ವಂಶವಾಹಿ ಹಾಗೂ ಜಾತಿ ರಾಜಕಾರಣ ನಿರ್ಲಕ್ಷ್ಯಿಸಿ: ಕಾರ್ಯಕರ್ತರಿಗೆ ಅಮಿತ್ ಶಾ ಕರೆ

ವಂಶವಾಹಿ ಹಾಗೂ ಓಲೈಕೆಯ ಜಾತಿ ರಾಜಕರಾಣವನ್ನು ಮತದಾರರು ನಿರ್ಲಕ್ಷ್ಯಿಸಬೇಕೆಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕರೆ ನೀಡಿದ್ದಾರೆ...
ಅಮಿತ್ ಶಾ
ಅಮಿತ್ ಶಾ
ಜೈಪುರ:  ವಂಶವಾಹಿ ಹಾಗೂ ಓಲೈಕೆಯ ಜಾತಿ ರಾಜಕರಾಣವನ್ನು ಮತದಾರರು ನಿರ್ಲಕ್ಷ್ಯಿಸಬೇಕೆಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ  ಅಮಿತ್ ಶಾ ಕರೆ ನೀಡಿದ್ದಾರೆ.
ರಾಜಸ್ತಾನ ವಿಧಾನಸಭೆ ಚುನಾವಣೆ ಗೆ ಅಭ್ಯರ್ಥಿಗಳ ಪಟ್ಟಿ ರಿಲೀಸ್ ಮಾಡಿದ ನಂತರ, ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅಮಿತ್ ಶಾ., ಜಾತಿ ರಾಜಕಾರಣವನ್ನು ಅಲಕ್ಷ್ಯಮಾಡಿ,. ಬಿಜೆಪಿ ರಾಮ ಮಂದಿರ ಕಟ್ಟಲು ಬದ್ಧವಾಗಿದೆ ಎಂದು ಹೇಳಿದ್ದಾರೆ.
ಕಳೆದ 50 ವರ್ಷಗಳಿಂದ ವಂಶವಾಹಿ ಜಾತಿ ರಾಜಕಾರಣದ ಯೋಜನೆಗಳಿಂದ ಪಂಚಾಯಿತ್ ನಿಂದ ಪಾರ್ಲಿಮೆಂಟ್ ವರೆಗೆ ಅಧಿಕಾರ ನಡೆಸಿದೆ. ಹೀಗಾಗಿ ಪ್ರಜಾಪ್ರಭುತ್ವ ನಾಶ ಮಾಡುತ್ತಿದೆ ಎಂದು ಹೇಳಿದ್ದಾರೆ.
ಸಾಮರ್ಥ್ಯವಿದ್ದರೂ ಕೆಲವರಿಗೆ ಮುಂದುವರಿಯಲು ಸೂಕ್ತ ವೇದಿಕೆ ಸಿಗಲಿಲ್ಲ,  ಒಂದು ವೇಳೆ ನೀವು ರಾಜಕೀಯದಲ್ಲಿ ಮುಂದುವರಿಯಬೇಕೆಂದರೇ ನೀವು ಶಕ್ತಿಯುತ ಕುಟುಂಬದಲ್ಲಿ ಜನಿಸಬೇಕು ಎಂಬುದಾಗಿತ್ತು, ಆದರೆ ನರೇಂದ್ರ ಮೋದಿ ಆಡಳಿತದಲ್ಲಿ  ಈ ಎಲ್ಲಾ ಕೆಟ್ಟ ಶಕ್ತಿಗಳು ನಾಶವಾಗಿವೆ, 
ರಾಮ ಜನ್ಮ ಭೂಮಿಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಲು ಬಿಜೆಪಿ ಬದ್ಧವಾಗಿದೆ, ಆದರೆ ಸದ್ಯ ಅದು ಸುಪ್ರೀಂಕೋರ್ಟ್ ನಲ್ಲಿದೆ, ಲೋಕಸಭೆ ಚುನಾವಣೆಗೂ ಮುನ್ನ ತೀರ್ಪು ನೀಡುವಂತೆ, ನಾವು ಸುಪ್ರೀಂಕೋರ್ಟ್ ನಲ್ಲಿ ಮನವಿ ಮಾಡಿದ್ದೇವೆ, ಆದರೆ ಕಾಂಗ್ರೆಸ್ ವಕೀಲರು 2019 ರ ಲೋಕಸಭೆ ಚುನಾವಣೆ ನಂತರ ತೀರ್ಪು ನೀಡುವಂತೆ ಒತ್ತಡ ಹಾಕುತ್ತಿದ್ದಾರೆ ಎಂದು ಅಮಿತ್ ಶಾ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com