ದೀಪಾವಳಿ ಪ್ರಯುಕ್ತ ವಾಘಾ ಗಡಿಯಲ್ಲಿ ಭಾರತ- ಪಾಕಿಸ್ತಾನ ಸೈನಿಕರಿಂದ ಸಿಹಿ ವಿನಿಮಯ

ದೀಪಾವಳಿ ಹಬ್ಬದ ಪ್ರಯುಕ್ತ ವಾಘಾ ಗಡಿ ಪ್ರದೇಶದಲ್ಲಿ ಭಾರತದ ಗಡಿ ಭದ್ರತಾ ಪಡೆ ಹಾಗೂ ಪಾಕಿಸ್ತಾನ ಯೋಧರು ಪರಸ್ಪರ ಸಿಹಿ ವಿನಿಮಯ ಮಾಡಿಕೊಂಡು ಶುಭಾಶಯ ಕೋರಿದರು.
ಸೈನಿಕರಿಂದ ಸಿಹಿ ವಿನಿಮಯದ ಚಿತ್ರ
ಸೈನಿಕರಿಂದ ಸಿಹಿ ವಿನಿಮಯದ ಚಿತ್ರ

ಪಂಜಾಬ್: ದೀಪಾವಳಿ ಹಬ್ಬದ ಪ್ರಯುಕ್ತ ವಾಘಾ ಗಡಿ ಪ್ರದೇಶದಲ್ಲಿ ಭಾರತದ ಗಡಿ ಭದ್ರತಾ ಪಡೆ ಹಾಗೂ ಪಾಕಿಸ್ತಾನ ಯೋಧರು ಪರಸ್ಪರ ಸಿಹಿ ವಿನಿಮಯ ಮಾಡಿಕೊಂಡು ಶುಭಾಶಯ ಕೋರಿದರು.

ಗಡಿಯಲ್ಲಿ ಕದನ ವಿರಾಮ ಉಲ್ಲಂಘನೆ,  ಒಳನುಸುಳುವಿಕೆ ಹೊರತಾಗಿಯೂ  ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ,  ಈದ್ ಮಿಲಾದ್,  ದೀಪಾವಳಿ ಮತ್ತಿತರ ರಾಷ್ಟ್ರೀಯ ಹಾಗೂ ಧಾರ್ಮಿಕ ಹಬ್ಬಗಳ ಸಂದರ್ಭಗಳಲ್ಲಿ ಭಾರತ ಹಾಗೂ ಪಾಕಿಸ್ತಾನ ಸೈನಿಕರು ಪ್ರತಿವರ್ಷ ಸಿಹಿ ವಿನಿಮಯ ಮಾಡಿಕೊಂಡು ಶುಭಾಶಯ ಕೋರಲಾಗುತ್ತದೆ.

ಇದಕ್ಕೂ ಮುನ್ನ ಭಾರತದ 72 ಸ್ವಾತಂತ್ರ್ಯೋತ್ಸವ ಹಾಗೂ ಈದ್ ಅಲ್ -ಅದ್ಹಾ ಹಬ್ಬದ ಸಂದರ್ಭದಲ್ಲಿ  ಉಭಯ ದೇಶಗಳ ಸೈನಿಕರು ಸಿಹಿ ವಿನಿಮಯ ಮಾಡಿಕೊಂಡಿದ್ದರು.

ಆದಾಗ್ಯೂ, ಗಡಿ ಭಾಗದಲ್ಲಿ ಕದನ ವಿರಾಮ ಉಲ್ಲಂಘನೆಯಂತಹ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ  ಬಾರಿಯ ಗಣರಾಜ್ಯೋತ್ಸವ ಸಂದರ್ಭದಲ್ಲಿ ಶುಭಾಶಯ ವಿನಿಮಯ ಮಾಡಿಕೊಳ್ಳುವುದಿಲ್ಲ ಎನ್ನಲಾಗುತ್ತಿದೆ.

2016ರಲ್ಲಿ ಭಾರತೀಯ ವಾಯುನೆಲೆ ಉರಿ ಮೇಲಿನ ದಾಳಿ ಹಿನ್ನೆಲೆಯಲ್ಲಿ ಆ ವರ್ಷ ಸಂಪ್ರದಾಯಿಕ ಸಿಹಿ ವಿನಿಮಯವನ್ನು ಸ್ಥಗಿತಗೊಳಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com