ಶಬರಿಮಲೆ: ನಿರ್ಬಂಧಿತ ವಯಸ್ಸಿನ ಮಹಿಳೆಯರು ಪೊಲೀಸ್ ಭದ್ರತೆಗಾಗಿ ಕೇಳಿಯೇ ಇಲ್ಲ!

ತಿರುವಂಕೂರು ರಾಜಮನೆತನದ ಕೊನೆಯ ರಾಜ ಚಿತ್ರಾ ತಿರುನಾಲ್ ಬಲರಾಮ ವರ್ಮ ಅವರ ಜನ್ಮದಿನದ ಹಿನ್ನೆಲೆಯಲ್ಲಿ ವಿಶೇಷ ಪೂಜೆಗಾಗಿ ಶಬರಿಮಲೆ ಅಯ್ಯಪ್ಪ ದೇವಾಲಯ ಸಂಜೆ 5 ಕ್ಕೆ ತೆರೆಯಲಿದ್ದು ಭದ್ರತೆಯನ್ನು
ಶಬರಿಮಲೆ: ನಿರ್ಬಂಧಿತ ವಯಸ್ಸಿನ ಮಹಿಳೆಯರು ಪೊಲೀಸ್ ಭದ್ರತೆಗಾಗಿ ಕೇಳಿಯೇ ಇಲ್ಲ!
ಶಬರಿಮಲೆ: ನಿರ್ಬಂಧಿತ ವಯಸ್ಸಿನ ಮಹಿಳೆಯರು ಪೊಲೀಸ್ ಭದ್ರತೆಗಾಗಿ ಕೇಳಿಯೇ ಇಲ್ಲ!
ತಿರುವಂಕೂರು ರಾಜಮನೆತನದ ಕೊನೆಯ ರಾಜ ಚಿತ್ರಾ ತಿರುನಾಲ್ ಬಲರಾಮ ವರ್ಮ ಅವರ ಜನ್ಮದಿನದ ಹಿನ್ನೆಲೆಯಲ್ಲಿ ವಿಶೇಷ ಪೂಜೆಗಾಗಿ ಶಬರಿಮಲೆ ಅಯ್ಯಪ್ಪ ದೇವಾಲಯ ಸಂಜೆ 5 ಕ್ಕೆ ತೆರೆಯಲಿದ್ದು ಭದ್ರತೆಯನ್ನು ಒದಗಿಸಲಾಗಿದೆ. 
ಕೇರಳದ ದೇವಸ್ವಂ ಸಚಿವ ಕಡಕಂಪಲ್ಲಿ ಸುರೇಂದ್ರನ್ ದೇವಾಲಯಕ್ಕೆ ಭೇಟಿ ನೀಡುವ ಆಸ್ತಿಕರಿಗೆ ಸಂಪೂರ್ಣ ಭದ್ರತೆಯನ್ನು ಒದಗಿಸುವುದಾಗಿ ಈಗಾಗಲೇ ಹೇಳಿದ್ದಾರೆ, ಆದರೆ ನಿರ್ಬಂಧಿತ ವಯಸ್ಸಿನ ಮಹಿಳೆಯರ್ಯಾರೂ ದೇವಾಲಯಕ್ಕೆ ತೆರಳಲು ಭದ್ರತೆಗಾಗಿ ಮನವಿ ಸಲ್ಲಿಸಿಲ್ಲ ಎಂದು ಸಚಿವರು ಹೇಳಿದ್ದಾರೆ. 
ಇನ್ನು ಮಹಿಳೆಯರು ಭೇಟಿ ನೀಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ, ದೇವಾಲಯದೊಂದಿಗೆ ನಿಕಟ ಸಂಪರ್ಕ ಹೊಂದಿರುವ ಪಂಡಲಂ ರಾಜ ಮನೆತನದವರು ದೇವಾಲಯದ ಬಳಿ ಅತಿ ಹೆಚ್ಚು ಭದ್ರತೆ ಒದಗಿಸಿರುವುದು ನೋವುಂಟುಮಾಡಿದೆ, ಪೊಲೀಸ್ ಭದ್ರತೆಯಲ್ಲಿ ಭಕ್ತಾದಿಗಳು ಪೂಜೆ ಸಲ್ಲಿಸಬೇಕಾಗಿರುವುದು ನೋವುಂಟು ಮಾಡಿದೆ ಎಂದು ರಾಜಕುಟುಂಬ ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com