'ಸೇವ್ ಅನಿಲ್ ಅಂಬಾನಿ ಪ್ರಾಜೆಕ್ಟ್' ಗಾಗಿ ಅವನಿಯನ್ನು ಕೊಲ್ಲಲಾಗಿದೆ: ರಾಜ್ ಠಾಕ್ರೆ

ಉದ್ಯಮಿ ಅನಿಲ್ ಅಂಬಾನಿ ಯವತ್ಮಾಲ್ ನಲ್ಲಿ ಆರಂಭಿಸಬೇಕೆಂದಿರುವ ಪ್ರಾಜೆಕ್ಟ್ ಅನ್ನು ರಕ್ಷಿಸಿಕೊಳ್ಳಲು ಬಿಜೆಪಿ ನೇತೃತ್ವದ ಮಹಾರಾಷ್ಟ್ರ ಸರ್ಕಾರ ಅವನಿ ...
ರಾಜ್ ಠಾಕ್ರೆ
ರಾಜ್ ಠಾಕ್ರೆ
ಮುಂಬಯಿ: ಉದ್ಯಮಿ ಅನಿಲ್ ಅಂಬಾನಿ ಯವತ್ಮಾಲ್ ನಲ್ಲಿ ಆರಂಭಿಸಬೇಕೆಂದಿರುವ ಪ್ರಾಜೆಕ್ಟ್ ಅನ್ನು ರಕ್ಷಿಸಿಕೊಳ್ಳಲು ಬಿಜೆಪಿ ನೇತೃತ್ವದ ಮಹಾರಾಷ್ಟ್ರ ಸರ್ಕಾರ ಅವನಿ ಹುಲಿಯನ್ನು ಕೊಂದಿದೆ ಎಂದು ಮಹಾರಾಷ್ಟ್ರ ನವ ನಿರ್ಮಾಣ ಸೇನೆ ಮುಖ್ಯಸ್ಥ ರಾಜ್ ಠಾಕ್ರೆ ಆರೋಪಿಸಿದ್ದಾರೆ.
ಆದರೆ ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಅಂಬಾನಿ ಗ್ರೂಪ್ ವಕ್ತಾರ ಯಾವತ್ಮಾಲ್ ನಲ್ಲಿ ನಾವು ಯಾವುದೇ ಪ್ರಾಜೆಕ್ಟ್ ಆರಂಭಿಸುವ ಉದ್ದೇಶ ಹೊಂದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.
ಅಂಬಾನಿ ಗ್ರೂಪ್ ಸ್ಥಾಪಿಸಲು ಉದ್ದೇಶಿಸಿರುವ ಪ್ರಾಜೆಕ್ಟ್ ಅವನಿ ಹುಲಿ ಸತ್ತ  ಪ್ರದೇಶದಿಂದ ತುಂಬಾ ದೂರದಲ್ಲಿದೆ ಎಂದು ಜಿಲ್ಲಾ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಾಜೆಕ್ಟ್ ಗೂ ಹುಲಿಯನ್ನು ಕೊಂದಿದ್ದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಅಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ, 
ಕಳೆದ 2 ವರ್ಷಗಳಲ್ಲಿ ಅವನಿ ಹುಲಿ 13 ಮಂದಿಯನ್ನು ಕೊಂದು ನರಭಕ್ಷಕನಾಗಿತ್ತು ಹೇಳಲಾಗುತ್ತಿದೆ. ಕಳೆದ ಶುಕ್ರವಾರ ಹುಲಿಯನ್ನು ಗುಂಡಿಟ್ಟು ಹತ್ಯೆ ಮಾಡಲಾಗಿತ್ತು. 
ಸೇವ್ ಅನಿಲ್ ಅಂಬಾನಿ ಪ್ರಾಜೆಕ್ಟ್ ಗಾಗಿ ಅವನಿಯನ್ನು ಕೊಲ್ಲಲಾಗಿದೆ, ಹುಲಿಯಿಂದ ಸಾವನ್ನಪ್ಪಿದವರ ಬಗ್ಗೆ ನನಗೆ ನೋವಿದೆ, ಆದರೆ ಪ್ರಪಂಚಾದ್ಯಂತ ಜನರು ಅರಣ್ಯ ಒತ್ತುವರಿ ಮಾಡಿಕೊಂಡ ಕಾರಣ, ನಾಡಿಗೆ ಬರುವ ಹುಲಿಗಳು ಮನುಷ್ಯರ ಮೇಲೆ ಆಕ್ರಮಣ ಮಾಡುತ್ತಿವೆ ಎಂದು ರಾಜ್ ಠಾಕ್ರೆ ದೂರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com