#MeToo: ಪ್ರಿಯಾ ರಮಣಿ ಆರೋಪದಿಂದ ಎಂಜೆ ಅಕ್ಬರ್ ಚಾರಿತ್ರ್ಯಕ್ಕೆ ಧಕ್ಕೆ - ಮಾಜಿ ಸಹೋದ್ಯೋಗಿ ಹೇಳಿಕೆ

ಕೇಂದ್ರದ ಮಾಜಿ ಸಚಿವ ಎಂ. ಜೆ. ಅಕ್ಬರ್ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿರುವ ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧ ಅಕ್ಬರ್ ಮಾಜಿ ಸಹೋದ್ಯೋಗಿಯೊಬ್ಬರು ನ್ಯಾಯಾಲಯದಲ್ಲಿ ಮಾನನಷ್ಟ ಮೊಕದಮ್ಮೆ ದಾಖಲಿಸಿದ್ದಾರೆ.
ಎಂ. ಜೆ. ಅಕ್ಬರ್,  ಪ್ರಿಯಾ ರಮಣಿ
ಎಂ. ಜೆ. ಅಕ್ಬರ್, ಪ್ರಿಯಾ ರಮಣಿ

ನವದೆಹಲಿ: ಕೇಂದ್ರದ ಮಾಜಿ ಸಚಿವ ಎಂ. ಜೆ. ಅಕ್ಬರ್ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿರುವ ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧ ಅಕ್ಬರ್  ಮಾಜಿ  ಸಹೋದ್ಯೋಗಿಯೊಬ್ಬರು ನ್ಯಾಯಾಲಯದಲ್ಲಿ ಮಾನನಷ್ಟ ಮೊಕದಮ್ಮೆ ದಾಖಲಿಸಿದ್ದಾರೆ.

ಪ್ರಿಯಾ ರಮಣಿ ಮಾಡಿರುವ ಆರೋಪದಿಂದ ಎಂ. ಜೆ. ಅಕ್ಬರ್  ಚಾರಿತ್ರ್ಯಕ್ಕೆ ಧಕ್ಕೆಯಾಗಿದೆ ಎಂದು  ಸಂಡೇ ಗಾರ್ಡೀಯನ್  ಪತ್ರಿಕೆ ಸಂಪಾದಕಿ ಜೊಯೀತಾ ಬಸು ನ್ಯಾಯಾಲಯದಲ್ಲಿ  ಹೇಳಿದ್ದಾರೆ.

 ರಮಣಿ ಮಾಡಿರುವ ಎಲ್ಲಾ ಟ್ವೀಟ್ ಗಳು ಎಂ. ಜಿ. ಅಕ್ಬರ್ ಅವರ ಚಾರಿತ್ರ್ಯ ಹಾಳು ಮಾಡುವ ದುರುದ್ದೇಶದಿಂದ ಕೂಡಿದ್ದಾಗಿವೆ ಎಂದು ದೆಹಲಿಯ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಸಾಮರ್ ವಿಶಾಲ್ ಅವರ ಮುಂದೆ  ನುಡಿದಿದ್ದಾರೆ.

ಅಕ್ಟೋಬರ್ 10 ಹಾಗೂ 13 ರಂದು ಪ್ರಿಯಾ ರಮಣಿ ಮಾಡಿರುವ ಟ್ವೀಟ್ ಗಳನ್ನು ನೋಡಿದ್ದೇನೆ. ಎಲ್ಲಾ ಟ್ವೀಟ್ ಗಳಲ್ಲಿಯೂ ಎಂ. ಕೆ. ಅಕ್ಬರ್ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಪ್ರಯತ್ನ ಮಾಡಲಾಗಿದೆ ಎಂದು  ಆರೋಪಿಸಿದ್ದಾರೆ.

ಎಂ. ಜೆ. ಅಕ್ಬರ್ ಅವರೊಂದಿಗೆ 20 ವರ್ಷದವರೆಗೂ ಕೆಲಸ ಮಾಡಿದ್ದೇನೆ. ಸಿಬ್ಬಂದಿ ಜೊತೆಗೆ ಎಂದಿಗೂ ಕೂಡಾ ಅನುಚಿತವಾಗಿ ನಡೆದುಕೊಂಡಿರಲಿಲ್ಲ. ಅವರಿಗೂ ಯಾವಾಗಲೂ ಉನ್ನತ ಗೌರವ ನೀಡುತ್ತೇನೆ. ಅವರೊಬ್ಬ ಬುದ್ದಿಮತ್ತೆಯ ಶಿಕ್ಷಕರು ಎಂದು ಬಸ್ ಹೇಳಿದ್ದಾರೆ.

ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಡಿಸೆಂಬರ್ 7ಕ್ಕೆ ನ್ಯಾಯಾಲಯ ಮುಂದೂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com