ಬ್ರಾಹ್ಮಣರ ಭಾವನೆಗಳಿಗೆ ಧಕ್ಕೆ: ಟ್ವಿಟರ್ ಸಿಇಒ ವಿರುದ್ಧ ಮಾನನಷ್ಟ ಮೊಕದ್ದಮೆ!

ಭಾರತಕ್ಕೆ ಬಂದಿದ್ದ ಟ್ವಿಟರ್‌ ಸಿಇಒ ಜಾಕ್‌ ಡಾರ್ಸೆ ಅವರು ಬ್ರಾಹ್ಮಣ ವಿರೋಧಿ ಪೋಸ್ಟರ್ ಹಾಕಿದ್ದಕ್ಕೆ ದೇಶಾದ್ಯಂತ ಟೀಕೆ ವ್ಯಕ್ತವಾಗುತ್ತಿದ್ದು, ವಿಪ್ರ ಸಂಘಟನೆ ಟ್ವಿಟರ್ ಸಿಇಒ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಎಚ್ಚರಿಸಿದೆ.
ಬ್ರಾಹ್ಮಣರ ಭಾವನೆಗಳಿಗೆ ಧಕ್ಕೆ: ಟ್ವಿಟರ್ ಸಿಇಒ ವಿರುದ್ಧ ಮಾನನಷ್ಟ ಮೊಕದ್ದಮೆ!
ಬ್ರಾಹ್ಮಣರ ಭಾವನೆಗಳಿಗೆ ಧಕ್ಕೆ: ಟ್ವಿಟರ್ ಸಿಇಒ ವಿರುದ್ಧ ಮಾನನಷ್ಟ ಮೊಕದ್ದಮೆ!
ಜೈಪುರ: ಭಾರತಕ್ಕೆ ಬಂದಿದ್ದ ಟ್ವಿಟರ್‌ ಸಿಇಒ ಜಾಕ್‌ ಡಾರ್ಸೆ ಅವರು ಬ್ರಾಹ್ಮಣ ವಿರೋಧಿ ಪೋಸ್ಟರ್ ಹಾಕಿದ್ದಕ್ಕೆ ದೇಶಾದ್ಯಂತ ಟೀಕೆ ವ್ಯಕ್ತವಾಗುತ್ತಿದ್ದು,  ವಿಪ್ರ ಸಂಘಟನೆ ಟ್ವಿಟರ್ ಸಿಇಒ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಎಚ್ಚರಿಸಿದೆ. 
ಟ್ವಿಟರ್ ಸಿಇಒ ಜಾಕ್ ಡಾರ್ಸೆ ಅವರು ಬ್ರಾಹ್ಮಣರ ಭಾವನೆಗಳಿಗೆ ಧಕ್ಕೆ ಉಂಟುಮಾಡಿದ್ದಾರೆ ಎಂದು ಅಡ್ವೊಕೇಟ್ ಹಸ್ತಿಮಲ್ ಸಾರಸ್ವತ್ ಆರೋಪಿಸಿದ್ದು, ರಾಜಸ್ಥಾನದ ಹೈಕೋರ್ಟ್ ನಲ್ಲಿ ಟ್ವಿಟರ್ ಸಿಇಒ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಹೇಳಿದ್ದಾರೆ. 
ಬ್ರಾಹ್ಮಣ ಸಮುದಾಯದ ಆಧಿಪತ್ಯವನ್ನು ಅಂತ್ಯಗೊಳಿಸುವುದಕ್ಕೆ ಕರೆ ನೀಡಿದ್ದ ಪೋಸ್ಟರ್ ನ್ನು ಹಿಡಿದು ಪೋಟೋಗೆ ಪೋಸ್ ನೀಡಿದ್ದಕ್ಕಾಗಿ ಟ್ವಿಟರ್ ಸಿಇಒ ವಿರುದ್ಧ ಟೀಕೆಗಳು ವ್ಯಕ್ತವಾಗಿತ್ತು. ಈ ಬೆನ್ನಲ್ಲೆ ಟ್ವಿಟರ್ ಕ್ಷಮೆಯನ್ನೂ ಯಾಚಿಸಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com