ಪಾಕ್ ಐತಿಹಾಸಿಕ ಗುರುದ್ವಾರಕ್ಕೆ ಭಾರತದಿಂದ ವಿಶೇಷ ಕಾರಿಡಾರ್ ನಿರ್ಮಾಣ!

ಪಾಕಿಸ್ತಾನದ ರಾವಿ ನದಿ ತೀರದಲ್ಲಿನ ಕರ್ತಾರ್ ಪುರ ದರ್ಬಾರ್ ಸಾಹಿಬ್ ಗುರುದ್ವಾರಕ್ಕೆ ತೆರಳುವ ಸಿಖ್ಖ್ ಯಾತ್ರಿಗಳಿಗಾಗಿ ಪಂಜಾಬಿನ ಅಂತರಾಷ್ಟ್ರೀಯ ಗಡಿಯಲ್ಲಿನ ಪಂಜಾಬಿನ ಗುರುದಾಸ್ ಪುರ ಜಿಲ್ಲೆ....
ಕರ್ತಾರ್ ಪುರ್ ಗುರುದ್ವಾರ
ಕರ್ತಾರ್ ಪುರ್ ಗುರುದ್ವಾರ
ನವದೆಹಲಿ: ಪಾಕಿಸ್ತಾನದ ರಾವಿ ನದಿ ತೀರದಲ್ಲಿನ ಕರ್ತಾರ್ ಪುರ ದರ್ಬಾರ್ ಸಾಹಿಬ್ ಗುರುದ್ವಾರಕ್ಕೆ ತೆರಳುವ ಸಿಖ್ಖ್ ಯಾತ್ರಿಗಳಿಗಾಗಿ ಪಂಜಾಬಿನ ಅಂತರಾಷ್ಟ್ರೀಯ ಗಡಿಯಲ್ಲಿನ ಪಂಜಾಬಿನ ಗುರುದಾಸ್ ಪುರ ಜಿಲ್ಲೆ ಡೇರಾ ಬಾಬಾ ನಾನಕ್ ನಿಂದ ವಿಶೇಷ ಕಾರಿಡಾರ್ ನಿರ್ಮಾಣ ಮಾಡಲಾಗುವುದು ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಗುರುವಾರ ಹೇಳಿದ್ದಾರೆ.
ಸಿಖ್ಖರ ಪವಿತ್ರ ಗುರು ಗುರು ನಾನಕರ 550ನೇ ಜನ್ಮದಿನದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ನೇತ್ರೂತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಸಿಖ್ಖ್ ಸಮುದಾಯದವರ ಭಾವನೆಗಳಿಗೆ ಗೌರವ ಸೂಚಿಸುವ ಹಿನ್ನೆಲೆಯಲ್ಲಿ ಪಾಕಿಸ್ತಾನ ಸರ್ಕಾರದೊಡನೆ ಸಹ ತಾವು ಮಾತುಕತೆ ನಡೆಸಿದ್ದಾಗಿ ಸಿಂಗ್ ಹೇಳಿದ್ದು ಪಾಕ್ ಆಡಳಿತದ ಪ್ರದೇಶದಲ್ಲಿ ಭಾರತ ಕಾರಿಡಾರ್ ಅಭಿವೃದ್ದಿಗೆ ನೆರವಾಗಲಿದೆ ಎಂದು ಅವರು ಘೋಷಿಸಿದ್ದಾರೆ.
ಗುರುದಾಸ್ ಪುರ ಜಿಲ್ಲೆ ಅಂತರರಾಷ್ಟ್ರೀಯ ಗಡಿಯಲ್ಲಿನ ಡೇರಾ ಬಾಬಾ ನಾನಕ್ ನಿಂದ ಕರ್ತಾರ್ ಪುರ ವರೆಗಿನ ಕಾರಿಡಾರ್ ಅಭಿವೃದ್ದಿಗೆ  ಕ್ಯಾಬಿನೆಟ್ ಅನುಮೋದನೆ ನೀಡಿದೆ. ಕೇಂದ್ರ ಸರ್ಕಾರದ ನಿಧಿಯೊಂದಿಗೆ ಕಾರ್ಯಾಚರಣೆ ನಡೆಸಲು ಎಲ್ಲಾ ಆಧುನಿಕ ಸೌಕರ್ಯಗಳು ಮತ್ತು ಸೌಲಭ್ಯಗಳನ್ನು ಹೊಂದಿರುವ  ಕಾರಿಡಾರ್ ಇದಾಗಲಿದೆ ಎಂದು ಸಿಂಗ್ ತಮ್ಮ ಸರಣಿ ಟ್ವೀಟ್ ಮೂಲಕ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com