ಬಳ್ಳಾರಿಯಲ್ಲಿ ಬಿಜೆಪಿ ಸೋಲಿಗೆ ರೆಡ್ಡಿಯೇ ಮುಳುವಾದರಾ?

ಕಾಂಗ್ರೆಸ್ ನ ಭದ್ರಕೋಟೆಯಾಗಿದ್ದ ಬಳ್ಳಾರಿ ಕ್ಷೇತ್ರವನ್ನು ಬಿಜೆಪಿಯ ತೆಕ್ಕೆಗೆ ತಂದಿದ್ದ ಜನಾರ್ದನ ರೆಡ್ಡಿ ಈಗ ಅದೇ ಕ್ಷೇತ್ರದಲ್ಲಿ ಬಿಜೆಪಿಗೆ ಮುಳುವಾಗಿದ್ದಾರಾ? ಎಂಬ ಬಗ್ಗೆ ವಿಶ್ಲೇಷಣೆ ನಡೆದಿದೆ.
ಜನಾರ್ದನ ರೆಡ್ಡಿ
ಜನಾರ್ದನ ರೆಡ್ಡಿ
Updated on
ಬೆಂಗಳೂರು: ಕಾಂಗ್ರೆಸ್ ನ ಭದ್ರಕೋಟೆಯಾಗಿದ್ದ ಬಳ್ಳಾರಿ ಕ್ಷೇತ್ರವನ್ನು ಬಿಜೆಪಿಯ ತೆಕ್ಕೆಗೆ ತಂದಿದ್ದ ಜನಾರ್ದನ ರೆಡ್ಡಿ ಈಗ ಅದೇ ಕ್ಷೇತ್ರದಲ್ಲಿ ಬಿಜೆಪಿಗೆ ಮುಳುವಾಗಿದ್ದಾರಾ? ಎಂಬ ಬಗ್ಗೆ  ವಿಶ್ಲೇಷಣೆ ನಡೆದಿದೆ. 
ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆಗೂ ಮುನ್ನ ಆಪರೇಷನ್ ಕಮಲ ಆರೋಪ ಎದುರಿಸುತ್ತಿದ್ದ ರೆಡ್ಡಿ ಈ ಬಾರಿಯ ಉಪಚುಣಾವಣೆಯ ಪ್ರಚಾರದ ವೇಳೆಯಲ್ಲಿ ಜನಾರ್ದನ ರೆಡ್ಡಿ, ಸಿಎಂ ಸಿದ್ದರಾಮಯ್ಯ ವಿರುದ್ಧ ವೈಯಕ್ತಿಕ ವಾಗ್ದಾಳಿ ನಡೆಸಿ ಪಕ್ಷಕ್ಕೆ ಮುಜುಗರ ಉಂಟು ಮಾಡಿದ್ದರು.  ರೆಡ್ಡಿ ಹೇಳಿಕೆಗೆ ಸ್ವತಃ ಬಿಜೆಪಿ ನಾಯಕರೂ ಖಂಡಿಸಿದ್ದರು. ರೆಡ್ಡಿ ಹೇಳಿಕೆ ಪಕ್ಷಕ್ಕೆ ಡ್ಯಾಮೇಜ್ ಉಂಟು ಮಾಡಿದ್ದು ಒಂದೆಡೆಯಾದರೆ ಶ್ರೀರಾಮುಲು ಏಕಾಂಗಿಯಾಗಿ ಚುನಾವಣೆಯ ನೇತೃತ್ವ ವಹಿಸಿದ್ದೂ ಸಹ ಪಕ್ಷದ ಸೋಲಿನ ಮೇಲೆ ಪರಿಣಾಮ ಬೀರಿದೆ. 
ಇದೇ ವೇಳೆ ವಾಲ್ಮೀಕಿ ಸಮುದಯಾದ ಮತಗಳನ್ನು ಕ್ರೋಡಿಕರಿಸಲು ಹೋಗಿ ಬಿಜೆಪಿ ರೂಪಿಸಿದ್ದ ತಂತ್ರ ಪಕ್ಷಕ್ಕೆ ಮುಳುವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗೆ ಕಾರಣವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಆದರೆ ಬಿಜೆಪಿ ನಾಯಕರು ರೆಡ್ಡಿ ರನ್ನು ಸಮರ್ಥಿಸಿಕೊಂಡಿದ್ದು, ರೆಡ್ಡಿ ಹೇಳಿಕೆಯಿಂದ ಪಕ್ಷಕ್ಕೆ ಯಾವುದೇ ಹಿನ್ನಡೆಯುಂಟಾಗಿಲ್ಲ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com