ಬ್ರಾಹ್ಮಣ ಹೇಳಿಕೆ: ಚುನಾವಣಾ ಆಯೋಗದಿಂದ ಕಾಂಗ್ರೆಸ್ ಮುಖಂಡ ಸಿ. ಪಿ. ಜೋಶಿಗೆ ನೋಟಿಸ್

ರಾಜಸ್ತಾನ ಕಾಂಗ್ರೆಸ್ ಮುಖಂಡ ಡಾ. ಸಿ. ಪಿ. ಜೋಶಿ ಅವರ ಬ್ರಾಹ್ಮಣ ಹೇಳಿಕೆ ಕುರಿತಂತೆ ನಾಳೆ 11 ಗಂಟೆಯೊಳಗೆ ಪ್ರತಿಕ್ರಿಯೆ ನೀಡುವಂತೆ ಚುನಾವಣಾ ಆಯೋಗದಿಂದ ನೋಟಿಸ್ ನೀಡಲಾಗಿದೆ.
ಸಿ. ಪಿ. ಜೋಶಿ, ಚುನಾವಣಾ ಆಯೋಗ
ಸಿ. ಪಿ. ಜೋಶಿ, ಚುನಾವಣಾ ಆಯೋಗ

ನವದೆಹಲಿ:  ರಾಜಸ್ತಾನ ಕಾಂಗ್ರೆಸ್ ಮುಖಂಡ ಡಾ. ಸಿ. ಪಿ. ಜೋಶಿ ಅವರ ಬ್ರಾಹ್ಮಣ ಹೇಳಿಕೆ ಕುರಿತಂತೆ ನಾಳೆ 11 ಗಂಟೆಯೊಳಗೆ  ಪ್ರತಿಕ್ರಿಯೆ ನೀಡುವಂತೆ ಚುನಾವಣಾ ಆಯೋಗದಿಂದ ನೋಟಿಸ್ ನೀಡಲಾಗಿದೆ.

ರಾಜಸ್ತಾನದ ನಾಥದ್ವಾರಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನವೆಂಬರ್ 21 ರಂದು ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ವೇಳೆ  ಹಿಂಧೂ ಧರ್ಮದ ಬಗ್ಗೆ ಬ್ರಾಹ್ಮಣರು ಮಾತ್ರ ಮಾತನಾಡಲು ಸಾಧ್ಯ ಎಂದು ಸಿ. ಪಿ. ಜೋಶಿ ಹೇಳಿಕೆ ನೀಡಿದ್ದರು.

ಬ್ರಾಹ್ಮಣರಲ್ಲದ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವೆ ಉಮಾಭಾರತಿ  ಏಕೆ ಹಿಂದೂ ಧರ್ಮದ ಬಗ್ಗೆ ಮಾತನಾಡುತ್ತಾರೆ . ಕಾಂಗ್ರೆಸ್ ನವರು ಹಿಂದೂ ಅಲ್ಲ ಅಂತಾ ಪ್ರಮಾಣ ಪತ್ರ ನೀಡುವುದಕ್ಕೆ ಅವರಿಗೆ  ಅಧಿಕಾರ ನೀಡಿದವರು ಯಾರು ? ಬ್ರಾಹ್ಮಣ ಅಥವಾ ಪಂಡಿತರು ಬಿಟ್ಟರೆ ಬೇರೆ ಯಾರಾದರೂ ಧರ್ಮದ ಬಗ್ಗೆ ಗೊತ್ತೇ ಎಂದು  ಪ್ರಶ್ನಿಸಿದರಲ್ಲದೇ, ಪ್ರಧಾನಿ ಮೋದಿ ಹಾಗೂ ಉಮಾಭಾರತಿ ಜನರ ಹಾದಿ ತಪ್ಪಿಸುತ್ತಿದ್ದಾರೆ ಎಂದು ಜೋಶಿ ಹೇಳಿಕೆ ನೀಡಿದ್ದರು.

ನಂತರ ಈ ಹೇಳಿಕೆಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಂದಲೂ ತೀವ್ರ ಆಕ್ಷೇಪ ವ್ಯಕ್ತವಾದ ನಂತರ ಸಿ. ಪಿ. ಜೋಶಿ ಕ್ಷಮೆ ಯಾಚಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com