ಜನರ ಜೊತೆ ಏಕೆ ನಾವು ವಿನಯವಾಗಿ ಮಾತನಾಡಬಾರದು? ರಾಜನಾಥ್ ಸಿಂಗ್

ದೂರು ನೀಡಲು ಠಾಣೆಗೆ ಬರುವ ಜನರೊಂದಿಗೆ ವಿನಯವಾಗಿ ವರ್ತಿಸಿ ಎಂದು ದೆಹಲಿ ಪೊಲೀಸರಿಗೆ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ...
ರಾಜನಾಥ್ ಸಿಂಗ್
ರಾಜನಾಥ್ ಸಿಂಗ್
ನವದೆಹಲಿ: ದೂರು ನೀಡಲು ಠಾಣೆಗೆ ಬರುವ ಜನರೊಂದಿಗೆ ವಿನಯವಾಗಿ ವರ್ತಿಸಿ ಎಂದು ದೆಹಲಿ ಪೊಲೀಸರಿಗೆ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ, 
ದೆಹಲಿ ಪೊಲೀಸರಿಗೆ ದೀಪಾವಳಿ ಹಿನ್ನೆಲೆಯಲ್ಲಿ 300 ಹೊಸ ರಾಫ್ತಾರ್ ಮೋಟಾರ್ ಸೈಕಲ್ ಬಿಡುಗಡೆ ಮಾಡಿ,  ಮಾತನಾಡಿದ ಅವರು, ಇಡಿ ದೇಶಕ್ಕೆ ದೆಹಲಿ ಪೊಲೀಸರು ಮಾದರಿಯಾಗಿರಬೇಕು ಎಂದು ಹೇಳಿದ್ದಾರೆ.
ಯಾರಾದರೂ ದೂರು ನೀಡಲು ಪೊಲೀಸ್ ಠಾಣೆಗೆ ಬಂದರೇ  ಅವರ ಬಳಿ ನಾವು ಏಕೆ ನೀವು ನಮ್ರತೆಯಿಂದ ವರ್ತಿಸಬಾರದೇಕೆ, ಅವರು ಗಂಟೆಗಟ್ಟಲೇ ಕಾದು ಕಾದು ಕುಳಿತು ದೂರು ನೀಡುತ್ತಾರೆ, ಅವರಿಗೆ ಒಂದು ಗ್ಲಾಸ್ ನೀರು ಬೇಕೆ ಎಂದು ಕೇಳಲು ನಮಗೆ ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಜನರ ಜದೊತೆ ಅಭಿವೃದ್ಧಿ ಸ್ನೇಹಿಯಾಗಿ ಪೊಲೀಸರು ವರ್ತಿಸಬೇಕು ಎಂದು ಹೇಳಿದ್ದಾರೆ. ದೂರು ನೀಡಲು ಬರುವ ಜನರಿಗೆ ಟೀ ನೀಡುವ ಉದ್ದೇಶದಿಂದ,  ಪೊಲೀಸ್ ಠಾಣೆಗಳಲ್ಲಿ ಟೀ ಅಂಗಡಿಗಳನ್ನು ತೆರೆಯಲು ಪೊಲೀಸ್ ಆಯುಕ್ತರಲ್ಲಿ ಮಾತನಾಡಿದ್ದೇನೆ, ಒಂದು ವೇಳೆ ಗೃಹ ಸಚಿವರ ನಿಧಿಯಿಂದ  ಅನುದಾನ ನೀಡಲು ಸಾಧ್ಯವಾದರೇ ಅದನ್ನು ಅದರ ವ್ಯವಸ್ಥೆ ಮಾಡುತ್ತೇನೆ ಎಂದು ಹೇಳಿದ್ದಾರೆ.
ಸಾಮಾನ್ಯ ಜನರ ಜೊತೆ ವರ್ತಿಸುವ ರೀತಿಯಲ್ಲಿ ಬದಲಾವಣೆಯಾಗಬೇಕು, ಅದರ ಕಡೆಗೆ ಹೆಚ್ಚಿನ ಗಮನ ಹರಿಸಬೇಕು, ದೂರು ನೀಡಲು ಠಾಣೆಗೆ ಬರುವ ಜನರನ್ನು ಗೌರವದಿಂದ ನಡೆಸಿಕೊಳ್ಳಬೇಕು ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com