75 ರೈಲ್ವೆ ನಿಲ್ದಾಣಗಳಲ್ಲಿ 100 ಅಡಿ ಎತ್ತರದ ತ್ರಿವರ್ಣ ಧ್ವಜಸ್ತಂಭ ಸ್ಥಾಪನೆಗೆ ಇಲಾಖೆ ಆದೇಶ

ಈ ವರ್ಷದ ಅಂತ್ಯದೊಳಗೆ ಮುಂಬೈಯ ಏಳು ಕಡೆ ಸೇರಿದಂತೆ ದೇಶದ 75 ರೈಲು ನಿಲ್ದಾಣಗಳಲ್ಲಿ 100 ಅಡಿ ಎತ್ತರದಲ್ಲಿ ತ್ರಿವರ್ಣ ಧ್ವಜಸ್ತಂಭ ಸ್ಥಾಪನೆಗೆ ಭಾರತೀಯ ರೈಲ್ವೆ ನಿರ್ಧರಿಸಿದೆ.
ತ್ರಿವರ್ಣ ಧ್ವಜ
ತ್ರಿವರ್ಣ ಧ್ವಜ

ನವದೆಹಲಿ: ಈ ವರ್ಷದ ಅಂತ್ಯದೊಳಗೆ ಮುಂಬೈಯ ಏಳು ಕಡೆ ಸೇರಿದಂತೆ ದೇಶದ 75 ರೈಲು ನಿಲ್ದಾಣಗಳಲ್ಲಿ  100 ಅಡಿ ಎತ್ತರದಲ್ಲಿ ತ್ರಿವರ್ಣ ಧ್ವಜಸ್ತಂಭ ಸ್ಥಾಪನೆಗೆ   ಭಾರತೀಯ ರೈಲ್ವೆ ನಿರ್ಧರಿಸಿದೆ.

ಅಕ್ಟೋಬರ್ 22 ರಿಂದಲೇ ಇದು ಜಾರಿಗೆ ಬರುವಂತೆ  ರೈಲ್ವೆ ಮಂಡಳಿ ಆದೇಶ ಹೊರಡಿಸಿದ್ದು, ಎಲ್ಲಾ ರೈಲ್ವೆ ವಲಯಗಳಿಗೂ ವರ್ಗಾಯಿಸಲಾಗಿದೆ.

ಮುಂದಿನ ತಿಂಗಳೊಳಗೆ ರಾಷ್ಟ್ರ ಧ್ವಜ ಅಳವಡಿಕೆ ಕಾರ್ಯ ಪೂರ್ಣಗೊಳಿಸುವಂತೆ  ಸಂಬಂಧಿತ ಆಡಳಿತ ಮಂಡಳಿ  ಹೊರಡಿಸಿರುವ ಆದೇಶದಲ್ಲಿ ತಿಳಿಸಿದೆ.

ಈ ಆದೇಶ ಹೊರಡಿಸಿರುವ ರೈಲ್ವೆ ಮಂಡಳಿ ಕಾರ್ಯಕಾರಿ ನಿರ್ದೇಶಕ ವಿವೇಕ್ ಸಕ್ಸೇನಾ, ಎಲ್ಲಾ  ಎ1 ದರ್ಜೆಯ ರೈಲ್ವೆ ನಿಲ್ದಾಣಗಳಲ್ಲಿ 100 ಅಡಿ ಎತ್ತರದಲ್ಲಿ ರಾಷ್ಟ್ರ ಧ್ವಜನ ಹಾರಾಟ ನಡೆಸಲು ನಿರ್ಧರಿಸಲಾಗಿದೆ. ಮುಂದಿನ ತಿಂಗಳೊಳಗೆ ಕಾರ್ಯ ಪೂರ್ಣಗೊಳಿಸುವಂತೆ ತಿಳಿಸಲಾಗಿದೆ ಎಂದು ಹೇಳಿದ್ದಾರೆ.

ನಿಲ್ದಾಣದಲ್ಲಿನ ವೃತ್ತದಲ್ಲಿ ಧ್ವಜ ಹಾಕಬೇಕಾಗುತ್ತದೆ. ಬೆಳಕಿನ ವ್ಯವಸ್ಥೆ ಇರುವಂತೆ ನೋಡಿಕೊಳ್ಳಬೇಕಾಗುತ್ತದೆ. ಈ ಧ್ವಜಕ್ಕೆ ರೈಲ್ವೆ ಸಂರಕ್ಷಣಾ ಪಡೆಯಿಂದ ಭದ್ರತಾ ವ್ಯವಸ್ಥೆ ಒದಗಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.

ಆದೇಶದ ಪ್ರತಿ ದೊರೆತಿದ್ದು, ಧ್ವಜ ಸ್ತಂಭ ಸ್ಥಾಪನೆಗೆ ಜಾಗ ಹುಡುಕಲಾಗುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ರೈಲ್ವೆ ಮಂಡಳಿ ಆದೇಶ ದೊರೆತಿದ್ದು, ನೀಡಿರುವ ಗಡವಿನೊಳಗೆ ಉತ್ಸಾಹದಿಂದ ಧ್ವಜ ಸ್ತಂಭ ಸ್ಥಾಪನೆ ಕಾರ್ಯ ಪೂರ್ಣಗೊಳಿಸಲಾಗುವುದು ಎಂದು  ಪಶ್ಚಿಮ ರೈಲ್ವೆ ಮುಖ್ಯ ವಕ್ತಾರ ರವೀಂದರ್ ಬಾಕರ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com