'ನಪುಂಸಕ' ಎಂದರೆ ಮಾನಹಾನಿ: ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು

ಒಬ್ಬ ವ್ಯಕ್ತಿಯನ್ನು "ನಪುಂಸಕ" ಅಥವಾ "ಶಂಡ" ಎಂದು ಕರೆಯುವುದು ಆತನ ಪುರುಷತ್ವವನ್ನು ಕೆಟ್ಟದಾಗಿ ಬಿಂಬಿಸಿದಂತೆ.ಆತನಿಗೆ ಇದರಿಂದ ಮಾನಸಿಕ ನೋವು ತರಬಹುದು.
ಬಾಂಬೆ ಹೈಕೋರ್ಟ್
ಬಾಂಬೆ ಹೈಕೋರ್ಟ್
ನಾಗ್ಪುರ್(ಮಹಾರಾಷ್ಟ್ರ): ಒಬ್ಬ ವ್ಯಕ್ತಿಯನ್ನು "ನಪುಂಸಕ" ಅಥವಾ "ಶಂಡ" ಎಂದು ಕರೆಯುವುದು ಆತನ ಪುರುಷತ್ವವನ್ನು ಕೆಟ್ಟದಾಗಿ ಬಿಂಬಿಸಿದಂತೆ.ಆತನಿಗೆ ಇದರಿಂದ ಮಾನಸಿಕ ನೋವು ತರಬಹುದು. ಇದರಿಂದ ಅದು ಮಾನಹಾನಿ ಪ್ರಕರಣವಾಗಲಿದೆ ಎಂದು ಬಾಂಬೆ ಹೈಕೋರ್ಟ್ ನಾಗ್ಪುರ ಪೀಠ ಮಹತ್ವದ ತೀರ್ಪು ನೀಡಿದೆ.
ನ್ಯಾಯಮೂರ್ತಿ ಎಸ್.ಬಿ. ಶುಕ್ರೆ ಈ ತೀರ್ಪು ನೀದಿದ್ದು ವ್ಯಕ್ತಿಯೊಬ್ಬನನ್ನು "ನಪುಂಸಕ" ಎನ್ನುವು ಅವನ ಪುರುಷತ್ವಕ್ಕೆ ಮಾಡುವ ಅವನ್ಮಾನವಾಗಿದ್ದು ಇದಕ್ಕಾಗಿ ಆತ ರತೀಯ ದಂಡ ಸಂಹಿತೆಯ ಸೆಕ್ಷನ್ 500 ಅಡಿಯಲ್ಲಿ ಮಾನನಷ್ಟ ಪ್ರಕರಣ ದಾಖಲಿಸಿ ಆರೋಪಿಗೆ ಶಿಕ್ಷೆಗಾಗಿ ವಿನಂತಿಸಬಹುದಾಗಿದೆ ಎಂದರು.
ವಿವಾಹ ಸಂಬಂಧ ಬೇರ್ಪಟ್ಟು ಪ್ರತ್ಯೇಕವಾಗಿದ್ದ ದಂಪತಿಗಳ ನಡುವಿನ ವಿವಾದದ ಸಂಬಂಧ ನ್ಯಾಯಾಲಯ ಈ ತಿರ್ಪು ನೀಡಿದೆ.ಪತಿಯ ದೂರಿನನ್ವಯ ಅಪರಾಧ ವಿಚಾರಣೆ ಪ್ರಕ್ರಿಯೆ ಪ್ರಾರಂಭಿಸಿದ ಕ್ರಮವನ್ನು ತಡೆಹಿಡಿಯಲು ಕೋರಿ ಪತ್ನಿ ನ್ಯಾಯಾಲಯದ ಮೊರೆ ಹೋಗಿದ್ದಳು. ಇದನ್ನು ತಿರಸ್ಕರಿಸಿರುವ ಬಾಂಬೆ ಹೈಕೋರ್ಟ್ "ಇದು ಮಾನಹಾನಿ ಪ್ರಕರಣ ದಾಖಲಿಸಲು ಅವಕಾಶವಾಗಲಿದೆ" ಎಂದಿದೆ.
ಬಾಂಬೆ ಹೈಕೋರ್ಟ್ ನ ಈ ತೀರ್ಪು ವರದಕ್ಷಿಣೆ ಕಿರುಕುಳ, ಕೌಟುಂಬಿಕ ದೌರ್ಜನ್ಯ, ನಪುಂಸಕತ್ವದ ಕಾರಣಕ್ಕಾಗಿ ವಿಚ್ಚೇದನ ಕೇಳುವ ಮಹಿಳೆಯರ ವಿರುದ್ಧ ಪ್ರಕರಣ ದಾಖಲಿಸಲು ಅನುಕೂಲವಾಗಲಿದೆ.
ಪ್ರಕರಣ  ಸಂಬಂಧ ಪತ್ನಿ ವಿರುದ್ಧ ಪ್ರಾರಂಭವಾಗಿರುವ ವಿಚಾರಣೆಯಲ್ಲಿ ಹಸ್ತಕ್ಷೇಪ ಮಾಡಲು ಕೋರ್ಟ್ ನಿರಾಕರಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com