ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ

ಚೀನಾ- ಭಾರತ ಗಡಿಯಲ್ಲಿ ಯೋಧರೊಂದಿಗೆ ಪ್ರಧಾನಿ ದೀಪಾವಳಿ ಆಚರಣೆ!

ಚೀನಾ -ಭಾರತ ಗಡಿಯಲ್ಲಿರುವ ಹರ್ಷಿಲ್ ಗೆ ಇಂದು ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ , ಇಂಡೋ ಟಿಬೆಟಿಯನ್ ಗಡಿ ಪೊಲೀಸರು ಹಾಗೂ ಸೈನಿಕರಿಗೆ ಸಿಹಿ ಹಂಚಿ ದೀಪಾವಳಿ ಹಬ್ಬ ಆಚರಿಸಿದರು.

ಉತ್ತರ್ ಖಂಡ್ : ಚೀನಾ -ಭಾರತ ಗಡಿಯಲ್ಲಿರುವ ಹರ್ಷಿಲ್ ಗೆ ಇಂದು  ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ , ಇಂಡೋ ಟಿಬೆಟಿಯನ್ ಗಡಿ ಪೊಲೀಸರು ಹಾಗೂ ಸೈನಿಕರೊಂದಿಗೆ ದೀಪಾವಳಿ ಹಬ್ಬ ಆಚರಿಸಿದರು.

ದೀಪಾವಳಿ ಹಬ್ಬದ ಪ್ರಯುಕ್ತ ಯೋಧರಿಗೆ ಶುಭಾಶಯ ಕೋರಿರುವ ಪ್ರಧಾನಿ, ದೂರದ ಹಿಮಾವೃತದ ಪ್ರದೇಶದಲ್ಲಿ    ಕರ್ತವ್ಯ ನಿರ್ವಹಿಸುತ್ತಿರುವ ಸೈನಿಕರು ರಾಷ್ಟ್ರದ ಬಲವನ್ನು ಶಕ್ತಗೊಳಿಸುತ್ತಿದ್ದಾರೆ ಮತ್ತು 125 ಕೋಟಿ ಭಾರತೀಯರ ಕನಸುಗಳು ಹಾಗೂ  ಭವಿಷ್ಯವನ್ನು ಸಂರಕ್ಷಿಸುತ್ತಿದ್ದಾರೆ ಎಂದು ಹೇಳಿದರು.

ಬೆಳಕಿನ ಹಬ್ಬ ದೀಪಾವಳಿ ಭಯವನ್ನು ಹೋಗಲಾಡಿಸಿ ಒಳ್ಳೆಯ ಬೆಳಕು ನೀಡಲಿ.  ಸೈನಿಕರ ಶಿಸ್ತು ಜನತೆಯಲ್ಲಿ ಭಯವನ್ನು ಹೋಗಲಾಡಿಸಿ ಭದ್ರತೆಯನ್ನು ಮೂಡಿಸುವಲ್ಲಿ ನೆರವಾಗಲಿ ಎಂದು ನರೇಂದ್ರ ಮೋದಿ ಆಶಿಸಿದರು.

ಸೈನಿಕರಿಗೆ ಸಿಹಿ ಹಂಚಿ ಸಂವಾದ ನಡೆಸಿದ  ಪ್ರಧಾನಿ, ಮಾಜಿ ಯೋಧರ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿರುವುದಾಗಿ ತಿಳಿಸಿದರು.

ಉತ್ತರ ಕಾಶಿ ಜಿಲ್ಲೆಯಲ್ಲಿ ಚೀನಾ- ಭಾರತ ಗಡಿಗೆ ಹತ್ತಿರದಲ್ಲಿರುವ ಹರ್ಷಿಲ್  7. 860 ಅಡಿ ಎತ್ತರ ಪ್ರದೇಶದಲ್ಲಿದೆ.

Related Stories

No stories found.

Advertisement

X
Kannada Prabha
www.kannadaprabha.com