ಸಾರ್ವತ್ರಿಕ ಚುನಾವಣೆ ಸಮೀಪವಾಗುತ್ತಿದ್ದಂತೆ ಟಿವಿ ಜಾಹೀರಾತಿನಲ್ಲಿ ಬಿಜೆಪಿ ನಂ.1 ಸ್ಥಾನಕ್ಕೆ!

ಸಾರ್ವತ್ರಿಕ ಚುನಾವಣೆ ಸಮೀಪಿಸುತ್ತಿದ್ದ ಹಾಗೆ ದೇಶದ ಪ್ರಮುಖ ರಾಜಕೀಯ ಪಕ್ಷ, ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ದೂರದರ್ಶನದಲ್ಲಿ ನಂಬರ್ 1 ಜಾಹೀರಾತುದಾರನಾಗಿ ಹೊರಹೊಮ್ಮಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಸಾರ್ವತ್ರಿಕ ಚುನಾವಣೆ ಸಮೀಪಿಸುತ್ತಿದ್ದ ಹಾಗೆ ದೇಶದ ಪ್ರಮುಖ ರಾಜಕೀಯ ಪಕ್ಷ, ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ದೂರದರ್ಶನದಲ್ಲಿ ನಂಬರ್ 1 ಜಾಹೀರಾತುದಾರನಾಗಿ ಹೊರಹೊಮ್ಮಿದೆ.
ಬ್ರಾಡ್ ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ ಒದಗಿಸಿರುವ ಅಂಕಿ ಅಂಶಗಳ ಆಧಾರದಲ್ಲಿ ಬಿಜೆಪಿ ಭಾರತದ ಪ್ರಮುಖ ಟೆಲಿವಿಷನ್ ಜಾಹೀರಾತು ಬ್ರಾಂಡ್ ಆಗಿ ಸ್ಥಾನ ಪಡೆದಿದೆ ಎಂದು ತಿಳಿಸಲಾಗಿದೆ.
ಈ ನವೆಂಬರ್ 12-16ರ ನಡುವೆ ಬಿಜೆಪಿ22,099 ಟಿವಿ ಜಾಹೀರಾತುಗಳನ್ನು ನೀಡಿದ್ದು ಇದಕ್ಕೆ ಹಿಂದೆ ಅಗ್ರ ಸ್ಥಾನದಲ್ಲಿದ್ದ ವಿಮಲ್ ಪಾನ್ ಮಸಾಲಾ ಸಂಸ್ಥೆಯನ್ನು ಕೆಳಗೆ ತಳ್ಳಿ ನಂಬರ್ 1 ಪಟ್ಟಕ್ಕೆ ಏರಿದೆ.
ಇನ್ನು ನೆಟ್ ಫ್ಲಿಕ್ಸ್ (12,951) ಹಾಗೂ ಟ್ರೀವಾಂಗೋ (12,795) ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದೆ. ಎಕನಾಮಿಕ್ಸ್ ಟೈಮ್ಸ್ ನಲ್ಲಿನ ಒಂದು ವರದಿಯಂತೆ, 15 ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿರುವ ಪಕ್ಷವು ಐದು ರಾಜ್ಯಗಳಲ್ಲಿ ಜಾಹೀರಾತು ನೀಡುವಿಕೆಯಲ್ಲಿ ಪ್ರಥಮ ಸ್ಥಾನದಲ್ಲಿದೆ. ಇನ್ನು ಛತ್ತೀಸ್ ಗಢ, ರಾಜಸ್ಥಾನ, ಮಧ್ಯಪ್ರದೇಶ, ತೆಲಂಗಾಣ ಹಾಗೂ ಮಿಜೋರಾಮ್ ಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು ಇದ್ ಐದು ರಾಜ್ಯಗಳಲ್ಲಿ ಬಿಜೆಪಿ ಅತಿ ಹೆಚ್ಚು ಸಂಖ್ಯೆಯ ಟಿವಿ ಜಾಹೀರಾತನ್ನು ಪ್ರಸಾರ ಮಾಡುತ್ತಿದೆ.
ವಿಶೇಷವೆಂದರೆ ಕಾಂಗ್ರೆಸ್ ಪಕ್ಷ ಮಾತ್ರ ಟಾಪ್ ೧೦ರ ಜಾಹೀರಾತುದಾರರ ಪಟ್ಟಿಯಲ್ಲಿ ಎಲ್ಲಿಯೂ ಕಾಣಿಸಿಕೊಂಡುಇಲ್ಲ.
ದಿ ವೈರ್ ವರದಿಯ ಪ್ರಕಾರ, ಬಿಜೆಪಿ ಸರ್ಕಾರ  2014 ರಿಂದ ತನ್ನ ಅಧಿಕಾರಾವಧಿಯಲ್ಲಿ ಜಾಹೀರಾತಿಗಾಗಿ ಸುಮಾರು  5 ಸಾವಿರ ಕೋಟಿ ರೂ.ಗಳನ್ನು ಖರ್ಚು ಮಾಡಿದೆ ಇದು ಮನಮೋಹನ್ ಸಿಂಗ್ ಸರ್ಕಾರ ಹತ್ತು ವರ್ಷದ ಅವಧಿಯಲ್ಲಿ ಖರ್ಚು ಮಾಡಿದ್ದ ಮೊತ್ತಕ್ಕೆ ಸಮನಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com