ಪಣಜಿ: ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಲು ಬಯಸಿದ್ದಾರೆ, ಆದರೆ ಬಿಜೆಪಿ ಹೈಕಮಾಂಡ್ ಇದಕ್ಕೆ ಅಡ್ಡಗಾಲು ಹಾಕಿದೆ ಎಂದು ಗೋವಾ ಕೃಷಿ ಸಚಿವ ವಿಜಯ್ ಸರ್ ದೇಸಾಯ್ ಹೇಳಿದ್ದಾರೆ.
ಮುಖ್ಯಮಂತ್ರಿ ಹುದ್ದೆ ಜೊತೆಗೆ ತಮ್ಮ ಬಳಿಯಿರುವ ಎಲ್ಲಾ ಖಾತೆಗಳನ್ನು ಬಿಟ್ಟುಕೊಡಲು ಮನೋಹರ್ ಪರಿಕ್ಕರ್ ಬಯಸಿದ್ದಾರೆ, ಗಣೇಶ ಚತುರ್ಥಿ ವೇಳೆ ಅವರು ಆಸ್ಪತ್ರೆಗೆ ದಾಖಲಾದ ಸಮಯದಲ್ಲಿಯೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಅವರು ಸಿದ್ದರಿದ್ದರು ಎಂದು ತಿಳಿಸಿದ್ದಾರೆ.
ಆದರೆ ಈ ವೇಳೆ ಮಧ್ಯ ಪ್ರವೇಶಿಸಿದ ಬಿಜೆಪಿ ಹೈಕಮಾಂಡ್ ಯಾವುದೇ ಕಾರಣಕ್ಕೂ ರಾಜಿನಾಮೆ ನೀಡದಂತೆ ತಡೆಯಿತು ಎಂದು ಹೇಳಿದ್ದಾರೆ, 62 ವರ್ಷದ ಮನೋಹರ್ ಪರಿಕ್ಕರ್ ಆಕ್ಟೋಬರ್ 14 ರಿಂದ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಿಎಂ ಅನಾರೋಗ್ಯದಿಂದಾಗಿ ಸರ್ಕಾರದ ಆಡಳಿತದ ಮೇಲೆ ಕೆಲವೊಂದು ಪರಿಣಾಮ ಉಂಟಾಗುತ್ತಿದ್ದು, ಎಲ್ಲರಿಗೂ ಗೋಚರಿಸುತ್ತದೆ ಎಂದು ಹೇಳಿದ್ದಾರೆ.