ಮಹಿಳಾ ಪತ್ರಕರ್ತೆಗೆ ನಿಂದನೆ: ದೆಹಲಿ ಎಎಪಿ ಶಾಸಕ ಸೋಮನಾಥ್ ಭಾರ್ತಿ ವಿರುದ್ಧ ದೂರು ದಾಖಲು

ಮಹಿಳಾ ಪತ್ರಕರ್ತೆಯೊಬ್ಬರನ್ನು ನಿಂದಿಸಿದ ಆರೋಪದ ಮೇಲೆ ದೆಹಲಿ ಶಾಸಕ ಸೋಮನಾಥ್ ಭಾರ್ತಿ ವಿರುದ್ಧ ದೂರು ದಾಖಲಾಗಿದೆ.
ಸೋಮನಾಥ್ ಭಾರ್ತಿ
ಸೋಮನಾಥ್ ಭಾರ್ತಿ
ನೊಯ್ಡಾ: ಮಹಿಳಾ ಪತ್ರಕರ್ತೆಯೊಬ್ಬರನ್ನು ನಿಂದಿಸಿದ ಆರೋಪದ ಮೇಲೆ ದೆಹಲಿ ಶಾಸಕ ಸೋಮನಾಥ್ ಭಾರ್ತಿ ವಿರುದ್ಧ ದೂರು ದಾಖಲಾಗಿದೆ.
ಖಾಸಗಿ ನ್ಯೂಸ್ ಚಾನಲ್ ಒಂದರಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತೆಗೆ ಶಾಸಕ ಅವಾಚ್ಯವಾಗಿ ನಿಂದಿಸಿದ್ದಲ್ಲದೆ ಅವಳನ್ನು ವೇಶ್ಯಾವಾಟಿಕೆ ನಡೆಸುವಂತೆ ಕೇಳಿದ್ದಾರೆ ಎಂಬುದಾಗಿ ಸಂತ್ರಸ್ಥ ಪತ್ರಕರ್ತೆ ಪೋಲೀಸ್ ಠಾಣೆಯಲ್ಲಿ ದೂರಿತ್ತಿದ್ದಾರೆ. 
ಟಿವಿ ಸಂದರ್ಶನವೊಂದರಲ್ಲಿ ಪತ್ರಕರ್ತೆ, ನಿರೂಪಕಿಯಾಗಿದ್ದ ಮಹಿಳೆಯನ್ನು ಭಾರ್ತಿಯವರು "ಬಿಜೆಪಿಯ ಏಜೆಂಟ್" ಎಂದದ್ದಲ್ಲದೆ "ವೇಶ್ಯೆಯಾಗಲು ಸರಿಯಾದ ಆಯ್ಕೆ" ಎಂದು ಕರೆಯುವ ಮೂಲಕ ನಿಂದಿಸಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ. ಪೋಲೀಸರು ಸದ್ಯ ಮಹಿಳೆಯ ದೂರನ್ನಾಧರಿಸಿ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಆದರೆ ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ ಶಾಸಕ ಭಾರ್ತಿ ನ್ಯೂಸ್ ಚಾನಲ್ ಹಾಗೂ ಅದರ ನಿರೂಪಕಿಯ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ನುಡಿದಿದ್ದಾರೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮೇಲೆ ನಡೆದ ದಾಳಿಯ ಕುರಿತು ಚರ್ಚಿಸಲು ತಾನು ಟಿವಿ ಸಂದರ್ಶನದಲ್ಲಿ ಪಾಲ್ಗೊಂಡಿದ್ದೆ. ದೂರವಾಣಿ ಮೂಲಕ ನನ್ನನ್ನು ಸಂಪರ್ಕಿಸಲಾಗಿತ್ತು. ಆದರೆ ಚಾನಲ್ ನವರು ಕಾರ್ಯಕ್ರಮದ ದೃಶ್ಯಗಳನ್ನು ಬಹಳ ನಾಜೂಕಾಗಿ ತೋರಿಸಿದ್ದಾರೆ ಎಂದರು.
ನೊಯ್ಡಾದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪತ್ರಕರ್ತೆಯು ಶಾಸಕರ ವಿರುಧ ದೂರು ಸಲ್ಲಿಸಿದ್ದು ಭಾರತೀಯ ದಂಡ ಸಂಹಿತೆಯ 504 (ಉದ್ದೇಶಪೂರ್ವಕ ಅವಮಾನ) ಮತ್ತು 509 (ಪದಗಳ, ಸನ್ನೆಗಳ ಮೂಲಕ ಮಹಿಳೆಯರಿಗೆ ಅವಮಾನ )ರ ಸೆಕ್ಷನ್ ಗಳಡಿಯಲ್ಲಿ ಭಾರ್ತಿ ವಿರುದ್ಧ ಎಫ್ಐಆರ್ ದಾಖಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com