಟನಾ ನಿರತರ ಭಯದಿಂದ ದರ್ಶನ ಪಡೆಯದೆಹಿಂತಿರುಗಬೇಕಾಗಿತ್ತು. 
ಪಂಪಾ, ನಿಲಕ್ಕಲ್, ಸನ್ನಿಧಾನಂ, ಇಳುವಂಗಲ್ ಸುತ್ತಮುತ್ತ ಶನಿವಾರದಿಂದ ಮಂಗಳವಾರದವರೆಗೆ ನಿಷೇಧಾಜ್ಞೆ ಹೇರಲಾಗಿದೆ.
ದೇವಾಲಯವು ಸೋಮವಾರ ಸಂಜೆ ತೆರೆಯಲ್ಪಡಲಿದ್ದು ಮಂಗಳವಾರ ರಾತ್ರಿ 10ಕ್ಕೆ ಮುಚ್ಚಲ್ಪಡುತ್ತದೆ. ತ್ರಿರುವಾಂಕೂರ್ ನ ಕಡೆಯ ರಾಜನಾದ ಚಿತ್ರ ತಿರುನಾಳ್ ಬಲರಾಮ ವರ್ಮ ಅವರ ಜನ್ಮದಿನದ ನಿಮಿತ್ತ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಲಿದೆ. ಇದಾಗ್ ನವೆಂಬರ್ 17ರಿಂದ ಈ ಸಾಲಿನ ವಾರ್ಷಿಕ ಯಾತ್ರೆಗಾಗಿ ದೇವಸ್ಥಾನ ತೆರೆಯಲಾಗುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com