ವಾಟ್ಸ್ ಅಪ್ ಭಾರತದ ಮುಖ್ಯ್ಸಥನಾಗಿ ಅಭಿಜಿತ್ ಬೋಸ್, ಮುಂದಿನ ವರ್ಷಾರಂಭಕ್ಕೆ ಅಧಿಕಾರ ಸ್ವೀಕಾರ

ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್ ಅಪ್ ಅಭಿಜಿತ್ ಬೋಸ್ ಅವರನ್ನು ವಾಟ್ಸ್ ಅಪ್ ಭಾರತ ಮುಖ್ಯಸ್ಥನೆಂದು ಘೋಷಿಸಿದೆ. ವಿಶೇಷವೆಂದರೆ ಭಾರತ ಸರ್ಕಾರ ವಾಟ್ಸ್ ಅಪ್ ಸಂಸ್ಥೆಯ ಮುಂದಿಟ್ಟ....
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್ ಅಪ್ ಅಭಿಜಿತ್ ಬೋಸ್ ಅವರನ್ನು ವಾಟ್ಸ್ ಅಪ್ ಭಾರತ ಮುಖ್ಯಸ್ಥನೆಂದು ಘೋಷಿಸಿದೆ. ವಿಶೇಷವೆಂದರೆ ಭಾರತ ಸರ್ಕಾರ ವಾಟ್ಸ್ ಅಪ್ ಸಂಸ್ಥೆಯ ಮುಂದಿಟ್ಟ ಬೇಡಿಕೆಗಳಲ್ಲಿ ಇದೊಂದು ಮಹತ್ವಪೂರ್ಣ ಬೇಡಿಕೆಯಾಗಿತ್ತು.
ಮುಂದಿನ ವರ್ಷಾರಂಭದಲ್ಲಿ ಅಧಿಕಾರ ಸ್ವೀಕರಿಸಲಿರುವ ಅಭಿಜಿತ್ ಕ್ಯಾಲಿಫೋರ್ನಿಯಾದ ಹೊರಗೆ ವಾಟ್ಸ್ ಅಪ್ ನ ಪೂರ್ಣ ತಂಡವನ್ನು ನಿರ್ವಹಿಸುವ ಪ್ರಥಮ ವ್ಯಕ್ತಿ ಎನಿಸಲಿದ್ದಾರೆ. ಇವರು ಗುರುಗ್ರಾಮ್ ಮೂಲದಿಂದ ಭಾರತ ವಾಟ್ಸ್ ಅಪ್ ತಂಡವನ್ನು ನಿರ್ವಹಿಸಲಿದ್ದಾರೆ ಎಂದು ಸಂಸ್ಥೆಯ ಹೇಳಿಕೆಯಲ್ಲಿ ತಿಳಿಸಿದೆ.
ಬೋಸ್ ಮತ್ತು ಅವರ ತಂಡವು ದೊಡ್ಡ ಮತ್ತು ಸಣ್ಣ ಮಟ್ಟದ ವ್ಯವಹಾರಗಳೆರಡರ ಕುರಿತಂತೆ ಗ್ರಾಹಕರೊಡನೆ ಸಂಪರ್ಕ ನಡೆಸಲು ಸಹಕಾರ ನೀಡಲಿದೆ ಎಂದು ಹೇಳಿಕೆಯಲ್ಲಿ ವಿವರಿಸಲಾಗಿದೆ.
ವಾಟ್ಸ್ ಅಪ್ ಬಾರತದ ಆಡಳಿತ ನೀತಿಗೆ ಬದ್ದವಾಗಿದೆ.ಭಾರತದ ವೇಗವಾಗಿ ಬೆಳೆಯುತ್ತಿರುವ ಡಿಜಿಟಲ್ ಆರ್ಥಿಕತೆಯಲ್ಲಿ ಜನರನ್ನು ಸಂಪರ್ಕಿಸಲು ಮತ್ತು ಬೆಂಬಲಿಸಲು ಸಹಾಯ ಮಾಡುವ ಮೂಲಕ ನಮ ಬದ್ದತೆಯನ್ನು ಉಳಿಸಿಕೊಳ್ಳುವುದಕ್ಕೆ ನಾವು ಉತ್ಸುಕರಾಗಿದ್ದೇವೆ ಎಂದು ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮ್ಯಾಟ್ ಐಡಿಮಾ ಹೇಳಿದ್ದಾರೆ.
ಯಶಸ್ವೀ ವಾಣಿಜ್ಯೋದ್ಯಮಿಯಾಗಿ, ಭಾರತದಾದ್ಯಂತ ಉದ್ಯಮಗಳಿಗೆ ಸೇವೆ ಸಲ್ಲಿಸುವ  ಮೂಲಕ ರ್ಥಪೂರ್ಣವಾದ ಪಾಲುದಾರಿಕೆಗಳನ್ನು ನಿರ್ಮಿಸಲು ಬೋಸ್ ಯಶಸ್ವಿಯಾಗಲಿದ್ದಾರೆ.ಎಜಿಟ್ಯಾಬ್ ಜತೆಗೆ ವಾಟ್ಸ್ ಅಪ್ ಸಂಸ್ಥೆಗೆ ಸೇರಿದ್ದ ಬೋಸ್ ಸಂಸ್ಥೆಯ ಸಹ ಸಂಸ್ಥಾಪಕ ಹಾಗೂ ಸಿಇಓ ಆಗಿದ್ದಾರೆ.  2011 ರಲ್ಲಿ ಸ್ಥಾಪನೆಯಾದ ಎಜಿಟ್ಯಾಬ್ ಉನ್ನತ ಮಟ್ಟದ ಬಂಡವಾಳಶಾಹಿಗಳ ಬೆಂಬಲದ ಎಲೆಕ್ಟ್ರಾನಿಕ್ ಪಾವತಿಯ ಕಂಪನಿಯಾಗಿದೆ.
ಫೇಸ್ ಬುಕ್ ಒಡೆತನದ  ಕಂಪೆನಿಯು ನಕಲಿ ಸಂದೇಶಗಳನ್ನು ನಿಗ್ರಹಿಸಲು ತನ್ನ ನಿಯಮಾವಳಿಗಳನ್ನು ಬದಲಿಸಿಕೊಳ್ಳಬೇಕಾದ ಒತ್ತಡದಲ್ಲಿದೆ.ವಾಟ್ಸ್ ಅಪ್ ಸಂದೇಶದಲ್ಲಿ ಸುಳ್ಳು ಸುದ್ದಿ ಹಬ್ಬುವ ಕಾರಣ ಜನಾಕ್ರೋಶಕ್ಕೆ ಕಾರಣವಾಗಿ ಅನೇಕ ಅಮಾಯಕರು ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಸರ್ಕಾರ ವಾಟ್ಸ ಅಪ್ ಸಂಸ್ಥೆಗೆ ಎಚ್ಚರಿಕೆಯನ್ನು ರವಾನಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com