ಕಾಂಗ್ರೆಸ್ ಪಕ್ಷ ವರನೇ ಇಲ್ಲದ ಮದುವೆ ದಿಬ್ಬಣದಂತಿದೆ: ರಾಜನಾಥ್ ಸಿಂಗ್ ಲೇವಡಿ

ಕಾಂಗ್ರೆಸ್ ಪಕ್ಷದ ಈಗಿನ ಸ್ಥಿತಿ ವರನೇ ಇಲ್ಲದೆ ಮದುವೆಗೆ ಸಿದ್ದವಾದ ಮದುವೆ ದಿಬ್ಬಣದಂತಿದೆ ಎಂದು ಕೇಂದ್ರ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಮದ್ಯಪ್ರದೇಶ ವಿಧಾನಸಭೆ ಚುನಾವಣೆ....
ರಾಜನಾಥ್ ಸಿಂಗ್
ರಾಜನಾಥ್ ಸಿಂಗ್
ಭೋಪಾಲ್: ಕಾಂಗ್ರೆಸ್ ಪಕ್ಷದ ಈಗಿನ ಸ್ಥಿತಿ ವರನೇ ಇಲ್ಲದೆ ಮದುವೆಗೆ ಸಿದ್ದವಾದ ಮದುವೆ ದಿಬ್ಬಣದಂತಿದೆ ಎಂದು ಕೇಂದ್ರ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಮದ್ಯಪ್ರದೇಶ ವಿಧಾನಸಭೆ ಚುನಾವಣೆ ಪ್ರಚಾರದಲ್ಲಿ ಭಾಗವಹಿಸಿದ್ದ ಸಚಿವರು ಪತ್ರಿಕಾಗೋಷ್ಠಿಯಲ್ಲಿ ಕೈ ಪಕ್ಷವನ್ನು ವಿವಾಹದ ದಿಬ್ಬಣಕ್ಕೆ ಹೋಲಿಸಿ ಮಾತನಾಡಿದ್ದಾರೆ.
"ನಿಖರವಾಗಿ ಹೇಳಬೇಕೆಂದರೆ ಕಾಂಗ್ರೆಸ್ ಪಕ್ಷ ವರನಿಲ್ಲದ ಮದುವೆ ದಿಬ್ಬಣದಂತೆ ಇದೆ. ಪಕ್ಷದಲ್ಲಿ ನಾಯಕರೇ ಇಲ್ಲ ಹೀಗಾಗಿ ಅಲ್ಲಿ ಅದೇಶ ನೀಡುವವರಿಲ್ಲದಂತಾಗಿದೆ" ಸಿಂಗ್ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷದ ಸ್ಥಿತಿ ನಮ್ಮ ಪಕ್ಷ (ಬಿಜೆಪಿ) ಗಿಂತ ಕಳಪೆಯಾಗಿದೆ ಎಂದ ರಾಜನಾಥ್ ಸಿಂಗ್ ಭಾರತೀಯ ಜನತಾ ಪಕ್ಷ ಚುನಾವಣೆಗೆ ಮುನ್ನವೇ ಆಯಾ ರಾಜ್ಯಗಳಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಗಳನ್ನು ಹಾಗೆಯೇ ಮುಂದಿನ ಲೋಕಸಭೆ ಚುನಾವಣೆಗೆ ಪ್ರಧಾನಿ ಅಭ್ಯರ್ಥಿಯನ್ನೂ ಘೋಷಣೆ  ಮಾಡಿದೆ. ಆದರೆ ಕಾಂಗ್ರೆಸ್ ನಾಯಕರಿಗೆ ಈ ಧೈರ್ಯವಿಲ್ಲ ಎಂದು ವಾದಿಸಿದ್ದಾರೆ.
ಬಿಜೆಪಿಯು ಮುಂದಿನ ಚುನಾವಣೆಗಳಲ್ಲಿ ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸ್ ಗಢಗಳಲ್ಲಿ ಸ್ಪಷ್ಟ ಬಹುಮತದೊಡನೆ ಅಧಿಕಾರಕ್ಕೆ ಏರುತ್ತದೆ. ಇದಕ್ಕಾಗಿ ಮತ್ತಾವ ಪಕ್ಷದೊಡನೆ ಮೈತ್ರಿ ಅಗತ್ಯವಿಲ್ಲ  ಎಂದು ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಧ್ಯಪ್ರದೇಶದ ರಾಜ್ಯದಲ್ಲಿ ಸ್ಥಳೀಯ ಕಾಂಗ್ರೆಸ್ ನಾಯಕರು ತಮ್ಮನ್ನು ತಾವು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ ಸಿಂಗ್ ಕಾಂಗ್ರೆಸ್ ನಾಯಕತ್ವವಿಲ್ಲದೆ ಸೊರಗುತ್ತಿದೆ ಎಂದು ಟೀಕಿಸಿದ್ದಾರೆ.
"ದೇಶದಲ್ಲಿ ಅಚ್ಚೇ ದಿನ್ ಇದಾಗಲೇ ಅಸ್ತಿತ್ವದಲ್ಲಿದೆ, ಆದರೆ ಸರ್ಕಾರದ ವಿರೋಧಿಗಳಿಗೆ ಇದನ್ನು ಗ್ರಹಿಸುವ ಶಕ್ತಿ ಇಲ್ಲ ಎಂದು ಗೃಹ ಸಚಿವರು ಹೇಳೀದರು.ಪ್ರಸ್ತುತ ದೇಶದ ಆಡಳಿತದಲ್ಲಿ ಅಭೂತಪೂರ್ವ ರೀತಿಯಲ್ಲಿ ಪ್ರಗತಿ ಹೊಂದುತ್ತಿದೆ.ಇದೇ ಬಗೆಯ ಬೆಳವಣಿಗೆಯ ದರವು ಮುಂದುವರಿದರೆ ಭಾರತ 2033 ರ ಹೊತ್ತಿಗೆ ಪ್ರಪಂಚದ ಅಗ್ರ ಮೂರು ಆರ್ಥಿಕ ಶಕ್ತಿಗಳಲ್ಲಿ ಒಂದಾಗಿ ನಿಲ್ಲಲಿದೆ.
""ಕಾಂಗ್ರೆಸ್ ಪಕ್ಷ ವ್ಯವಸ್ಥಿತವಾಗಿ ದೇಶದ ಆರ್ಥಿಕತೆಯನ್ನು ಹಾಳುಗೆಡವಿದಿದೆ ಮತ್ತು ಅವರ ಆಳ್ವಿಕೆಯ ಅವಧಿಯಲ್ಲಿ ರಾಜ್ಯಗಳು ಸಾಕಷ್ಟು ಆರ್ಥಿಕ ಬಲವಿಲ್ಲದಂತಿದ್ದವು., ನಾವು ಆರ್ಥಿಕತೆಗೆ ಮಹತ್ತರವಾದ ಶಕ್ತಿಯನ್ನು ತುಂಬಿದ್ದೇವೆ. ನಮ್ಮ ಪಕ್ಷವು ಹೊಂದಿರುವ ಸಿದ್ದಾಂತ ಹಾಗೂ ರಾಜಕೀಯ ಚಿಂತನೆ ನಮ್ಮ ಬೆಳವಣಿಗೆಯ ದರ ಈ ಪ್ರಮಾಣಕ್ಕೆ ಏರಿಕೆಯಾಗಲು ಕಾರಣವಾಗಿದೆ" ಅವರು ವಿವರಿಸಿದರು.
ಪ್ರಸ್ತುತ ರಾಜಕೀಯದಲ್ಲಿ "ವಿಶ್ವಾಸಾರ್ಹತೆಯ ಬಿಕ್ಕಟ್ಟಿಗೆ" ಕಾಂಗ್ರೆಸ್ ಸಂಪೂರ್ಣ್ಭ ಹೊಣೆಯಾಗಿದೆ ಎಂದ ಸಿಂಗ್ ಕಾಂಗ್ರೆಸ್ ಈ ಹಿಂದೆ ನೀಡಿದ್ದ ಚುನಾವಣೆ ಭರವಸೆಗಳಲ್ಲಿ ಭಾಗಷಃ ಮಾತ್ರವನ್ನೂ ನೆರವೇರಿಸಿಲ್ಲ. ಎಂದ ಸಿಂಗ್ ಕಾಂಗ್ರೆಸ್ ಪಕ್ಷದ ಪ್ರಣಾಳಿಕ್ಯು ಪೋಸ್ಟ್ ಡೇಟೆಡ್ ಚೆಕ್ ನಂತಿದೆ, ಇದರಲ್ಲಿ ಹೊಸದೇನೂ ಇಲ್ಲ. ಮತ್ತು ಅದರ ಹಿಂದಿನ ಪ್ರಣಾಳಿಕೆಯ ಪುನರಾವರ್ತನೆಯಾಗಿದೆ ಎಂದು ಹೇಳಿದರು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com