ಅಪನಗದೀಕರಣ ಒಂದು ಯೋಜಿತ ಪಿತೂರಿ: ರಾಹುಲ್ ಗಾಂಧಿ

ಪ್ರಧಾನಿ ಮೋದಿಯವರ ಆಪ್ತ ಸ್ನೇಹಿತರ ಬಳಿಯಿದ್ದ ಕಪ್ಪು ಝಣವನ್ನು ಬಿಳಿಯಾಗಿಸಲು ನೋಟ್ ಬ್ಯಾನ್ ಎನ್ನುವ ಅಸ್ತ್ರವನ್ನು ಬಾಳಸಲಾಗಿತ್ತು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ರಾಹುಲ್ ಗಾಂಧಿ
ರಾಹುಲ್ ಗಾಂಧಿ
ನವದೆಹಲಿ: ಪ್ರಧಾನಿ ಮೋದಿಯವರ ಆಪ್ತ ಸ್ನೇಹಿತರ ಬಳಿಯಿದ್ದ ಕಪ್ಪು ಝಣವನ್ನು ಬಿಳಿಯಾಗಿಸಲು ನೋಟ್ ಬ್ಯಾನ್ ಎನ್ನುವ ಅಸ್ತ್ರವನ್ನು ಬಾಳಸಲಾಗಿತ್ತು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. 
ಕೇಂದ್ರದ ಮೋದಿ ಸರ್ಕಾರ ೫೦೦, ೧೦೦೦ ರು. ನೋಟುಗಳ ಅಮಾನ್ಯಗೊಳಿಸಿ ಇಂದು (ಗುರುವಾರ) ಎರಡು ವರ್ಷವಾಗಿದೆ. ಈ ಹಿನ್ನೆಲೆಯಲ್ಲಿ ವಿವಿಧ ರಾಜಕೀಯ ನಾಯಕರು ತಮ್ಮ ಪರ, ವಿರೋಧ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.  ಅದೇ ರೀತಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಚಿದಂಬರಂ ಸಹ ಮೋದಿ ಸರ್ಕಾರದ ಕ್ರಮವನ್ನು ಟೀಕಿಸಿದ್ದಾರೆ.
ಪ್ರಧಾನಿ ಮೋದಿಯವರ ಅಪನಗದೀಕರಣ ಎನ್ನುವುದು ಒಂದು ಯೋಜಿತ ಪಿತೂರಿಯಾಗಿತ್ತು. ಅವರ ಆಪ್ತ ಸ್ನೇಹಿತರ ಕಪ್ಪು ಹಣವನ್ನು ಬಿಳಿಯಾಗಿಸಲು "ನೋಟ್ ಬ್ಯಾನ್" ಎಂಬ ಅಸ್ತ್ರ ಪ್ರಯೋಗಿಸಲಾಗಿದೆ ಎಂದು ಟೀಕಿಸಿದ ರಾಹುಲ್ "ಇದರಲ್ಲಿ ಪ್ರಾಮಾಣಿಕತೆ, ಮುಗ್ದತೆ ಏನೂ ಇಲ್ಲ. ಯಾರೊಡನೆಯೂ ಚರ್ಚಿಸದೆ ಈ ಕ್ರಮಕ್ಕೆ ಮುಂದಾಗಿದ್ದ ಕೇಂದ್ರದ ಕ್ರಮ ರಾಷ್ಟ್ರಕ್ಕೆ ಮಾಡಿದ ಅವಮಾನ" ಅವರು ಹೇಳಿದ್ದಾರೆ.
ರಿಸರ್ವ್ ಬ್ಯಾಂಕ್ ವಶಕ್ಕೆ ಮೋದಿ ಸರ್ಕಾರ ಯತ್ನ
ಇದೇ ವೇಳೆ ಕಾಂಗ್ರೆಸ್ ನ ಇನ್ನೋರ್ವ ಮುಖಂಡ, ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಮಾತನಾಡಿ "ಮುಂಬರುವ ಲೋಕಸಭೆ ಚುನಾವಣೆಗೆ ಮುನ್ನ ರಿಸರ್ವ್ ಬ್ಯಾಂಕ್ ಅನ್ನು ವಶಕ್ಕೆ ಪಡೆಉಕೊಳ್ಳಲು ಮೋದಿ ಸರ್ಕಾರ ಯತ್ನಿಸಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಮೋದಿ ಸರ್ಕಾರ ಆರ್‌ಬಿಐ ವಶಕ್ಕೆ ಪಡೆದದ್ದೇ ಆದರೆ ಅದು ದೇಶದ ಆರ್ಥಿಕತೆಗೆ ಮಾರಕವಾಗಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
"ಮೋದಿ ಆರ್‌ಬಿಐ ಸ್ವಾಯತ್ತತೆಯನ್ನೇ ಹೊಸಕಿ ಹಾಕಲು ಯತ್ನಿಸಿದೆ ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com