ಮತ್ತೆ ಬಾಗಿಲು ತೆರೆದ ಶಬರಿಮಲೆ ಅಯ್ಯಪ್ಪ ದೇಗುಲ, ಈ ಬಾರಿ ಒಬ್ಬ ಮಹಿಳಾ ಭಕ್ತಾದಿಯೂ ಇಲ್ಲ!

ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಇಂದು ಸಂಜೆ 5 ಗಂಟೆ ಸುಮಾರಿನಲ್ಲಿ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದ ಬಾಗಿಲು...
ಪವಿತ್ರ 18 ಮೆಟ್ಟಿಲು ಹತ್ತುತ್ತಿರುವ ಭಕ್ತಾಧಿಗಳು
ಪವಿತ್ರ 18 ಮೆಟ್ಟಿಲು ಹತ್ತುತ್ತಿರುವ ಭಕ್ತಾಧಿಗಳು

ಕೇರಳ: ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಇಂದು ಸಂಜೆ 5 ಗಂಟೆ ಸುಮಾರಿನಲ್ಲಿ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದ ಬಾಗಿಲು ಮತ್ತೆ ತೆರೆದಿದ್ದು, ಭಕ್ತಾಧಿಗಳು ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.  ಈ ಬಾರಿ ಒಬ್ಬ ಮಹಿಳಾ ಭಕ್ತಾಧಿಯೂ ಕಂಡುಬಂದಿಲ್ಲ.

ತಿರುವಂಕೂರು ರಾಜಮನೆತನದ ಕೊನೆಯ ರಾಜ ಚಿತ್ರಾ ತಿರುನಾಲ್ ಬಲರಾಮ ವರ್ಮ ಅವರ ಜನ್ಮದಿನದ ಹಿನ್ನೆಲೆಯಲ್ಲಿ ವಿಶೇಷ ಪೂಜೆಗಾಗಿ ಶಬರಿಮಲೆ ಅಯ್ಯಪ್ಪ ದೇವಾಲಯ ಬಾಗಿಲು ತೆರೆದಿದ್ದು,  ಭಕ್ತಾಧಿಗಳು ಪವಿತ್ರ 18 ಮೆಟ್ಟಿಲುಗಳನ್ನು ಏರುವ ಮೂಲಕ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.   ನಾಳೆ ಸಂಜೆ ಮತ್ತೆ ದೇಗುಲದ ಬಾಗಿಲು ಬಂದ್ ಆಗಲಿದೆ.

ಎಲ್ಲಾ ವಯೋಮಾನದ ಮಹಿಳೆಯರಿಗೂ ಅಯ್ಯಪ್ಪ  ದೇಗುಲ ಪ್ರವೇಶಿಸಲು ಅವಕಾಶ ಕಲ್ಪಿಸಬೇಕೆಂಬ ಸುಪ್ರೀಂಕೋರ್ಟ್ ತೀರ್ಪು ಅನುಷ್ಠಾನ ಹಿನ್ನೆಲೆಯಲ್ಲಿ ಕಳೆದ ತಿಂಗಳ ಅಕ್ಟೋಬರ್ 17 ರಿಂದ 22ರವರೆಗೂ ಹಿಂದೂಪರ ಸಂಘಟನೆಗಳು ಕೇರಳ ಸರ್ಕಾರದ ವಿರೋಧ ತೀವ್ರ ಪ್ರತಿಭಟನೆ, ಹಿಂಸಾಚಾರ ನಡೆಸಿದ್ದರಿಂದ ಈ ಬಾರಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಈ ಬಾರಿ 20 ಸದಸ್ಯರನ್ನೊಳಗೊಂಡ ಕಮಾಂಡೊ ಪಡೆ, 100 ಮಹಿಳೆಯರು ಸೇರಿದಂತೆ ಸುಮಾರು 2 ಸಾವಿರದ 300 ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.

ಅಯ್ಯಪ್ಪ ಸ್ವಾಮಿ ದೇಗುಲದ ಸಂಕೀರ್ಣದಲ್ಲಿ 15 ಮಂದಿಗ ಮಹಿಳಾ ಸಿಬ್ಬಂದಿಯೂ ನಿಯೋಜಿಸಿರುವುದಾಗಿ ಎಂದು ಭದ್ರತೆ ಉಸ್ತುವಾರಿ ವಹಿಸಿರುವ ಐಜಿ ಅಜಿತ್  ಕುಮಾರ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com