ಮಹಾರಾಷ್ಟ್ರ: ಸಾಲಬಾಧೆ ತಾಳದೆ ತಾನೇ ಸಿದ್ದಪಡಿಸಿದ ಚಿತೆಗೆ ಹಾರಿ ರೈತ ಆತ್ಮಹತ್ಯೆ!

ಸಾಲ ಬಾಧೆ ತಾಳಲಾರದೆ ರೈತನೊಬ್ಬ ತನಗಾಗಿ ಚಿತೆಯೊಂದನ್ನು ಸಿದ್ದಪಡಿಸಿಕೊಂಡಿದ್ದ ಚಿತೆಗೆ ತಾನೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘೋರ ದುರಂತ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ರೈತ ಆತ್ಮಹತ್ಯೆ
ರೈತ ಆತ್ಮಹತ್ಯೆ
ಮುಂಬೈ: ಸಾಲ ಬಾಧೆ ತಾಳಲಾರದೆ ರೈತನೊಬ್ಬ ತನಗಾಗಿ ಚಿತೆಯೊಂದನ್ನು ಸಿದ್ದಪಡಿಸಿಕೊಂಡಿದ್ದ ಚಿತೆಗೆ ತಾನೇ ಬೆಂಕಿ  ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘೋರ ದುರಂತ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ತುರತಿ ಗ್ರಾಮದ 65 ವರ್ಷ ವಯಸ್ಸಿನ ರೈತನೊಬ್ಬ ಹೀಗೆ ತನಗೆ ತಾನೇ ಚಿತೆ ಸೃಷ್ಟಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಆತ್ಮಹತ್ಯೆಗೆ ಶರಣಾದ ರೈತನನ್ನು ಪೋತಣ್ಣ ರಾಮುಲು ಬೋಲ್ಪಿಲ್ವಾಡ್ ಎಂದು ಗುರುತಿಸಲಾಗಿದೆ.
ಮೃತ ರೈತನು ಬ್ಯಾಂಕ್ ಗಳಿಂದ ಸಾಲ ಪಡೆದಿದ್ದರು. ಬೆಳೆ ನಷ್ಟವಾಗಿ ಸಾಲ ತೀರಿಸಲಾಗದೆ ಹೋದದ್ದಕ್ಕೆ ಮನನೊಂದು ಈ ಅಮಾನುಷ ನಿರ್ಧಾರಕ್ಕೆ ಬಂದಿದ್ದಾರೆ. ಶುಕ್ರವಾರ ಬೆಳಿಗ್ಗೆ ತನ್ನ ಜಮೀನಿನಲ್ಲಿ ಕಟ್ಟಿಗೆಗಳಿಂದ ಚಿತೆ ತಯಾರಿಸಿಕೊಂಡ ರೈತ ಬಳಿಕ ಆ ಚಿತೆಗೆ ಬೆಂಕಿ ಹಚ್ಚಿ ತಾನು ಬೆಂಕಿಯಲ್ಲಿ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇದಕ್ಕೆ ಮುನ್ನ ಮನೆಯಲ್ಲಿ ತಾನು ಜಮ್ಮೀನಿಗೆ ತೆರಳಿದ್ದಾಗಿ ಹೇಳಿದ್ದ ಅವರು ತಡರಾತ್ರಿಯಾದರೂ ಬರದೆ ಹೋದಾಗ ಅನುಮಾನಗೊಂಡ ಮನೆಯವರು ಶನಿವಾರ ಬೆಳಿಗ್ಗೆ ಜಮೀನಿಗೆ ಬಂದಾಗ ಘಟನೆ ಬಗ್ಗೆ ತಿಳಿದಿದೆ.
ಇನ್ನು ಮೃತ ರೈತ ಪೋತಣ್ಣ ರಾಜ್ಯ ಸರ್ಕಾರದ ಸಾಲ ಮನ್ನಾ ಯೋಜನೆಗಾಗಿ ಆನ್ ಲೈನ್ ನಲ್ಲಿ ನೊಂದಾಯಿಸಿದ್ದರು. ಆದರೆ ಅವರ ಹೆಸರು ಫಲಾನುಭವಿಗಳ ಪಟ್ಟಿಯಲ್ಲಿರಲಿಲ್ಲ ಎನ್ನಲಾಗಿದೆ.ಇದರಿಂದ ಮನನೊಂದ ಅವರು ಆತ್ಮಹತ್ಯೆಯಂತಹಾ ನಿರ್ಧಾರಕ್ಕೆ ಬಂದಿದ್ದಾಗಿ ತಿಳಿದುಬಂದಿದೆ.
ಘಟನೆ ಸಂಬಂಧ ಉಮ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com