ತಮಿಳುನಾಡಿಗೆ ಅಪ್ಪಳಿಸಿದ 'ಗಜ' ಚಂಡಮಾರುತ, ನಾಗಪಟ್ಟಣಂನಲ್ಲಿ ಮನೆಗಳಿಗೆ ಹಾನಿ

ತೀವ್ರ ಪರಿಣಾಮ ಬೀರುವ ಗಜ ಚಂಡಮಾರುತ ತಮಿಳುನಾಡಿನ ತೀರ ದಾಟಿ ನಾಗಪಟ್ಟಣಂ ಮತ್ತು ಹತ್ತಿರದ ವೇದರಣ್ಣಿಯಂ ನಡುವೆ ಶುಕ್ರವಾರ ನಸುಕಿನ ಜಾವ ಗಂಟೆಗೆ 120 ಕಿಲೋ ಮೀಟರ್ ವೇಗದಲ್ಲಿ ....
ನಾಗಪಟ್ಟಣಂನಲ್ಲಿ ಇಂದು ಬೆಳಗ್ಗೆ ಕಂಡುಬಂದ ದೃಶ್ಯ
ನಾಗಪಟ್ಟಣಂನಲ್ಲಿ ಇಂದು ಬೆಳಗ್ಗೆ ಕಂಡುಬಂದ ದೃಶ್ಯ

ನಾಗಪಟ್ಟಿಣಂ: ತೀವ್ರ ಪರಿಣಾಮ ಬೀರುವ ಗಜ ಚಂಡಮಾರುತ ತಮಿಳುನಾಡಿನ ತೀರ ದಾಟಿ ನಾಗಪಟ್ಟಣಂ ಮತ್ತು ಹತ್ತಿರದ ವೇದರಣ್ಣಿಯಂ ನಡುವೆ ಶುಕ್ರವಾರ ನಸುಕಿನ ಜಾವ ಗಂಟೆಗೆ 120 ಕಿಲೋ ಮೀಟರ್ ವೇಗದಲ್ಲಿ ಬೀಸಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ತಮಿಳುನಾಡು ರಾಜ್ಯದ ವಿಪತ್ತು ನಿರ್ವಹಣಾ ಪ್ರಾಧಿಕಾರ ಹೇಳುವ ಪ್ರಕಾರ, ನಾಗಪಟ್ಟಣಂ, ಪುದುಕೊಟ್ಟೈ, ರಾಮನಾಥಪುರಂ ಮತ್ತು ತಿರುವಾರೂರು ಸೇರಿದಂತೆ 6 ಜಿಲ್ಲೆಗಳ ತಗ್ಗು ಪ್ರದೇಶಗಳಿಂದ ಸುಮಾರು 76,290 ಮಂದಿಯನ್ನು ರಕ್ಷಿಸಲಾಗಿದ್ದು ಅವರಿಗೆ ಸುಮಾರು 300 ಆಶ್ರಯ ತಾಣಗಳಲ್ಲಿ ಆಶ್ರಯ ಒದಗಿಸಲಾಗಿದೆ.


  ಪಣಂನಲ್ಲಿ ಸಮುದ್ರದ ನೀರಿನ ಮಟ್ಟ ತಗ್ಗಿರುವುದು.

ನಾಗಪಟ್ಟಣಂ ಜಿಲ್ಲೆಯಲ್ಲಿ ಇಂದು ಕೂಡ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಕಳೆದ ರಾತ್ರಿಯಿಂದ ಇಲ್ಲಿ ವ್ಯಾಪಕ ಮಳೆ, ಗಾಳಿ ಬೀಸುತ್ತಿದ್ದು ಮರಗಿಡಗಳು ನೆಲಕ್ಕುರುಳಿವೆ. ಮನೆಗಳು ಹಾನಿಗೀಡಾಗಿವೆ.

ಭಾರತೀಯ ಹವಾಮಾನ ಇಲಾಖೆಯ ವರದಿ ಪ್ರಕಾರ, ನಾಗಪಟ್ಟಣಂ ಮತ್ತು ವೇದರಣ್ಣಿಯಂ ಮಧ್ಯೆ ತಮಿಳುನಾಡು ಮತ್ತು ಪುದುಚೆರಿ ತೀರವನ್ನು ಗಜ ಚಂಡಮಾರುತ ದಾಟಿದ್ದು ಗಂಟೆಗೆ 110 ಕಿಲೋ ಮೀಟರ್ ನಿಂದ 120 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸುತ್ತಿದೆ ಎಂದು ಹೇಳಿದೆ.ಚಂಡಮಾರುತ ಭೂ ಪ್ರದೇಶದ ಮಧ್ಯೆ ಕೇಂದ್ರೀಕೃತವಾಗಿದ್ದರೂ ಕೂಡ ಸಮುದ್ರ ತೀರಕ್ಕೆ ಅಪ್ಪಳಿಸಿದೆ. ಇನ್ನೊಂದು ಗಂಟೆಯಲ್ಲಿ ಭೂ ಪ್ರದೇಶಕ್ಕೆ ಅಪ್ಪಳಿಸಬಹುದು ಎಂದು ಭಾರತೀಯ ಹವಾಮಾನ ಇಲಾಖೆ ನಸುಕಿನ ಜಾವ ಹೊರಡಿಸಿದ ಹವಾಮಾನ ವರದಿಯಲ್ಲಿ ತಿಳಿಸಿದೆ.

ಗಜ ಚಂಡಮಾರುತ ಇಂದು ಪಶ್ಚಿಮ ದಿಕ್ಕೆಗೆ ಬೀಸುವ ಸಾಧ್ಯತೆಯಿದ್ದು, ಮುಂದಿನ ನಾಲ್ಕೈದು ಗಂಟೆಗಳಲ್ಲಿ ಚಂಡಮಾರುತದ ತೀವ್ರತೆ ಕಡಿಮೆಯಾಗಲಿದೆ ಎಂದು ಹೇಳಿದೆ. ಗಾಳಿ ತೀವ್ರವಾದಂತೆ ನಾಗಪಟ್ಟಣಂ, ತಿರುವಾರೂರು, ತಂಜಾವೂರುಗಳಲ್ಲಿ ಇಂದು ಮಧ್ಯಾಹ್ನದಿಂದ ಭಾರೀ ಮಳೆ ಗಾಳಿ ಉಂಟಾಗುವ ಸಾಧ್ಯತೆಯಿದೆ. ಹಲವು ತೀರಭಾಗಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ.

ನಾಗಪಟ್ಟಣಂ ಜಿಲ್ಲೆಯಲ್ಲಿ ನಾಲ್ಕು ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡಗಳು ಮತ್ತು ಕದ್ದಲೂರು ಜಿಲ್ಲೆಯಲ್ಲಿ ಎರಡು ತಂಡಗಳು ನಿಯೋಜನೆಗೊಂಡಿವೆ. ಚಂಡಮಾರುತ ಸಮಯದಲ್ಲಿ ಜನರು ಏನು ಮಾಡಬಾರದು ಮತ್ತು ಮಾಡಬೇಕು ಎಂದು ತೋರಿಸುವ ಆನಿಮೇಷನ್ ವಿಡಿಯೊವನ್ನು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಬಿಡುಗಡೆ ಮಾಡಿದೆ.
ಚಂಡಮಾರುತದಲ್ಲಿ ಸಿಲುಕಿಹಾಕಿಕೊಂಡು ಅಪಾಯದಲ್ಲಿದ್ದವರಿಗೆ ಸರ್ಕಾರ ರಾಜ್ಯ ಮಟ್ಟದಲ್ಲಿ 1070 ಸಹಾಯವಾಣಿಯನ್ನು ಮತ್ತು ಜಿಲ್ಲೆಗಳಲ್ಲಿ 1077 ಸಹಾಯವಾಣಿಯನ್ನು ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com