ಭೋಪಾಲ್: ಜಾತ್ಯಾತೀತತೆಯಿಂದ ಹಿಂದುತ್ವದತ್ತ ಮುಖ ಮಾಡುತ್ತಿರುವ ಕಾಂಗ್ರೆಸ್ ಕಳೆದ 46 ವರ್ಷದ ಸಂಪ್ರದಾಯವೊಂದನ್ನು ಮುರಿಯುವ ಮೂಲಕ ಮುಸ್ಲಿಂ ಅಭ್ಯರ್ಥಿ ಕ್ಷೇತ್ರವೊಂದರಲ್ಲಿ ಈ ಬಾರಿ ಹಿಂದೂ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಿದೆ.
ರಾಜಸ್ತಾನದ ಟೋಂಕ್ ಪ್ರದೇಶದಲ್ಲಿ ಕಳೆದ 46 ವರ್ಷಗಳಿಂದ ಕಾಂಗ್ರೆಸ್ ಮುಸ್ಲಿಂ ಅಭ್ಯರ್ಥಿಯನ್ನೇ ಕಣಕ್ಕೆ ಇಳಿಸುತ್ತಿತ್ತು. ಆದರೆ ಈ ಬಾರಿ ಬಿಜೆಪಿಗೆ ಭರ್ಜರಿ ಫೈಟ್ ನೀಡುವ ನಿಟ್ಟಿನಲ್ಲಿ ಬಿಜೆಪಿ ಅಭ್ಯರ್ಥಿ ಮಹಾವೀರ್ ಜೈನ್ ಗೆ ಪ್ರತಿಸ್ಪರ್ಧಿಯಾಗಿ ಸಚಿನ್ ಪೈಲಟ್ ಅವರನ್ನು ಕಣಕ್ಕಿಳಿಸುತ್ತಿದೆ.
ಸಚಿನ್ ಪೈಲಟ್ ಇದುವರೆಗೂ ಯಾವುದೇ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡದಿದ್ದರೂ ಕಾಂಗ್ರೆಸ್ ಈ ಬಾರಿ ಪೈಲಟ್ ಗೆ ಟಿಕೇಟ್ ನೀಡುತ್ತಿದೆ. 41 ವರ್ಷದ ರಾಜಸ್ಥಾನ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿರುವ ಸಚಿನ್ ರನ್ನು ಈ ಬಾರಿ ಟೋಂಕ್ ಪ್ರದೇಶದಿಂದ ಕಣಕ್ಕಿಳಿಸುತ್ತಿದೆ.
ಕಳೆದ 2014ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲನ್ನು ಕಂಡಿದ್ದ ಅವರನ್ನು 2017ರಲ್ಲಿ ರಘು ಶರ್ಮಾ ನಿಧನದಿಂದ ತೆರವಾದ ಸ್ಥಾನಕ್ಕೆ ಸ್ಪರ್ಧಿಸಿ ಸಂಸದರಾಗಿ ಆಯ್ಕೆಯಾಗಿದ್ದರು.