ಮುಸ್ಲಿಂಮರ ಶೇ.90 ರಷ್ಟು ಮತಗಳಿಗಾಗಿ ಬೇಡಿಕೆ ಇಡುತ್ತಿರುವ ಕಮಲ್ ನಾಥ್ ವಿಡಿಯೋ ವೈರಲ್!

ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಒಂದಲ್ಲಾ ಒಂದು ಯಡವಟ್ಟು ಮಾಡಿಕೊಳ್ಳುತ್ತಿದೆ.
ಮುಸ್ಲಿಂಮರ ಶೇ.90 ರಷ್ಟು ಮತಗಳಿಗಾಗಿ ಬೇಡಿಕೆ ಇಡುತ್ತಿರುವ ಕಮಲ್ ನಾಥ್ ವಿಡಿಯೋ ವೈರಲ್!
ಮುಸ್ಲಿಂಮರ ಶೇ.90 ರಷ್ಟು ಮತಗಳಿಗಾಗಿ ಬೇಡಿಕೆ ಇಡುತ್ತಿರುವ ಕಮಲ್ ನಾಥ್ ವಿಡಿಯೋ ವೈರಲ್!
Updated on
ಭೋಪಾಲ್: ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಒಂದಲ್ಲಾ ಒಂದು ಯಡವಟ್ಟು ಮಾಡಿಕೊಳ್ಳುತ್ತಿದೆ. ಪ್ರಾರಂಭದಲ್ಲಿ ಆರ್ ಎಸ್ಎಸ್ ಕುರಿತ ಹೇಳಿಕೆಯಿಂದ ಪಕ್ಷ ಮುಜುಗರ ಎದುರಿಸಿದ್ದರೆ, ನಂತರದ ದಿನಗಳಲ್ಲಿ ಕಮಲ್ ನಾಥ್ ಅವರ ಮಹಿಳೆಯರ ಕುರಿತಾದ ಹೇಳಿಕೆ ಪಕ್ಷಕ್ಕೆ ಮುಜುಗರ ಉಂಟುಮಾಡಿತ್ತು. ಈಗ ಕಮಲ್ ನಾಥ್ ಮತ್ತೊಮ್ಮೆ ಇದೇ ರೀತಿಯ ಕಾರಣವೊಂದಕ್ಕೆ ಮತ್ತೆ ಸುದ್ದಿಯಲ್ಲಿದ್ದಾರೆ. 
ಮುಸ್ಲಿಂ ಬಾಹುಳ್ಯವಿರುವ ಪ್ರದೇಶದಲ್ಲಿ ಶೇ.90 ರಷ್ಟು ಮತಗಳು ಕಾಂಗ್ರೆಸ್ ಗೇ ಬರುವಂತೆ ನೋಡಿಕೊಳ್ಳುವುದಕ್ಕೆ ಮುಸ್ಲಿಂ ಮುಖಂಡರಲ್ಲಿ ಕಮಲ್ ನಾಥ್ ಮನವಿ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿರುವ ಕಾಂಗ್ರೆಸ್ ವಿರುದ್ಧ ಬಿಜೆಪಿ ಅಸಮಾಧಾನ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ಪಕ್ಷ ಕೇವಲ ಮುಸ್ಲಿಂ ಸಮುದಾಯದ ಓಲೈಕೆಯ ಬಗ್ಗೆಯಷ್ಟೇ ಗಮನ ಹರಿಸುತ್ತಿದೆ ಎಂದು ಆರೋಪಿಸಿದೆ. 
ಇದೇ ವೇಳೆ ಕಾಂಗ್ರೆಸ್ ಸಹ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಕೋಮು ಆಧಾರದಲ್ಲಿ ಮತದಾರರನ್ನು ಒಡೆಯುವುದಕ್ಕೆ ಬಿಜೆಪಿ ಮಾಡುತ್ತಿರುವ ಆರೋಪ ಇದಾಗಿದೆ ಎಂದು ಹೇಳಿದೆ. ಬಿಜೆಪಿಯ ಮತಯಾಚನೆ ಕುರಿತಾಗಿ ಮಾತನಾಡುತ್ತಿದ್ದ ಕಮಲ್ ನಾಥ್, ಬಿಜೆಪಿ ಒಂದೇ ಒಂದು ಸಂದೇಶ ಹೊಂದಿದೆ, ನರೇಂದ್ರ ಮೋದಿಗೆ ಹಾಕುವ ಪ್ರತಿ ಮತವೂ, ಹಿಂದೂಗಳಿಗೆ ಮತ ಹಾಕಿದಂತೆ, ಮುಸ್ಲಿಮರಿಗೆ ಮತ ನೀಡಬೇಕೆಂದರೆ ಕಾಂಗ್ರೆಸ್ ಗೆ ಮತ ನೀಡಿ ಎಂಬ ಸಂದೇಶ ರವಾನೆ ಮಾಡುತ್ತಿದೆ. ಈ ವಿಷಯವನ್ನು ನಂತರ ನೋಡಿಕೊಳ್ಳೋಣ, ಆದರೆ ಮುಸ್ಲಿಂ ಬಾಹುಳ್ಯವಿರುವ ಪ್ರದೇಶಗಳಲ್ಲಿ  ಶೇ.90 ರಷ್ಟು ಮತದಾನವಾಗುವಂತೆ ನೋಡಿಕೊಳ್ಳಿ ಎಂದು ಮುಸ್ಲಿಂ ಮುಖಂಡರಲ್ಲಿ ಕಮಲ್ ನಾಥ್ ಕೇಳುತ್ತಿರುವ ವಿಡಿಯೋ ವೈರಲ್ ಆಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com