ಕೇರಳ: ಶಬರಿಮಲೆ ಹೋರಾಟಗಾರ್ತಿ ರೆಹನಾ ಪಾತಿಮಾ ನಿರೀಕ್ಷಣಾ ಜಾಮೀನು ಅರ್ಜಿ ವಜಾ

ಶಬರಿಮಲೆ ಹೋರಾಟಗಾರ್ತಿ ರೆಹನಾ ಪಾತಿಮಾ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕೇರಳ ಹೈಕೋರ್ಟ್ ಇಂದು ವಜಾಗೊಳಿಸಿದೆ.
ರೆಹನಾ ಪಾತಿಮಾ
ರೆಹನಾ ಪಾತಿಮಾ
ಕೇರಳ: ಶಬರಿಮಲೆ  ಹೋರಾಟಗಾರ್ತಿ ರೆಹನಾ ಪಾತಿಮಾ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕೇರಳ ಹೈಕೋರ್ಟ್ ಇಂದು ವಜಾಗೊಳಿಸಿದೆ.
ಅಯ್ಯಪ್ಪ ಸ್ವಾಮಿ ದೇಗುಲಕ್ಕೆ 10 ರಿಂದ 50 ವರ್ಷದೊಳಗೆ ಮಹಿಳೆಯರಿಗೆ ಅವಕಾಶ ನೀಡಿ ಸುಪ್ರೀಂಕೋರ್ಟ್ ಆದೇಶ ನೀಡಿದ ಬಳಿಕ  ಅಕ್ಟೋಬರ್ ತಿಂಗಳಲ್ಲಿ ಪೂಜೆ ನಿಮಿತ್ತ ದೇವಾಲಯ ತೆರೆದಾಗ ಪಾತಿಮಾ ಶಬರಿಮಲೆ ಪ್ರವೇಶಿಸಲು ಯತ್ನಿಸಿದ್ದರು.
ರೆಹನಾ ಪಾತಿಮಾ ತನ್ನ ಫೇಸ್ ಬುಕ್ ಖಾತೆಯಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ರಾಧಕೃಷ್ಣ ಮೆನನ್ ಎಂಬವರು ಪಥನಂತಿಟ್ಟ ಠಾಣೆಯಲ್ಲಿ ದೂರು ದಾಖಲಿಸಿದ್ದರು.  ಐಪಿಸಿ  ಸೆಕ್ಷನ್ 295 ಎ ಅಡಿಯಲ್ಲಿ ಪಾತಿಮಾ ವಿರುದ್ಧ ಪ್ರಕರಣ ದಾಖಲಾಗಿತ್ತು.
ಬಂಧನದ ನಿರೀಕ್ಷೆಯಲ್ಲಿರುವ ಪಾತಿಮಾ ಹೈಕೋರ್ಟ್ ನಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ಆದರೆ ಈ ಅರ್ಜಿ ವಜಾಗೊಳಿಸಿರುವ ನ್ಯಾಯಾಲಯ, ಪೊಲೀಸರು ಸೂಕ್ತ  ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದೆ.
ಪಾತಿಮಾ ಮಾಡೆಲ್ ಹಾಗೂ ಹೋರಾಟಗಾರ್ತಿಯಾಗಿದ್ದು, ನೈತಿಕ ನೀತಿ ವಿರುದ್ಧ 2014ರಲ್ಲಿ ಕೊಚ್ಚಿಯಲ್ಲಿ ಕಿಸ್ ಆಫ್ ಲವ್ ಚಳುವಳಿಯಲ್ಲಿ ತೊಡಗಿಸಿಕೊಂಡಿದ್ದರು. ಅಕ್ಟೋಬರ್ 19 ರಂದು ಇಬ್ಬರು ಮಹಿಳೆಯರೊಂದಿಗೆ  ಅಯ್ಯಪ್ಪ ಸ್ವಾಮಿ ದೇವಾಲಯ  ಪ್ರವೇಶಿಸಲು ಪ್ರಯತ್ನಿಸಿದ್ದರು.
ಆದರೆ. ಭಕ್ತಾಧಿಗಳ ತೀವ್ರ ಪ್ರತಿಭಟನೆಯಿಂದಾಗಿ ಹಿಂದಿರುಗುವಂತಾಗಿತ್ತು. ಪೊಲೀಸರ ಬಿಗಿ ಭದ್ರತೆಯಲ್ಲಿ ಪಾತಿಮಾ ಮತ್ತು ಹೈದರಾಬಾದ್ ಮೂಲದ ಪತ್ರಕರ್ತೆ ಕವಿತಾ ಅವರನ್ನು ಕರೆತರಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com