ಮಹಾ ಆಯೋಗದ ವರದಿ ಅಂಗೀಕಾರ: ಕೊನೆಗೂ ಮರಾಠ ಸಮುದಾಯಕ್ಕೆ ಸಿಕ್ಕಿತು ಮೀಸಲಾತಿ ಸೌಲಭ್ಯ!

ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನೀಡಿರುವ ವರದಿಯ ಅನುಷ್ಠಾನೆಕ್ಕೆ ಮಹಾರಾಷ್ಟ್ರ ಸರ್ಕಾರ ಅನುಮತಿ ನೀಡಿದ್ದು, ಉದ್ಯೋಗ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಮರಾಠ ಸಮುದಾಯಕ್ಕೆ ಮೀಸಲಾಗಿ ಸಿಗಲಿದೆ.
ಮಹಾ ಆಯೋಗದ ವರದಿ ಅಂಗೀಕಾರ: ಕೊನೆಗೂ ಮೀಸಲಾತಿ ದಕ್ಕಿಸಿಕೊಂಡ ಮರಾಠ ಸಮುದಾಯ!
ಮಹಾ ಆಯೋಗದ ವರದಿ ಅಂಗೀಕಾರ: ಕೊನೆಗೂ ಮೀಸಲಾತಿ ದಕ್ಕಿಸಿಕೊಂಡ ಮರಾಠ ಸಮುದಾಯ!
ಮುಂಬೈ: ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನೀಡಿರುವ ವರದಿಯ ಅನುಷ್ಠಾನೆಕ್ಕೆ ಮಹಾರಾಷ್ಟ್ರ ಸರ್ಕಾರ ಅನುಮತಿ ನೀಡಿದ್ದು, ಉದ್ಯೋಗ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಮರಾಠ ಸಮುದಾಯಕ್ಕೆ ಮೀಸಲಾಗಿ ಸಿಗಲಿದೆ. 
ಮಹಾರಾಷ್ಟ್ರದ ಹಿಂದುಳಿದ ವರ್ಗಗಳ ಆಯೋಗದ ವರದಿಯನ್ನು ಒಪ್ಪಿ ಮರಾಠ ಸಮುದಾಯಕ್ಕೆ ಉದ್ಯೋಗ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಮೀಸಲಾತಿ ನೀಡಲಿದ್ದೆವೆ ಎಂದು ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ. 
ಸಾಮಾಜಿಕ ಹಾಗೂ ಶೈಕ್ಷಣಿಕ ಹಿಂದುಳಿದ ವರ್ಗಗಳೆಂದು ಗುರುತಿಸಲ್ಪಡುವ  ಹೊಸ ಕೆಟಗರಿ ಅಡಿಯಲ್ಲಿ ಮರಾಠ ಸಮುದಾಯಕ್ಕೆ ಮೀಸಲಾತಿ ಸಿಗಲಿದೆ.  ರಾಜಕೀಯವಾಗಿಯೂ ಪ್ರಬಲವಾಗಿರುವ ಮರಾಠ ಸಮುದಾಯ ರಾಜ್ಯದ ಒಟ್ಟಾರೆ ಜನಸಂಖ್ಯೆಯ ಶೇ.30 ರಷ್ಟಿದೆ. 
ಹಿಂದುಳಿದ ವರ್ಗಗಳ ಆಯೋಗ ಮರಾಠ ಸಮುದಾಯಕ್ಕೆ ಮೀಸಲಾತಿ ನೀಡಬೇಕೆಂದು ವರದಿಯಲ್ಲಿ ಶಿಫಾರಸ್ಸು ಮಾಡಿದೆ. ಅದನ್ನು ರಾಜ್ಯ ಸಚಿವ ಸಂಪುಟ ಅಂಗೀಕರಿಸಿದೆ ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ತಿಳಿಸಿದ್ದಾರೆ. 
ಮೀಸಲಾತಿ ಪ್ರಮಾಣವನ್ನು ಸಂಪುಟ ಉಪಸಮಿತಿ ನಿರ್ಧರಿಸಲಿದ್ದು ವಿವರಗಳನ್ನು ಮುಂದಿನ ಅಧಿವೇಶನದಲ್ಲಿ ಮಂಡಿಸಲಾಗುತ್ತದೆ ಎಂದು ಫಡ್ನವೀಸ್ ತಿಳಿಸಿದ್ದಾರೆ. ಮರಾಠ ಸಮುದಾಯ ಮೀಸಲಾತಿಗಾಗಿ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿತ್ತು. ಅದು ಜುಲೈ ಹಾಗೂ ಆಗಸ್ಟ್ ತಿಂಗಳಲ್ಲಿ ತೀವ್ರ ಸ್ವರೂಪ ಪಡೆದಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com