ಕೇಜ್ರಿವಾಲ್ ಮೇಲೆ ಖಾರದಪುಡಿ ದಾಳಿ ನಡೆಸಿದ ವ್ಯಕ್ತಿ ದೆಹಲಿ ಸಚಿವಾಲಯ ಪ್ರವೇಶಿಸಲು ಪಾಸ್ ಪಡೆದಿದ್ದ!

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮೇಲೆ ಖಾರದ ಪುಡಿ ಎಸೆದಿದ್ದ ವ್ಯಕ್ತಿ ದೆಹಲಿ ಸಚಿವಾಲಯಕ್ಕೆ ಪ್ರವೇಶಿಸುವುದಕ್ಕೆ ಪಾಸ್ ನ್ನು ಹೊಂದಿದ್ದ ವಿಷಯ ಈಗ ಬಹಿರಂಗವಾಗಿದೆ.
ಕೇಜ್ರಿವಾಲ್ ಮೇಲೆ ಖಾರದಪುಡಿ ದಾಳಿ ನಡೆಸಿದ ವ್ಯಕ್ತಿ ದೆಹಲಿ ಸಚಿವಾಲಯ ಪ್ರವೇಶಿಸಲು ಪಾಸ್ ಪಡೆದಿದ್ದ!
ಕೇಜ್ರಿವಾಲ್ ಮೇಲೆ ಖಾರದಪುಡಿ ದಾಳಿ ನಡೆಸಿದ ವ್ಯಕ್ತಿ ದೆಹಲಿ ಸಚಿವಾಲಯ ಪ್ರವೇಶಿಸಲು ಪಾಸ್ ಪಡೆದಿದ್ದ!
ನವದೆಹಲಿ: ರಾಷ್ಟ್ರ ರಾಜಧಾನಿ  ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ  ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮೇಲೆ  ಖಾರದ ಪುಡಿ ಎಸೆದಿದ್ದ ವ್ಯಕ್ತಿ ದೆಹಲಿ ಸಚಿವಾಲಯಕ್ಕೆ ಪ್ರವೇಶಿಸುವುದಕ್ಕೆ ಪಾಸ್ ನ್ನು ಹೊಂದಿದ್ದ ವಿಷಯ ಈಗ ಬಹಿರಂಗವಾಗಿದೆ. 
ಸಿಎಂ ಮೇಲೆ ದಾಳಿ ನಡೆಸಿರುವ ವ್ಯಕ್ತಿ ಅನಿಲ್ ಶರ್ಮಾ, ಅನಾರೋಗ್ಯಕ್ಕೀಡಾಗಿರುವ ತನ್ನ ಸಂಬಂಧಿಗೆ ಸಹಾಯ ಕೋರಿ ದೆಹಲಿ ಸಚಿವಾಲಯಕ್ಕೆ ಭೇಟಿ ನೀಡಿದ್ದ, ಆತನ ಬಳಿ ದೆಹಲಿ ಸಚಿವಾಲಯಕ್ಕೆ ಪ್ರವೇಶಿಸುವುದಕ್ಕೆ ಪಾಸ್ ಇತ್ತು ಎಂದು ತಿಳಿದುಬಂದಿದೆ. 
ಮುಖ್ಯಮಂತ್ರಿಗಳು ಸಾರ್ವಜನಿಕ  ಅಹವಾಲು ಸ್ವೀಕಾರ ನಿರ್ವಹಣಾ ವ್ಯವಸ್ಥೆ(ಪಿಜಿಎಂಎಸ್) ನಲ್ಲಿ ಮಹಿಳೆ ಹಾಗೂ ಪುರುಷರನ್ನು ಪ್ರತ್ಯೇಕವಾಗಿ ತಪಾಸಣೆ ಮಾಡಲಾಗುತ್ತದೆ. ಅದರ ಹೊರತಾಗಿಯೂ ಸಹ ಮುಖ್ಯಮಂತ್ರಿಗಳ ಮೇಲೆ ದಾಳಿ ನಡೆದಿದೆ. ದೆಹಲಿಯಲ್ಲಿ ಮುಖ್ಯಮಂತ್ರಿಗೂ ಸುರಕ್ಷತೆ ಇಲ್ಲದಂತಾಗಿದೆ. ಇದು ಗಂಭೀರವಾದ ಭದ್ರತಾ ವೈಫಲ್ಯ ಎಂದು ಆಮ್ ಆದ್ಮಿ ಪಕ್ಷ ಆಕ್ರೋಶ ವ್ಯಕ್ತಪಡಿಸಿದ್ದು, ಬಿಜೆಪಿ ಹಾಗೂ ದೆಹಲಿ ಪೊಲೀಸರ ಷಡ್ಯಂತ್ರದಿಂದ ಹೀಗಾಗಿದೆ ಎಂದು ಆಪ್ ಆರೋಪಿಸಿದೆ.
ಆದರೆ ದೆಹಲಿ ಮುಖ್ಯಮಂತ್ರಿಗಳ ಮೇಲೆ ಖಾರದ ಪುಡಿ ಎರಚಿ ದಾಳಿ ನಡೆಸಿರುವುದನ್ನು ದೆಹಲಿ ಪೊಲೀಸರು ಖಚಿತವಾಗಿ ಉಲ್ಲೇಖಿಸಿಲ್ಲ. ಆದರೆ ಸಿಎಂ ಮೇಲೆ ಏಕಾಏಕಿ ದಾಳಿ ನಡೆಸಿರುವ ವ್ಯಕ್ತಿಯನ್ನು ಪೊಲೀಸರು ಬಂಧಿಸಿ ವಿಚಾರಾಣೆಗೊಳಪಡಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com