ಮೊದಲು ಬಿಜೆಪಿಯಲ್ಲಿರುವ ಮುಸ್ಲಿಂ ನಾಯಕರ ಹೆಸರು ಬದಲಿಸಿ: ಯೋಗಿಗೆ ಯುಪಿ ಸಚಿವ ತರಾಟೆ

ನಗರಗಳ ಹೆಸರು ಬದಲಾವಣೆಗೆ ಸಂಬಂಧಿಸಿದಂತೆ ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ....
ಓಂ ಪ್ರಕಾಶ್ ರಾಜಭರ್
ಓಂ ಪ್ರಕಾಶ್ ರಾಜಭರ್
ಲಖನೌ: ನಗರಗಳ ಹೆಸರು ಬದಲಾವಣೆಗೆ ಸಂಬಂಧಿಸಿದಂತೆ ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಉತ್ತರ ಪ್ರದೇಶ ಸಚಿವ ಓಂ ಪ್ರಕಾಶ್ ರಾಜಭರ್ ಅವರು, ಮೊದಲು ಬಿಜೆಪಿಯಲ್ಲಿರುವ ಮುಸ್ಲಿಂ ನಾಯಕರ ಹೆಸರು ಬದಲಾವಣೆ ಮಾಡಲಿ ಎಂದು ಶನಿವಾರ ಹೇಳಿದ್ದಾರೆ.
ವಿವಿಧ ನಗರಗಳ ಹಾಗೂ ಸ್ಥಳಗಳ ಹೆಸರು ಬದಲಾವಣೆ ಮಾಡುವ ಮುನ್ನ ಬಿಜೆಪಿ ತನ್ನ ಮುಸ್ಲಿಂ ನಾಯಕರಾದ ಮುಖ್ತಾರ್ ಅಬ್ಬಾಸ್ ನಖ್ವಿ, ಶಹನ್ವಾಜ್ ಹುಸೇನ್ ಉತ್ತರ ಪ್ರದೇಶ ಸಚಿವ ಮೊಹಿಸಿನ್ ರಾಜಾ ಅವರ ಹೆಸರು ಬದಲಾವಣೆ ಮಾಡಲಿ ಎಂದು ಬಿಜೆಪಿ ಮಿತ್ರ ಪಕ್ಷ ಸುಹೆಲ್ದೇವ್ ಭಾರತೀಯ ಸಮಾಜ ಪಕ್ಷದ ಮುಖ್ಯಸ್ಥ ರಾಜಭರ್ ಅವರು ಹೇಳಿದ್ದಾರೆ.
ಹಿಂದೂಳಿದವರ ಮತ್ತು ತುಳಿತಕ್ಕೊಳಗಾದವರ ಗಮನ ಬೆರೆಡೆ ಸೆಳೆಯುವ ಉದ್ದೇಶದಿಂದ ನಗರ ಮತ್ತು ಸ್ಥಳಗಳ ಹೆಸರು ಬದಲಾವಣೆ ಮಾಡುತ್ತಿದೆ ಎಂದಿರುವ ರಾಜಭರ್ ಅವರು, ಮುಸ್ಲಿಮರು ನಿರ್ಮಿಸಿದ ಕೆಂಪು ಕೋಟೆ, ತಾಜ್ ಮಹಲ್ ಅನ್ನು ನಾವು ಬಿಟ್ಟು ಬಿಡಬೇಕೆ? ಎಂದು ಪ್ರಶ್ನಿಸಿದ್ದಾರೆ.
ಕಳೆದ ಮಂಗಳವಾರವಷ್ಟೇ ಯೋಗಿ ಆಧಿತ್ಯನಾಥ್ ಅವರು ಫೈಜಾಬಾದ್ ಅನ್ನು ಅಯೋಧ್ಯ ಎಂದು ಬದಲಾಯಿಸಿದ್ದರು. ಅಲ್ಲದೆ ಮುಗಲ್ ಸರಾಯಿ ರೈಲ್ವೆ ನಿಲ್ಡಾಣವನ್ನು ದೀನ್ ದಯಾಳ್ ಉಪಾಧ್ಯಾಯ ಎಂದು ಮತ್ತು ಅಲಹಬಾದ್ ಅನ್ನು ಪ್ರಯಾಗರಾಜ್ ಎಂದು ಬದಲಾಯಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com