ಜಮ್ಮು-ಕಾಶ್ಮೀರ ವಿಧಾನಸಭೆ ವಿಸರ್ಜನೆಗೆ ಏಕಾಏಕಿ ಆದೇಶ: ರಾಜ್ಯಪಾಲರು ನೀಡಿದ ಕಾರಣಗಳಿವು!

ಜಮ್ಮು-ಕಾಶ್ಮೀರ ವಿಧಾನಸಭೆ ವಿಸರ್ಜನೆಗೆ ಏಕಾಏಕಿ ಆದೇಶ ಹೊರಡಿಸಿರುವ ರಾಜ್ಯಪಾಲ ಸತ್ಯಪಾಲ್ ಮಲೀಕ್ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಜಮ್ಮು-ಕಾಶ್ಮೀರ ವಿಧಾನಸಭೆ ವಿಸರ್ಜನೆಗೆ ಏಕಾಏಕಿ ಆದೇಶ: ರಾಜ್ಯಪಾಲರು ನೀಡಿದ ಕಾರಣಗಳಿವು!
ಜಮ್ಮು-ಕಾಶ್ಮೀರ ವಿಧಾನಸಭೆ ವಿಸರ್ಜನೆಗೆ ಏಕಾಏಕಿ ಆದೇಶ: ರಾಜ್ಯಪಾಲರು ನೀಡಿದ ಕಾರಣಗಳಿವು!
ಶ್ರೀನಗರ: ಜಮ್ಮು-ಕಾಶ್ಮೀರ ವಿಧಾನಸಭೆ ವಿಸರ್ಜನೆಗೆ ಏಕಾಏಕಿ ಆದೇಶ ಹೊರಡಿಸಿರುವ ರಾಜ್ಯಪಾಲ ಸತ್ಯಪಾಲ್ ಮಲೀಕ್ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. 
ತಕ್ಷಣವೇ ವಿಧಾನಸಭೆ ವಿಸರ್ಜನೆಗೆ ಆದೇಶ ನೀಡಿರುವುದಕ್ಕೆ ಪ್ರಮುಖ ಕಾರಣಗಳನ್ನು ನೀಡಿರುವ ರಾಜ್ಯಪಾಲರು, ಪರಸ್ಪರ ವಿರುದ್ಧವಾಗಿರುವ ರಾಜಕೀಯ ಸಿದ್ಧಾಂತ ಹೊಂದಿರುವ ಪಕ್ಷಗಳು ಒಟ್ಟಿಗೆ ಸರ್ಕಾರ ರಚಿಸಿದಾಗ ಸ್ಥಿರ ಆಡಳಿತ ನೀಡುವುದಕ್ಕೆ ಸಾಧ್ಯತೆಗಳು ಕಡಿಮೆ ಇವೆ. ಅಷ್ಟೇ ಅಲ್ಲದೇ ಈ ಹಂತದಲ್ಲಿ ಕುದುರೆ ವ್ಯಾಪಾರವೂ ನಡೆಯುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ವಿಧಾನಸಭೆ ವಿಸರ್ಜನೆಗೆ ಆದೇಶ ನೀಡಿರುವುದಾಗಿ ಹೇಳಿದ್ದಾರೆ. 
ಪಿಡಿಪಿ ಕಾಂಗ್ರೆಸ್, ಎನ್ ಸಿ ಬೆಂಬಲದಿಂದ ಸರ್ಕಾರ ರಚನೆ ಮಾಡಲು ಹಕ್ಕು ಮಂಡಿಸಿತ್ತು ಈ ನಂತರ ಪೋಪಲ್ಸ್ ಕಾನ್ಫರೆನ್ಸ್ ನ ಸಾಜದ್ ಲೋನ್ ಬಿಜೆಪಿ ಹಾಗೂ ಇತರ ಪಕ್ಷಗಳ ಶಾಸಕರ ಬೆಂಬಲ ಪಡೆದು ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದರು. ಈ  ಬೆನ್ನಲ್ಲೇ ರಾಜ್ಯಪಾಲರು ವಿಧಾನಸಭೆ ವಿಸರ್ಜನೆಗೆ ಆದೇಶ ಹೊರಡಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com