ಅಂಡಮಾನ್ ದ್ವೀಪದಲ್ಲಿ ಅಮೆರಿಕನ್ ಪ್ರವಾಸಿಗನ ಕೊಲೆ: ಬುಡಕಟ್ಟು ಜನರ ಕೃತ್ಯ ಎಂದ ಪೋಲೀಸರು

ಅಮೆರಿಕಾ ಮೂಲದ ವ್ಯಕ್ತಿಯೊಬ್ಬನನ್ನು ಅಂಡಮಾನ್ ನಿಕೋಬಾರ್ ನ ಮೂಲನಿವಾಸಿಗಳು ಬಿಲ್ಲು ಬಾಣವನ್ನು ಬಳಸಿ ಕೊಂದು ಹಾಕಿರುವ ಘಟನೆ ಬುಧವಾರ ವರದಿಯಾಗಿದೆ.
ಉತ್ತರ ಸೆಂಟಿನೆಲ್ ದ್ವೀಪ
ಉತ್ತರ ಸೆಂಟಿನೆಲ್ ದ್ವೀಪ
Updated on
ನವದೆಹಲಿ: ಅಮೆರಿಕಾ ಮೂಲದ ವ್ಯಕ್ತಿಯೊಬ್ಬನನ್ನು ಅಂಡಮಾನ್ ನಿಕೋಬಾರ್ ನ ಮೂಲನಿವಾಸಿಗಳು ಬಿಲ್ಲು ಬಾಣವನ್ನು ಬಳಸಿ ಕೊಂದು ಹಾಕಿರುವ ಘಟನೆ ಬುಧವಾರ ವರದಿಯಾಗಿದೆ.
ಅಂಡಮಾನ್ ದ್ವೀಪ ಸಮೂಹದ ಉತ್ತರ ಸೆಂಟಿನೆಲ್ ದ್ವೀಪದ ಭಾಗಗಳಿಗೆ ಪ್ರವಾಸಕ್ಕಾಗಿ ಆಗಮ್ನಿಸಿದ್ದ ಅಮೆರಿಕಾ ವ್ಯಕ್ತಿಯನ್ನು ಕೊಂದ ಆರೋಪದಡಿ ಏಳು ಮೀನುಗಾರರನ್ನು ಬಂಧಿಸಲಾಗಿದೆ ಎಂದು  ಪೊಲೀಸ್ ಅಧಿಕಾರಿ ವಿಜಯ್ ಸಿಂಗ್ ಹೇಳಿದರು. ವಿಶೇಷವೆಂದರೆ ಈ ದ್ವೀಪಕ್ಕೆ ಪ್ರವಾಸಿಗರ ಭೇಟಿಗೆ ಸರ್ಕಾರದಿಂದ ನಿರ್ಬಂಧವಿದೆ.
ಇಲ್ಲಿನ ಮೂಲನಿವಾಸಿಗಳು  ತಮ್ಮದೇ ಆದ ಸಣ್ಣ ಅರಣ್ಯವನ್ನೊಳಗೊಂಡ ದ್ವೀಪದಲ್ಲಿ ವಾಸಿಸುತ್ತಿದ್ದು ಹೊರಗಿನವರೊಡನೆ ಯಾವ ಬಗೆಯ ಸಂಪರ್ಕವನ್ನು ಅವರು ಬಯಸುವುದಿಲ್ಲ.ಅಲ್ಲದೆ ಅವರ ನಿವಾಸದ ಸಮೀಪ ಸುಳಿದಾಡುವ ಅಪರಿಚಿತ ವ್ಯಕ್ತಿಗಳ ಮೇಲೆ ಅವರು ಆಕ್ರಮಣ ಮಾಡುವುದು ಸಾಮಾನ್ಯವಾಗಿದೆ.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಬಂಗಾಳ ಕೊಲ್ಲಿ ಮತ್ತು ಅಂಡಮಾನ್ ಸಮುದ್ರದ ನಡುಯ್ವೆ ಬರುವ ದ್ವೀಪ ಸಮೂಹವಾಗಿದೆ.
ಮಾದ್ಯಮಗಳ ವರದಿಯ ಆಧಾರದ ಮೇಲೆ ಹೇಳುವುದಾದರೆ ಮೃತಪಟ್ಟ ಅಮೆರಿಕನ್ ವ್ಯಕ್ತಿಯು ಅಂಡಮಾನ್ ದ್ವೀಪಗಳಿಗೆ ಸಾಹಸಮಯ (ಅಡ್ವೆಂಚರ್) ಪ್ರವಾಸಕ್ಕಾಗಿ ಆಗಮಿಸಿದ್ದನು. ಇಲ್ಲಿ ಸಾವನ್ನಪ್ಪಿರುವ ವ್ಯಕ್ತಿಯ ದೇಹವನ್ನು ಇನ್ನಷ್ಟೇ ಪೋಲೀಸರು ವಶಕ್ಕೆ ಪಡೆದುಕೊಳ್ಳಬೇಕಿದೆ.
ಚೆನ್ನೈನಲ್ಲಿನ ಅಮೆರಿಕನ್ ದೂತಾವಾಸ ಕಛೇರಿಗೆ ಅಂಡಮಾನ್ ನಲಿ ಪ್ರವಾಸಕ್ಕೆ ತೆರಳಿದ್ದ ವ್ಯಕ್ತಿಯ ಬಗ್ಗೆ ಮಾಹಿತಿ ಇದ್ದರೂ ಅದನ್ನು ಬಹಿರಂಗಪಡಿಸಲು ನಿರಾಕರಿಸಿದೆ. ಇನ್ನು ಉತ್ತರ ಸೆಂಟಿನೆಲ್ ದ್ವೀಪ ಸಮೂಹವು ಒಂದು ಸಂರಕ್ಷಿತ ಪ್ರದೇಶವಾಗಿದ್ದು ಪ್ರವಾಸಿಗರಿಗೆ ಮುಕ್ತವಾಗಿರುವುದಿಲ್ಲ ಎಂದು ಸಮಾಜಶಾಸ್ತ್ರ  ವಿಜ್ಞಾನಿ ಮತ್ತು ಜಿಂದಾಲ್ ಗ್ಲೋಬಲ್ ಲಾ ಸ್ಕೂಲ್ ನ ಶಿವ ವಿಶ್ವನಾಥನ್ ಹೇಳಿದ್ದಾರೆ."ಬುಡಕಟ್ಟು ಸಮುದಾಯದ ಎಷ್ಟು ಜನ ಇಲ್ಲಿ ವಾಸವಿದ್ದಾರೆ ಎನ್ನುವ ಬಗ್ಗೆ ಖಚಿತ ಮಾಹಿತಿ ಇಲ್ಲ, ಆದರೆ ಅವರ ಸಂಖ್ಯೆ ಕ್ಷೀಣಿಸುತ್ತಿದೆ, ಸರ್ಕಾರ ಇತ್ತ ಗಮನ ನೀಡಬೇಕು" ಅವರು ವಿವರಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com