ಶಬರಿಮಲೆ ದೇವಾಲಯ ಭಕ್ತಾದಿಗಳಿಗೆ ಮುಕ್ತ: 2 ತಿಂಗಳ ಕಾಲ ಮಂಡಲ ಪೂಜೆಗೆ ಸಕಲ ಸಿದ್ದತೆ

ಕೇರಳದ ಪ್ರಸಿದ್ದ ಶಬರಿಮಲೆ ಅಯ್ಯಪ್ಪ ದೇವಸ್ಥಾನದ ಬಾಗಿಲು ತೆರೆದಿದೆ. ಮುಂದಿನ ಎರಡು ತಿಂಗಳ ಕಾಲ (62ದಿನ) ನಡೆಯುವ ವಾರ್ಷಿಕ ಮಂಡಲ ಪೂಜಾ ಮಹೋತ್ಸವಕ್ಕೆ ದೇವಾಲಯ ಸಾಕ್ಷಿಯಾಗಲ್ದೆ.
ಶಬರಿಮಲೆ ದೇವಾಲಯ
ಶಬರಿಮಲೆ ದೇವಾಲಯ
ಶಬರಿಮಲೆ: ಕೇರಳದ ಪ್ರಸಿದ್ದ ಶಬರಿಮಲೆ ಅಯ್ಯಪ್ಪ ದೇವಸ್ಥಾನದ ಬಾಗಿಲು ತೆರೆದಿದೆ. ಮುಂದಿನ ಎರಡು ತಿಂಗಳ ಕಾಲ (62ದಿನ) ನಡೆಯುವ ವಾರ್ಷಿಕ ಮಂಡಲ ಪೂಜಾ ಮಹೋತ್ಸವಕ್ಕೆ ದೇವಾಲಯ ಸಾಕ್ಷಿಯಾಗಲಿದೆ.
ಶುಕ್ರವಾರ ಸಂಜೆಯಿಂದಲೇ ದೇವಾಲಯದಲ್ಲಿ ವಿಧಿವತ್ತಾದ ಪೂಜಾ ಕೈಂಕರ್ಯಗಳು ಪಾರಂಭಗೊಂಡಿದ್ದು ಮುಂದಿನ ವರ್ಷ ಮಕರ ಸಂಕ್ರಮಣದ ಮಕರ ಜ್ಯೋತಿ ದರ್ಶನದ ವರೆಗೂ ದೇವಾಲಯ ಭಕ್ತಾದಿಗಳಿಗೆ ತೆರೆದಿರಲಿದೆ.
ಇಂದು ಸಂಜೆಯಿಂಡ ರಾತ್ರಿ ವರೆಗೆ ವಿಶೇಷ ಪೂಜೆಗಳಿದ್ದುಯ್ ಇದಕ್ಕೆ ಸಾರ್ವಜನಿಕರಿಗೆ, ಭಕ್ತರಿಗೆ ಪ್ರವೇಶವಿಲ್ಲ. ಶನಿವಾರದಿಂದ ಭಕ್ತರು ಅಯ್ಯಪ್ಪಸ್ವಾಮಿಯ ದರ್ಶನ ಪಡೆದುಕೊಳ್ಳಬಹುದಾಗಿದೆ.
ಶಬರಿಮಲೆಗೆ ಮಹಿಳೆಯರು ಪ್ರವೇಶಿಸುವುದುಅರ ಕುರಿತು ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಬಳಿಕ ಮೂರನೇ ಬಾರಿ ದೇವಾಲಯದ ಬಾಗಿಲು ತೆರೆದಿದೆ. ಈ ವೇಳೆ ಹಲವು ಮಹಿಳೆಯರು ದೇವಾಲಯದಲ್ಲಿ ಅಯ್ಯಪ್ಪನ ದರ್ಶನಕ್ಕಾಗಿ ಪ್ರಯತ್ನಿಸಿದ್ದರೂ ಇದುವರೆಗೆ ಪ್ರತಿಭಟನಾಕಾರರು,  ಮತ್ತು ಭಕ್ತರ ವಿರೋಧದಿಂಡ ನಿರ್ಬಂಧಿತ ವಯೋಮಾನದ ಯಾವೊಬ್ಬ ಮಹಿಳೆಯೂ ದೇವಸ್ಥಾನ ಪ್ರವೇಶಿಸಲು ಸಾಧ್ಯವಾಗೊರಲಿಲ್ಲ.
ಇದೇ ವೇಳೆ ತಿರುವಾಂಕೂರು ದೇವಸ್ವಂ ಮಂಡಳಿ ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ತೀರ್ಪು ಜಾರಿಗೆ ತರಲು ಇನ್ನಷ್ಟು ಕಾಲಾವಕಾಶ ನೀಡಬೇಕೆಂದು ಕೋರಿಕೆ ಸಲ್ಲಿಸಲು ನಿರ್ಧರಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com