ಭಾರತದ ಸಂಸತ್ತು
ಭಾರತದ ಸಂಸತ್ತು

ಡಿ.11ರಿಂದ ಜ.8ರವರೆಗೆ ಚಳಿಗಾಲದ ಅಧಿವೇಶನಕ್ಕೆ ಕ್ಯಾಬಿನೆಟ್ ಸಮಿತಿ ಶಿಫಾರಸು

ಈ ಸಾಲಿನ ಸಂಸ್ತ್ತು ಚಳಿಗಾಲದ ಅಧಿವೇಶನವು ಡಿಸೆಂಬರ್ 11ರಿಂದ ಜನವರಿ 8ರ ವರೆಗೆ ನಡೆಸುವಂತೆ ಸಂಸದೀಯ ವ್ಯವಹಾರಗಳ ನಿರ್ವಹಣೆಯ ಕ್ಯಾಬಿನೆಟ್ ಸಮಿತಿ (ಸಿಸಿಪಿಎ) ಶಿಫಾರಸು ಮಾಡಿದೆ
ನವದೆಹಲಿ: ಈ ಸಾಲಿನ ಸಂಸ್ತ್ತು ಚಳಿಗಾಲದ ಅಧಿವೇಶನವು ಡಿಸೆಂಬರ್ 11ರಿಂದ ಜನವರಿ 8ರ ವರೆಗೆ ನಡೆಸುವಂತೆ ಸಂಸದೀಯ ವ್ಯವಹಾರಗಳ ನಿರ್ವಹಣೆಯ ಕ್ಯಾಬಿನೆಟ್ ಸಮಿತಿ (ಸಿಸಿಪಿಎ)  ಶಿಫಾರಸು ಮಾಡಿದೆ 
ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ನೇತೃತ್ವದ ಸಿಸಿಪಿಎ ಮಂಗಳವಾರ ರಾತ್ರಿ ಸಿಂಗ್ ನಿವಾಸದಲ್ಲಿ ಸೇರಿದ್ದ ಸಭೆಯ ವೇಳೆ ಈ ಸಂಬಂಧ ಚರ್ಚೆ ನಡೆಸಿದೆ.
ಸಂಸತ್ತಿನ ಚಳಿಗಾಲದ ಅಧಿವೇಶನ ಸಾಮಾನ್ಯವಾಗಿ ನವೆಂಬರ್ ನಲ್ಲಿ ಪ್ರಾರಂಭವಾಗುತ್ತಿತ್ತು. ಆದರೆ ಈ ಬಾರಿ ಡಿಸೆಂಬರ್ ನಲ್ಲಿ  ಪ್ರಾರಂಭವಾಗಲಿದೆ. ರಾಜಸ್ಥಾನ, ಮಧ್ಯ ಪ್ರದೇಶ ಸೇರಿ ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆಗಳು ನಡೆಯುತ್ತಿರುವ ಕಾರಣದಿಂದ ಅಧಿವೇಶನ ವಿಳಂಬವಾಗಿದೆ ಎಂದು ಅಧಿಕೃತ ಮೂಲಗಳು ಹೇಳಿದೆ.

Related Stories

No stories found.

Advertisement

X
Kannada Prabha
www.kannadaprabha.com