
ಪಣಜಿ: ಅನಾರೋಗ್ಯಕ್ಕೊಳಗಾಗಿರುವ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರಿಗೆ ಇಲ್ಲಿನ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ನಿಯಮಿತ ತಪಾಸಣೆ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಕಾರ್ಯಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಪ್ಯಾನ್ ಕ್ರಿಯಾಟಿಕ್ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ 62 ವರ್ಷದ ಪರಿಕ್ಕರ್, ದೆಹಲಿಯ ಏಮ್ಸ್ ನಿಂದ ಚಿಕಿತ್ಸೆ ಪಡೆದು ಬಂದ ಬಳಿಕ ಅಕ್ಟೋಬರ್ 14 ರಿಂದ ಪಣಜಿ ಬಳಿಯ ಖಾಸಗಿ ನಿವಾಸದಲ್ಲಿಯೇ ಚೇತರಿಸಿಕೊಳ್ಳುತ್ತಿದ್ದಾರೆ.
ನಿಯಮಿತ ತಪಾಸಣೆಗಾಗಿ ಇಂದು ಬೆಳಗ್ಗೆ ಗೋವಾ ವೈದ್ಯಕೀಯ ಕಾಲೇಜ್ ಮತ್ತು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು ಎಂದು ಪರಿಕ್ಕರ್ ಆಪ್ತ ಕಾರ್ಯದರ್ಶಿ ರೂಪೇಶ್ ಕಾಮತ್ ತಿಳಿಸಿದ್ದಾರೆ.
ಕೆಲ ಪರೀಕ್ಷೆಗಳ ಹಿನ್ನೆಲೆಯಲ್ಲಿ ಒಂದು ತಾಸು ಆಸ್ಪತ್ರೆಯಲ್ಲಿಯೇ ಪರಿಕ್ಕರ್ ಇದ್ದರು ಎಂದು ಮೂಲಗಳಿಂದ ತಿಳಿದುಬಂದಿದೆ. ಆದಾಗ್ಯೂ, ತಪಾಸಣೆಯ ಮಾಹಿತಿಯನ್ನು ನೀಡಿಲ್ಲ. ಗೌಪ್ಯವಾಗಿ ಇಡಲಾಗಿದೆ.
Advertisement