ನೋಟು ಅಮಾನ್ಯೀಕರಣ ಸ್ವಾತಂತ್ರ ಭಾರತದ ಅತಿದೊಡ್ಡ ಹಗರಣ: ರಾಹುಲ್ ಗಾಂಧಿ

ನೋಟು ಅಮ್ಯಾನೀಕರಣ ಸ್ವಾತಂತ್ರ ಭಾರತದ ಅತಿ ದೊಡ್ಡ ಹಗರಣ ಎಂದಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಬಡವರ ಹಣವನ್ನು ಲೂಟಿ ಮಾಡಿ ಅದನ್ನು ಕೆಲವೇ ಶ್ರೀಮಂತರಿಗೆ ನೀಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ರಾಹುಲ್ ಗಾಂಧಿ
ರಾಹುಲ್ ಗಾಂಧಿ
Updated on

ಡಿಯೋರಿ : ನೋಟು ಅಮ್ಯಾನೀಕರಣ ಸ್ವಾತಂತ್ರ ಭಾರತದ ಅತಿ ದೊಡ್ಡ ಹಗರಣ ಎಂದಿರುವ ಎಐಸಿಸಿ  ಅಧ್ಯಕ್ಷ ರಾಹುಲ್ ಗಾಂಧಿ  ಪ್ರಧಾನಿ ನರೇಂದ್ರ ಮೋದಿ ಬಡವರ ಹಣವನ್ನು ಲೂಟಿ ಮಾಡಿ ಅದನ್ನು  ಕೆಲವೇ ಶ್ರೀಮಂತರಿಗೆ ನೀಡುತ್ತಿದ್ದಾರೆ  ಎಂದು ಗಂಭೀರ ಆರೋಪ ಮಾಡಿದ್ದಾರೆ.

ನವೆಂಬರ್ 28 ರಂದು  ಚುನಾವಣೆ ನಡೆಯಲಿರುವ ಮಧ್ಯಪ್ರದೇಶ ಚುನಾವಣೆ ಹಿನ್ನೆಲೆಯಲ್ಲಿ ಡಿಯೋರಿಯಲ್ಲಿಂದು  ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿನ ಭ್ರಷ್ಟಾಚಾರ ತಡೆಗಟ್ಟುವ ಬಗ್ಗೆ ಹಾಗೂ ದೇಶದ ಕಾವಲುಗಾರ ಎಂಬ ಬಗ್ಗೆ ಮಾತನಾಡುವುದಿಲ್ಲ. ಒಂದು ವೇಳೆ ಮೋದಿ ಚೌಕಿದಾರ ಎಂದರೆ ಚೌಕಿದಾರ ಕಳ್ಳ ಎಂದು ದೇಶದ ಜನತೆ ಹೇಳುತ್ತಾರೆ ಎಂದರು.

ವಾಯುಪಡೆ ಮುಖ್ಯಸ್ಥರು ಹಾಗೂ ರಕ್ಷಣಾ ಸಚಿವರಿಗೆ ಮಾಹಿತಿ ನೀಡಿದೆ ನರೇಂದ್ರ ಮೋದಿ ಹೆಚ್ ಎಎಲ್ ನಿಂದ ಕಡಿಮೆ ಬೆಲೆಯಲ್ಲಿ ವಿಮಾನ ಖರೀದಿಸದೆ ಡೆಸಾಲ್ಟ್ ವಿಮಾನಯಾನ ಕಂಪನಿಯಿಂದ ದೊಡ್ಡ ಮೊತ್ತದಲ್ಲಿ  ರಾಫೇಲ್ ಯುದ್ದ ವಿಮಾನ ಖರೀದಿಸುತ್ತಿದ್ದಾರೆ ಎಂದು ಹೇಳಿದರು.

ರಾಫೆಲ್ ಯುದ್ದ ವಿಮಾನ ಖರೀದಿ ಒಪ್ಪಂದದಲ್ಲಿ ಪ್ರಧಾನಿ ನರೇಂದ್ರ ಮೋದಿ  ಅನಿಲ್ ಅಂಬಾನಿಗೆ 30 ಸಾವಿರ ಕೋಟಿ ರೂಪಾಯಿ ನೀಡಿದ್ದಾರೆ. ಇದನ್ನ ದೇಶದ ಕಾವಲುದಾರರೇ ಮಾಡಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com