ಅಗ್ರಾಕ್ಕೆ 'ಅಗ್ರಾವಾನ್' ಹೆಸರಿಡುವಂತೆ ಬಿಜೆಪಿ ಶಾಸಕನಿಂದ ಉತ್ತರ ಪ್ರದೇಶ ಮುಖ್ಯಮಂತ್ರಿಗೆ ಪತ್ರ

ವಿಶ್ವ ವಿಖ್ಯಾತ ತಾಜ್ ಮಹಲ್ ಇರುವ ಅಗ್ರಾವನ್ನು ಅಗ್ರಾವಾನ್ ಎಂದು ಹೆಸರು ಬದಲಾವಣೆ ಮಾಡುವಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಬಿಜೆಪಿ ಶಾಸಕರೊಬ್ಬರು ಪತ್ರ ಬರೆದಿದ್ದಾರೆ.
ತಾಜ್ ಮಹಲ್
ತಾಜ್ ಮಹಲ್

ಅಗ್ರಾ: ಅಲಹಾಬಾದ್ ನಗರವನ್ನು ಪ್ರಯಾಗ್ ರಾಜ್ ಹಾಗೂ ಪೈಜಾಬಾದ್ ನಗರವನ್ನು  ಅಯೋಧ್ಯೆ ಎಂದು ಹೆಸರು ಬದಲಾವಣೆ ಮಾಡಿದಂತೆ ವಿಶ್ವ ವಿಖ್ಯಾತ ತಾಜ್ ಮಹಲ್ ಇರುವ ಅಗ್ರಾವನ್ನು  ಅಗ್ರಾವಾನ್   ಎಂದು ಹೆಸರು ಬದಲಾವಣೆ ಮಾಡುವಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ  ಯೋಗಿ ಆದಿತ್ಯನಾಥ್ ಅವರಿಗೆ  ಬಿಜೆಪಿ ಶಾಸಕರೊಬ್ಬರು ಪತ್ರ ಬರೆದಿದ್ದಾರೆ.

ಮಹಾರಾಜ ಅಗ್ರಾಸೇನ್  ಬೆಂಬಲಿಗರು  ಹೆಚ್ಚಾಗಿ ಹೊಂದಿರುವ ಮತ್ತು ಅನೇಕ ಅರಣ್ಯವಿರುವ ಅಗ್ರಾವನ್ನು ಕೂಡಲೇ  ಅಗ್ರಾವಾನ್ ಆಗಿ ಮರುನಾಮಕರಣ ಮಾಡಬೇಕೆಂದು ಉತ್ತರ ಅಗ್ರಾದ ಬಿಜೆಪಿ ಶಾಸಕ ಜಗನ್ ಪ್ರಸಾದ್  ಗಾರ್ಗ್ ಪತ್ರದಲ್ಲಿ ತಿಳಿಸಿದ್ದಾರೆ.

ಅಗ್ರಾವಾನ್ ಆಗಿ ಹೆಸರಾಗಿದ್ದ ಈ ವಲಯದ ಬಗ್ಗೆ ಮಹಾಭಾರತದಲ್ಲೂ ಉಲ್ಲೇಖವಿದೆ. ಆದರೆ. ಅಕ್ಬರಾಬಾದ್ ಆಗಿ ಬದಲಾವಣೆ ಆಗಿದ್ದ ಅಗ್ರಾವಾನ್ ನಂತರ ಅಗ್ರಾ ಆಗಿ ಕರೆಯಲಾಗುತಿತ್ತು. ಇದಕ್ಕೆ ಸೂಕ್ತ ಅರ್ಥವಿಲ್ಲದಿರುವುದರಿಂದ ಅಗ್ರಾವಾನ್ ಆಗಿ ಹೆಸರು ಬದಲಾಯಿಸುವಂತೆ ಅವರು ತಿಳಿಸಿದ್ದಾರೆ.

 ದೆಹಲಿಯಿಂದ 200 ಕಿಲೋ ಮೀಟರ್ ದೂರದಲ್ಲಿರುವ  ಅಗ್ರಾ, ತಾಜ್ ಮಹಲ್ ನಿಂದ ಪ್ರಸಿದ್ಧಿ ಪಡೆದುಕೊಂಡಿದೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com