ರಾಮ ಜನ್ಮಭೂಮಿ ಬಗ್ಗೆ ಗೊಂದಲ ಇಲ್ಲ; ರಾಮ ಪ್ರತಿಮೆ ನಿರ್ಮಾಣಕ್ಕೆ 2 ಜಾಗಗಳು ಅಂತಿಮ: ಯೋಗಿ ಆದಿತ್ಯನಾಥ್

ದೀಪಾವಳಿ ಅಂಗವಾಗಿ ಭಗವಾನ್ ರಾಮನ ಪೂಜೆ ಸಲ್ಲಿಸಿರುವ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ರಾಮಜನ್ಮಭೂಮಿ ಬಗ್ಗೆ ಯಾವುದೇ ಗೊಂದಲ ಇಲ್ಲ ಎಂದು ಹೇಳಿದ್ದಾರೆ.
No confusion on Ram Janambhoomi, two spots finalised for Ram statue: Yogi Adityanath
No confusion on Ram Janambhoomi, two spots finalised for Ram statue: Yogi Adityanath
Updated on
ಅಯೋಧ್ಯೆ: ದೀಪಾವಳಿ ಅಂಗವಾಗಿ ಭಗವಾನ್ ರಾಮನ ಪೂಜೆ ಸಲ್ಲಿಸಿರುವ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ರಾಮಜನ್ಮಭೂಮಿ ಬಗ್ಗೆ ಯಾವುದೇ ಗೊಂದಲ ಇಲ್ಲ ಎಂದು ಹೇಳಿದ್ದಾರೆ. 
ಅಯೋಧ್ಯೆಯಲ್ಲಿ ದೇವಾಲಯವಿದೆ ಎಂಬುದು ನಿಮಗೆಲ್ಲರಿಗೂ ಗೊತ್ತೇ ಇದೆ. ಪೂಜೆ ಸಲ್ಲಿಸುವುದಕ್ಕಾಗಿ ಅಯೋಧ್ಯೆಗೆ ಬಂದಿದ್ದೆ. ಮಂದಿರ ಅಲ್ಲೇ ಇತ್ತು, ಅಲ್ಲೇ ಇರಲಿದೆ ಕೂಡ ಎಂದು ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಈಗಾಗಲೇ ರಾಮಜನ್ಮಭೂಮಿಯಲ್ಲಿ 
ದೇವಾಲಯವಿದೆ. ಅದನ್ನು ಹೇಗೆ ಅದ್ಧೂರಿಯಾಗಿ ರೂಪಿಸಬಹುದು ಎಂಬುದರ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ
ಇನ್ನು ಸರಯೂ ನದಿ ತೀರದಲ್ಲಿ ರಾಮನ ಪ್ರತಿಮೆ ನಿರ್ಮಾಣ ಮಾಡುವುದಕ್ಕೆ ಸಂಬಂಧಿಸಿದಂತೆಯೂ ಮಾತನಾಡಿರುವ ಯೋಗಿ ಆದಿತ್ಯನಾಥ್, ರಾಮನ ಪ್ರತಿಮೆ ನಿರ್ಮಾಣ ಮಾಡುವುದಕ್ಕಾಗಿ ಈಗಾಗಲೇ ಎರಡು ಜಾಗಗಳನ್ನು ಅಂತಿಮಗೊಳಿಸಲಾಗಿದೆ. ಅಯೋಧ್ಯೆಗೆ ಹೊಸ ಗುರುತನ್ನು ನೀಡುವ ರೀತಿಯಲ್ಲಿ ರಾಮನ ಪ್ರತಿಮೆ ವಿನ್ಯಾಸ ಮಾಡಲಾಗುವುದು ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com