ಪ್ರಖ್ಯಾತ ಶಾಸ್ತ್ರೀಯ ಸಂಗೀತ ಸಾಮ್ರಾಟ್ ಉಸ್ತಾದ್ ಇಮ್ರತ್ ಖಾನ್ ಇನ್ನಿಲ್ಲ

ಭಾರತ ಶಾಸ್ತ್ರೀಯ ಸಂಗೀತದ ಸಾಮ್ರಾಟ್ ಎಂದೇ ಕರೆಯಲ್ಪಡುತ್ತಿದ್ದ ಸಿತಾರ್ ಹಾಗೂ ಸೂರ್ ಭರ್ ಗಳನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿಗೊಳಿಸಿದ್ದ ಉಸ್ತಾದ್ ಇಮ್ರತ್ ಖಾನ್ ಅಮೆರಿಕಾದಲ್ಲಿ ನಿಧನರಾದರು.
ಉಸ್ತಾದ್ ಇಮ್ರತ್ ಖಾನ್
ಉಸ್ತಾದ್ ಇಮ್ರತ್ ಖಾನ್
Updated on
ನವದೆಹಲಿ: ಭಾರತ ಶಾಸ್ತ್ರೀಯ ಸಂಗೀತದ ಸಾಮ್ರಾಟ್ ಎಂದೇ ಕರೆಯಲ್ಪಡುತ್ತಿದ್ದ ಸಿತಾರ್ ಹಾಗೂ ಸೂರ್ ಬಹಾರ್ ಗಳನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿಗೊಳಿಸಿದ್ದ ಉಸ್ತಾದ್ ಇಮ್ರತ್ ಖಾನ್ ಅಮೆರಿಕಾದಲ್ಲಿ  ನಿಧನರಾದರು. ಅವರಿಗೆ 83 ವರ್ಷ ವಯಸ್ಸಾಗಿತ್ತು.
ನ್ಯುಮೋನಿಯಾದಿಂದ ಬಳಲುತ್ತಿದ್ದ ಇಮ್ರತ್ ಖಾನ್ ಅವರನ್ನು ವಾರದ ಹಿಂದೆ ಸೇಂಟ್ ಲೂಯಿಸ್ ಆಸ್ಪತ್ರೆಗೆ ದಾಖಲಿಸಿಸಲಾಗಿತ್ತು. ಅವರು ಗುರುವಾರ ನಿಧರಾದರೆಂದು ಪುತ್ರ ನಿಶಾಂತ್ ಖಾನ್ ಹೇಳಿದ್ದಾರೆ.
ಕಳೆದ ಎರಡು ದಶಕಗಳಿಂದ ಅಮೆರಿಕಾದ ಸೇಂಟ್ ಲೂಯಿಸ್ ನಲ್ಲಿ ವಾಸವಿದ್ದ ಇಮ್ರತ್ ಖಾನ್ ಅವರ ಅಂತ್ಯ ಸಂಸ್ಕಾರ ಶನಿವಾರ ನಡೆಯಲಿದೆ ಎಂದು ಕುಟುಂಬ ಮೂಲಗಳು ಹೇಳಿವೆ.
ಇತಾನಾ ಘರಾನಾಗೆ ಸೇರಿದ್ದ ಇಮ್ರತ್ ಖಾನ್ 16ನೇ ಶತಮಾನದಲ್ಲಿ ಜನ್ಮದಳೆದಿದ್ದ ಈ ಸಂಗೀತ ಪದ್ದತಿಯನ್ನು ಕಳೆದ ನಾಲ್ಕು ನೂರು ವರ್ಷಗಳಿಂದ ತಲೆಮಾರುಗಳ ಮೂಲಕ ಸಂಗೀತ ಧಾರೆ ಹರಿದು ಬಂದ ಕುಟುಂಬಕ್ಕೆ ಸೇರಿದವರಾಗಿದ್ದರು. ಖಾನ್ ಸೋದರ ಸಿತಾರ್ ಮಾಂತ್ರಿಕ ಉಸ್ತಾದ್ ವಿಲಾಯತ್ ಖಾನ್  ಸಹ ಪ್ರಸಿದ್ದ ಸಂಗೀತಗಾರರಾಗಿದ್ದಾರೆ. ಇವರ ತಂದೆ ಸಹ ಸಿತಾರ್ ಹಾಗೂ ಸೂರ್ ಬಹಾರ್ ವಾದನದಲ್ಲಿ ವಿಶ್ವ ಖ್ಯಾತಿಯನ್ನು ಹೊಂದಿದ್ದ ಇನಯತ್ ಖಾನ್ ಸಹ ಸಂಗೀತಗಾರರಾಗಿದ್ದು ಇಮ್ರತ್ ಅವರದು ಸಂಗೀತ ಪ್ರಧಾನವಾದ ಕುಟುಂಬವೇ ಆಗಿತ್ತು.
ಕೋಲ್ಕತ್ತಾದಲ್ಲಿ ನೆಲೆಸಿದ್ದ ಇವರ ಕುಟುಂಬ 1944 ರಲ್ಲಿ ಮುಂಬೈಗೆ ಸ್ಥಳಾಂತರವಾಗಿತ್ತು., ಅಲ್ಲಿ ಅವರು ತಮ್ಮ ಚಿಕ್ಕಪ್ಪ ವಹೀದ್ ಖಾನ್ ಅವರಿಂದ ಸಂಗೀತ ಶಿಕ್ಷಣ ಪಡೆದರು 1961 ರಲ್ಲಿ ಅವರು ಎಡಿನ್ಬರ್ಗ್ ಅಂತಾರಾಷ್ಟ್ರೀಯ ಉತ್ಸವದಲ್ಲಿ ಸಂಗೀತ ಕಚೇರಿ ನೀಡುವ ಮೂಲಕ ಪ್ರಖ್ಯಾತಿ ಗಳಿಸಿದ್ದರು. ಬರ್ಲಿನ್ ಮತ್ತು ಲಂಡನ್ ನಲ್ಲಿ ಸಹ ಅವರು ಇದೇ ವರ್ಷದಲ್ಲಿ ಪ್ರಥಮ ಬಾರಿಗೆ ಸಂಗೀತ ಕಚೇರಿ ನಡೆಸಿಕೊಟ್ಟಿದ್ದರು. 1970ರಲ್ಲಿ ಅವರು  ಕ್ಯಾನೆಸ್ ಫಿಲ್ಮ್ ಫೆಸ್ಟಿವಲ್ನಲ್ಲಿ  ಪ್ರದರ್ಶನ ನೀಡಿದ್ದರು.
ಪಂಚದಾದ್ಯಂತ ಅನೇಕ ಸಂಗೀತ ಉತ್ಸವಗಳಲ್ಲಿ ಕಾಣಿಸಿಕೊಂಡಿದ್ದ ಇಮ್ರತ್ ಖಾನ್ ಅವರನ್ನು ಭಾರತ ಸರ್ಕಾರ ಸರಿಯಾಗಿ ಗೌರವಿಸಲಿಲ್ಲ ಎನ್ನುವ ಕೊರಗು ಸಹ ಆವರಿಗಿತ್ತು. ಇದೇ ಕಾರಣಕ್ಕಾಗಿ ಖಾನ್ ಅವರು ಕಳೆದ ವರ್ಷ ಪದ್ಮಶ್ರೀ ಅವರನ್ನು ತಿರಸ್ಕರಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com