ರಾಫೆಲ್ ಡೀಲ್ ನಿರ್ಧಾರ ಪ್ರಕ್ರಿಯೆಯ ದಾಖಲೆಗಳನ್ನು ಸುಪ್ರೀಂ ಕೋರ್ಟ್ ಗೆ ನೀಡಿದ ಕೇಂದ್ರ

ಫ್ರಾನ್ಸ್ ನಿಂದ 36 ರಾಫೆಲ್ ಫೈಟರ್ ಜೆಟ್ ಗಳ ಖರೀದಿಗೆ ಸಂಬಂಧಿಸಿ ತೆಗೆದುಕೊಳ್ಳಲಾದ ನಿರ್ಧಾರಗಳ ಕುರಿತ ದಾಖಲೆಗಳನ್ನು ಕೇಂದ್ರ ಸರ್ಕ್ಕಾರ ಸುಪ್ರೀಂ ಕೋರ್ಟ್ ಗೆ ಹಸ್ತಾಂತರಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಫ್ರಾನ್ಸ್ ನಿಂದ  36 ರಾಫೆಲ್ ಫೈಟರ್ ಜೆಟ್ ಗಳ  ಖರೀದಿಗೆ ಸಂಬಂಧಿಸಿ ತೆಗೆದುಕೊಳ್ಳಲಾದ ನಿರ್ಧಾರಗಳ ಕುರಿತ ದಾಖಲೆಗಳನ್ನು ಕೇಂದ್ರ ಸರ್ಕ್ಕಾರ ಸುಪ್ರೀಂ ಕೋರ್ಟ್ ಗೆ ಹಸ್ತಾಂತರಿಸಿದೆ.
"ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯ ವಿವರಗಳು" ಎನ್ನುವ ಶೀರ್ಷಿಕೆ ಹೊಂದಿರುವ ದಾಕಲೆಯನ್ನು ಸರ್ಕಾರ ಕೋರ್ಟ್ ಗೆ ನೀಡಿದ್ದು ದಾಖಲೆಯು ರಕ್ಷಣಾ ಖರೀದಿ ಪ್ರಕ್ರಿಯೆ -2013ರ ಮುಂದುವರಿದ ಭಾಗವಾಗಿ ಬಂದಿದೆ ಎಂದು ವಿವರಿಸಿದೆ.
ವೈಮಾನಿಕ ಇಲಾಖೆ ಹಾಗೂ ರಕ್ಷಣಾ ಪಡೆಗಳ ಸಾಮಗ್ರಿ ಖರೀದಿಸುವಾಗ ಅನುಸರಿಸುವ ಅನುಮೋದನಾ ಕ್ರಮಗಳನ್ನು ರಕ್ಷಣಾ ವಿಮಾ ಪ್ರಕ್ರಿಯೆ (ಡಿಪಿಪಿ) ಯನ್ನು ಸಂಪೂರ್ಣವಾಗಿ ಅನುಸರಿಸಲಾಗಿದೆ ಎಂದು ಸರ್ಕಾರ ಹೇಳಿದೆ.
ಒಪ್ಪಂದಕ್ಕೆ ಸಹಿ ಹಾಕುವ ಮುನ್ನ ಭಾರತೀಯ ತಂಡವು ಫ್ರೆಂಚ್ ಸರ್ಕಾರದೊಡನೆ ಸುಮಾರು ಒಂದು ವರ್ಷ ಕಾಲ ಮಾತುಕತೆ ನಡೆಸಿದ್ದು, ಸಂಪುಟ ಸಮಿತಿಯ ಅನುಮೋದನೆ ಹಾಗೂ ಹಣಕಾಸು ಪ್ರಾಧಿಕಾರದ ಅನುಮೋದನೆಯನ್ನು ಪಡೆದಿದೆ  ಎಂದು ದಾಖಲೆಗಳು ತಿಳಿಸಿವೆ.
ಸುಪ್ರೀಂ ಕೋರ್ಟ್ ಅಕ್ಟೋಬರ್ 31ರ ಆದೇಶದ ಅನುಸಾರ ಸರ್ಕಾರ ಈ ದಾಖಲೆಗಳನ್ನು ಕೋರ್ಟ್ ಗೆ ಹಸ್ತಾಂತರಿಸಿದೆ.
ಜೆಟ್ ಗಳ ಖರೀದಿಸುವ ಬಗ್ಗೆ ಮಾಡಿದ ನಿರ್ಧಾರದ ಹಂತಗಳನ್ನು ಒಳಗೊಂಡಂತೆ ಸರ್ಕಾರವು "ನ್ಯಾಯಸಮ್ಮತ" ಸಾರ್ವಜನಿಕ ವೇದಿಕೆಯಲ್ಲಿ ಸಾಧ್ಯವಾಗುವ ಕ್ರಮಗಳನ್ನು ತೆಗೆದುಕೊಂಡಿದ್ದಾದರೆ ಇದರ ವಿವರಗಳನ್ನು ತಿಳಿಸುವಂತೆ ಕೇಳಿದ್ದ ಕೋರ್ಟ್ ಗಿ 10 ದಿನಗಳೊಳಗೆ ಮೊಹರು ಮಾಡಲಾದ ಲಕೋಟೆಯಲ್ಲಿ ದಾಖಲೆಗಳನ್ನು ಸಲ್ಲಿಸುವಂತೆ ಸರ್ಕಾರಕ್ಕೆ ಆದೇಶ ನೀಡಿತ್ತು.
ಪ್ರಕರಣದ ಮುಂದಿನ ವಿಚಾರಣೆಯನ್ನು ನವೆಂಬರ್ 14ಕ್ಕೆ ಮುಂದೂಡಿದೆ. ಅಲ್ಲದೆ ಜೆಟ್ ಖರೀದಿಗೆ ಸಂಬಂಧಿಸಿ ಖರೀದಿಯ ಬೆಲೆಗಳು "ವಿಶೇಷ"ವಾಗಿದ್ದು ಅದನ್ನು ನ್ಯಾಯಾಲಯದಲ್ಲಿ ಹಂಚಿಕೊಳ್ಳುವುದು ಸಾಧ್ಯವಿಲ್ಲವಾದರೆ ಸರ್ಕಾರ ಈ ಕುರಿತಂತೆ ಅಫಿಡವಿಟ್ ಸಲ್ಲಿಸಬೇಕು ಎಂದು ಹೇಳಿದೆ. .
ವಕೀಲರಾದ ಮನೋಹರ್ ಲಾಲ್ ಶರ್ಮಾ ಮತ್ತು ವಿನೀತ್ ಧಂಡಾ ರಾಫೆಲ್ ಒಪ್ಪಂದದ ಸೂಕ್ತ ತನಿಖೆಗೆ ಕೋರಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೆ ಎಎಪಿ ಸಂಸದ ಸಂಜಯ್ ಸಿಂಗ್ ಕೂಡ  ತನಿಖೆಗೆ ಆಗ್ರಹಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದರು.
ಮಾಜಿ ಕೇಂದ್ರ ಸಚಿವರಾದ ಯಶವಂತ್ ಸಿನ್ಹಾ, ಅರುಣ್ ಶೌರಿ ಮತ್ತು ಶಾಂತ್ ಭೂಷಣ್ ಕೂಡಾ  ರಾಫೆಲ್ ತನಿಖೆಗೆ ಸಂಬಂಧಿಸಿ ಜಂಟಿ ಅರ್ಜಿಯೊಂದನ್ನು ಸಲ್ಲಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com