ಆರ್ ಬಿಐ-ಸರ್ಕಾರ ತಿಕ್ಕಾಟ: ಕೇಂದ್ರದ ಪರ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಉಲ್ಲೇಖ!

ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ನಡೆಯನ್ನು ಸಮರ್ಥಿಸಿಕೊಳ್ಳುವಂತಹ ಉಲ್ಲೇಖವನ್ನು ಆರ್ಥಿಕ ತಜ್ಞ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಮಾಡಿದ್ದಾರೆ.
ಆರ್ ಬಿಐ-ಕೇಂದ್ರ ಸರ್ಕಾರ ನಡುವಿನ ತಿಕ್ಕಾಟ: ಮೋದಿ ಸರ್ಕಾರದ ಬೆನ್ನಿಗೆ ನಿಂತಿದೆ  ಮಾಜಿ ಪ್ರಧಾನಿ ಡಾ.ಸಿಂಗ್ ಉಲ್ಲೇಖ!
ಆರ್ ಬಿಐ-ಕೇಂದ್ರ ಸರ್ಕಾರ ನಡುವಿನ ತಿಕ್ಕಾಟ: ಮೋದಿ ಸರ್ಕಾರದ ಬೆನ್ನಿಗೆ ನಿಂತಿದೆ ಮಾಜಿ ಪ್ರಧಾನಿ ಡಾ.ಸಿಂಗ್ ಉಲ್ಲೇಖ!
ಆರ್ ಬಿಐ ಗೌರ್ನರ್ ಹಾಗೂ ಹಣಕಾಸು ಸಚಿವಾಲಯದ ನಡುವೆ ಉಂಟಾಗಿರುವ ಭಿನ್ನಾಭಿಪ್ರಾಯಗಳ ಬಗ್ಗೆ ವ್ಯಾಪಕ  ಚರ್ಚೆ ನಡೆಯುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ನಡೆಯನ್ನು ಸಮರ್ಥಿಸಿಕೊಳ್ಳುವಂತಹ ಉಲ್ಲೇಖವನ್ನು ಆರ್ಥಿಕ ತಜ್ಞ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಮಾಡಿದ್ದಾರೆ. 

ಡಾ. ಸಿಂಗ್ ಅವರ ಪುತ್ರಿ ಬರೆದಿರುವ ಸ್ಟ್ರಿಕ್ಟ್ಲಿ ಪರ್ಸನಲ್: ಮನಮೋಹನ್ ಸಿಂಗ್ ಆಡ್ ಗುರ್ಶರಣ್ ಪುಸ್ತಕದಲ್ಲಿ ಡಾ. ಸಿಂಗ್ ಆರ್ ಬಿಐ ಹಾಗೂ ಕೇಂದ್ರ ಸರ್ಕಾರದ ಬಗ್ಗೆ ಮಾತನಾಡುತ್ತಾ, ಆರ್ ಬಿಐ ಹಾಗೂ ಕೇಂದ್ರ ಸರ್ಕಾರದ ನಡುವೆ ಕೊಡುಕೊಳ್ಳುವಿಕೆ ಇದ್ದದ್ದೇ, ಆದರೆ ಹಣಕಾಸು ಸಚಿವರು ನಿರ್ದಿಷ್ಟ ಕ್ರಮ ಕೈಗೊಂಡರೆ ಅದನ್ನು ಮುಂದುವರೆಸಲೇಬೇಕು, ಹಣಕಾಸು ಸಚಿವರು ಹಾಗೂ ಆರ್ ಬಿಐ ಗೌರ್ನರ್ ನಡುವೆ ಎಂದಿಗೂ ಹಣಕಾಸು ಸಚಿವರದ್ದೇ ಮೇಲುಗೈ ಆಗಿರಲಿದೆ ಎಂದು ಡಾ.ಸಿಂಗ್ ಹೇಳಿದ್ದಾರೆ.
 
ಕೇಂದ್ರೀಯ ಬ್ಯಾಂಕ್ ನಲ್ಲಿ ತಮ್ಮ ಅವಧಿಯನ್ನು ನೆನಪಿಸಿಕೊಂಡಿರುವ ಡಾ.ಸಿಂಗ್, ಸರ್ಕಾರ ಹಾಗೂ ಆರ್ ಬಿಐ ನಡುವೆ ಕೊಡುಕೊಳ್ಳುವಿಕೆ ಇದ್ದದ್ದೇ ಕೆಲವೊಮ್ಮೆ ಆರ್ ಬಿಐ ಸರ್ಕಾರವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗುತ್ತದೆ. ಹಣಕಾಸು ಸಚಿವರಿಗಿಂತ ಮೇಲೆ ಆರ್ ಬಿಐ ಗೌರ್ನರ್ ಇರುವುದಿಲ್ಲ. ಹಣಕಾಸು ಸಚಿವರು ಸೂಚನೆ ನೀಡಿದರೆ ಅದನ್ನು ಆರ್ ಬಿಐ ಗೌರ್ನರ್ ನಿರಾಕರಿಸುವುದಕ್ಕೆ ಸಾಧ್ಯವಿಲ್ಲ, ಒಂದು ವೇಳೆ ನಿರಾಕರಿಸಬೇಕಿದ್ದರೆ ಕೆಲಸಕ್ಕೆ ರಾಜೀನಾಮೆ ನೀಡಬೇಕು ಎಂದು ಹೇಳಿದ್ದಾರೆ. ಈ ಮೂಲಕ ಆರ್ ಬಿಐ ಸೆಕ್ಷನ್ 7 ಕ್ಕೆ ಮೋದಿ ಸರ್ಕಾರದ ವಿತ್ತ ಸಚಿವಾಲಯ ಆರ್ ಬಿಐಗೆ ನಿರ್ದೇಶನ ನೀಡಿರುವ ಕ್ರಮವನ್ನು ಸಮರ್ಥಿಸಿಕೊಳ್ಳುವುದಕ್ಕೆ  ಸಂಬಂಧಿಸಿದಂತೆ  ಆರ್ಥಿಕ ತಜ್ಞರೂ ಆಗಿರುವ ಮಾಜಿ ಪ್ರಧಾನಿ ಡಾ. ಸಿಂಗ್ ಅವರ ಹೇಳಿಕೆಯೇ ಬಲವಾದ ಅಂಶವಾಗಿ ಸಿಕ್ಕಿದೆ. 

ಆರ್ ಬಿಐ ಕಾಯ್ದೆಯಲ್ಲಿರುವ ಸೆಕ್ಷನ್ 7 ನ್ನು ಬಳಕೆ ಮಾಡಿ ಕೇಂದ್ರ ಬ್ಯಾಂಕ್ ಗೆ ನಿರ್ದೇಶನ ಮಾಡುವ ಅಧಿಕಾರವನ್ನು ಕೇಂದ್ರ ಸರ್ಕಾರ ಎನ್ ಪಿಎ ವಿಷಯದಲ್ಲಿ ಚಲಾಯಿಸುತ್ತಿದೆ. ಇದು ಚರ್ಚೆಗೆ ಕಾರಣವಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com