ಎಕ್ಸಿಟ್ ಪರೀಕ್ಷೆ: 'ಗೇಟ್' ತೆರೆದರೆ ಮಾತ್ರ ಕೈ ಸೇರಲಿದೆ ಇಂಜಿನಿಯರಿಂಗ್ ಪದವಿ!

ಪ್ರತಿ ವರ್ಷವೂ 3,00 ಇಂಜಿನಿಯರಿಂಗ್ ಕಾಲೇಜುಗಳಿಂದ ಹೊರಬರುವ ಇಂಜಿನಿಯರ್ ಗಳ ಸಂಖ್ಯೆ 7 ಲಕ್ಷ ತಲುಪಿದ್ದು, ಇಂಜಿನಿಯರಿಂಗ್ ಪದವೀಧರರಿಗೆ ಉದ್ಯೋಗ ಸಿಗುವುದೇ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.
'ಗೇಟ್' ತೆರೆದರೆ ಮಾತ್ರ ಕೈ ಸೇರಲಿದೆ ಇಂಜಿನಿಯರಿಂಗ್ ಪದವಿ
'ಗೇಟ್' ತೆರೆದರೆ ಮಾತ್ರ ಕೈ ಸೇರಲಿದೆ ಇಂಜಿನಿಯರಿಂಗ್ ಪದವಿ
ಬೆಂಗಳೂರು: ಪ್ರತಿ ವರ್ಷವೂ 3,00 ಇಂಜಿನಿಯರಿಂಗ್ ಕಾಲೇಜುಗಳಿಂದ ಹೊರಬರುವ ಇಂಜಿನಿಯರ್ ಗಳ ಸಂಖ್ಯೆ 7 ಲಕ್ಷ ತಲುಪಿದ್ದು, ಇಂಜಿನಿಯರಿಂಗ್ ಪದವೀಧರರಿಗೆ ಉದ್ಯೋಗ ಸಿಗುವುದೇ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಈ ಬೆಳವಣಿಗೆಯನ್ನು ಗಮನಿಸಿರುವ ತಾಂತ್ರಿಕ ವಿದ್ಯಾಭ್ಯಾಸಕ್ಕಾಗಿ ಇರುವ ಅಖಿಲ ಭಾರತೀಯ ಪರಿಷತ್ (ಎಐಸಿಟಿಇ) ಗೇಟ್ ಪರೀಕ್ಷೆಯಲ್ಲಿ ತೇರ್ಗಡೆಗೊಂಡವರಿಗೆ ಮಾತ್ರವೇ ಇಂಜಿನಿಯರಿಂಗ್ ಪದವಿ ನೀಡುವುದಕ್ಕೆ ನಿರ್ಧರಿಸಿದೆ. 
2019-2020 ರಿಂದ ತಾಂತ್ರಿಕ ಕೋರ್ಸ್ ಗಳನ್ನು ಓದುವ ವಿದ್ಯಾರ್ಥಿಗಳಿಗೆ ಈ ನಿಯಮ ಅನ್ವಯವಾಗಲಿದ್ದು, ಗ್ರಾಜ್ಯೂಯೇಟ್ ಆಪ್ಟಿಟ್ಯೂಡ್ ಟೆಸ್ಟ್ ಇನ್ ಇಂಜಿನಿಯರಿಂಗ್ (ಗೇಟ್) ಪರೀಕ್ಷೆಯನ್ನು ತೇರ್ಗಡೆಗೊಳಿಸಿದವರಿಗಷ್ಟೇ ಇನ್ನು ಮುಂದಿನ ದಿನಗಳಲ್ಲಿ ಇಂಜಿನಿಯರಿಂಗ್ ಪದವಿ ಕೈಗೆ ಸೇರಲಿದೆ. ಗೇಟ್ ಪರೀಕ್ಷೆಯಲ್ಲಿ ತೇರ್ಗಡೆಯಾಗದವರು ಮತ್ತೊಮ್ಮೆ ಗೇಟ್ ಪರೀಕ್ಷೆ ಬರೆಯಬೇಕಾಗುತ್ತದೆ. 
ಎಐಟಿಇ ಸಭೆಯಲ್ಲಿ ಈ ನಿರ್ಣಯಕ್ಕೆ ಬರಲಾಗಿದ್ದು, ಒಮ್ಮತ ಮೂಡಿದ ಬಳಿಕ ಈ ಕುರಿತು ಅಧಿಕೃತ ಆದೇಶ ಹೊರಡಿಸಲಾಗುತ್ತದೆ. ಎಐಸಿಟಿಇ ನಿರ್ಧಾರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಕೆಲವರು ಈ ನಿರ್ಧಾರವನ್ನು ಸ್ವಾಗತಿಸಿದ್ದರೆ, ಇನ್ನೂ ಕೆಲವರು ಇದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಹೇಳಿದ್ದಾರೆ. ಆದರೆ ವಿದ್ಯಾರ್ಥಿಗಳು ಮಾತ್ರ ಈ ನಿರ್ಣಯವನ್ನು ವಿರೋಧಿಸುತ್ತಿದ್ದಾರೆ.
ಪದವಿಯ ಅಂತಿಮ ವರ್ಷದಲ್ಲಿ ಉದ್ಯೋಗಕ್ಕೆ ಆಯ್ಕೆಯಾದವರು, ಒಂದು ವೇಳೆ ಗೇಟ್ ಪರೀಕ್ಷೆಯಲ್ಲಿ ತೇರ್ಗಡೆಯಾಗದೇ ಇದ್ದರೆ ಪರಿಸ್ಥಿತಿ ಏನು ಎಂದು ಕಾಲೇಜಿನ ಪ್ರಾಂಶುಪಾಲರು ಎಐಟಿಇ ನಿರ್ಣಯವನ್ನು ಪ್ರಶ್ನಿಸಿದ್ದಾರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com