ಜಮ್ಮು-ಕಾಶ್ಮೀರ ವಿಧಾನಸಭೆ ವಿಸರ್ಜನೆಗೆ ರಾಜ್ಯಪಾಲರ ಆದೇಶ: ಕಾಂಗ್ರೆಸ್-ಪಿಡಿಪಿ-ಎನ್ ಸಿ ಪ್ರಯತ್ನಕ್ಕೆ ಹಿನ್ನಡೆ

ರಾಜ್ಯಪಾಲರು ಜಮ್ಮು-ಕಾಶ್ಮೀರ ವಿಧಾನಸಭೆಯನ್ನು ವಿಸರ್ಜಿಸಿದ್ದಾರೆ.
ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ
ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ
ಶ್ರೀನಗರ: ರಾಜಕೀಯ ಅಸ್ಥಿರತೆ ಎದುರಿಸುತ್ತಿದ್ದ ಜಮ್ಮು-ಕಾಶ್ಮೀರದಲ್ಲಿ ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ಹಾಗೂ ಪೀಪಲ್ಸ್ ಕಾನ್ಫರೆನ್ಸ್ ನ ನಾಯಕ ಸಾಜದ್ ಲೋನ್ ಸರ್ಕಾರ ರಚಿಸುವುದಕ್ಕೆ  ಪ್ರತ್ಯೇಕವಾಗಿ ಹಕ್ಕು ಮಂಡಿಸಿದ್ದು, ಇಬ್ಬರಿಗೂ ಅವಕಾಶ ನೀಡದೇ ರಾಜ್ಯಪಾಲರು ಜಮ್ಮು-ಕಾಶ್ಮೀರ ವಿಧಾನಸಭೆಯನ್ನು ವಿಸರ್ಜಿಸಿದ್ದಾರೆ. 
ರಾಜ್ಯಪಾಲರ ಕಚೇರಿಯಿಂದ ವಿಧಾನಸಭೆ ವಿಸರ್ಜನೆ ಕುರಿತು ಆದೇಶ ಹೊರಡಿಸಲಾಗಿದ್ದು, ಸರ್ಕಾರ ರಚಿಸಲು ತೀವ್ರ ಕಸರತ್ತು ನಡೆಸುತ್ತಿದ್ದ ಕಾಂಗ್ರೆಸ್-ಪಿಡಿಪಿ-ಎನ್ ಸಿ ಪಕ್ಷಗಳಿಗೆ ಹಿನ್ನಡೆಯುಂಟಾಗಿದೆ.
ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಎನ್ ಸಿ ಬಾಹ್ಯಬೆಂಬಲ ಪಡೆದು ಕಾಂಗ್ರೆಸ್ ಜೊತೆ ಸರ್ಕಾರ ರಚಿಸುವುದಕ್ಕೆ ಅವಕಾಶ ನೀಡಲು ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ  ರಾಜ್ಯಪಾಲರಿಗೆ ಪತ್ರ ಬರೆದಿದ್ದರು. ಇದೇ ವೇಳೆಗೆ ಪೀಪಲ್ಸ್ ಕಾನ್ಫರೆನ್ಸ್ ನ ಸಾಜಲ್ ಲೋನ್ ಸಹ ತಮ್ಮ ಬಳಿ ಸರ್ಕಾರ ರಚಿಸುವುದಕ್ಕೆ ಅಗತ್ಯ ಬಹುಮತ ಇದೆ ಎಂದು ರಾಜ್ಯಪಾಲರಿಗೆ ಪತ್ರ ಬರೆದಿದ್ದರು. ಆದರೆ ರಾಜ್ಯಪಾಲರು ವಿಧಾನಸಭೆಯನ್ನು ವಿಸರ್ಜಿಸಿ ಆದೇಶ ಹೊರಡಿಸಿದ್ದಾರೆ. ರಾಜ್ಯಪಾಲರ ಆದೇಶವನ್ನು ನ್ಯಾಷನಲ್ ಕಾನ್ಫರೆನ್ಸ್ ಸ್ವಾಗತಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com