ದೆಹಲಿಯ ಜಮಾ ಮಸೀದಿ ಒಡೆದಿ ಹಾಕಿ, ಅಲ್ಲಿ ವಿಗ್ರಹಗಳು ಕಾಣದಿದ್ದರೆ ನನ್ನನ್ನು ಗಲ್ಲಿಗೇರಿಸಿ: ಸಾಕ್ಷಿ ಮಹಾರಾಜ್

ಕೇಂದ್ರ ಸರ್ಕಾರ ರಾಮ ಮಂದಿರ ನಿರ್ಮಾಣಕ್ಕೂ ಕಾನೂನು ಜಾರಿಗೆ ತರಲಿದೆ ಎಂದು ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಾಕ್ಷಿ ಮಹಾರಾಜ್
ಸಾಕ್ಷಿ ಮಹಾರಾಜ್
ನವದೆಹಲಿ: ಗುಜರಾತ್ ನ ಸೋಮನಾಥ್ ದೇವಾಲಯ ಮರುನಿರ್ಮಾಣಕ್ಕೆ ಕಾನೂನು ಜಾರಿಗೊಳಿಸಿದಂತೆಯೇ ಈಗಿನ ಕೇಂದ್ರ ಸರ್ಕಾರ ರಾಮ ಮಂದಿರ ನಿರ್ಮಾಣಕ್ಕೂ ಕಾನೂನು ಜಾರಿಗೆ ತರಲಿದೆ ಎಂದು ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 
ಇದೇ ವೇಳೆ ಜಮಾ ಮಸೀದಿ ಧ್ವಂಸ ಮಾಡಲು ಕರೆ ನೀಡಿರುವ ಸಂಸದ ಸಾಕ್ಷಿ ಮಹಾರಾಜ್, ಜಮಾ ಮಸೀದಿ ಇರುವ ಪ್ರದೇಶದಲ್ಲಿ ವಿಗ್ರಹಗಳಿವೆ, ಮಸೀದಿಯ ಮೆಟ್ಟಿಲುಗಳಿರುವ ಪ್ರದೇಶದ ಕೆಳಗೆ ವಿಗ್ರಹಗಳು ಪತ್ತೆಯಾಗದೇ ಇದ್ದಲ್ಲಿ ನನ್ನನ್ನು ಗಲ್ಲಿಗೇರಿಸಿ ಎಂದು ಸವಾಲು ಹಾಕಿದ್ದಾರೆ. ನಾನು ರಾಜಕೀಯಕ್ಕೆ ಬಂದ ನಂತರ ನನ್ನ ಮೊದಲ ಹೇಳಿಕೆ ಇದೇ ಆಗಿತ್ತು. ಈಗಲೂ ಈ ಹೇಳಿಕೆಗೆ ಬದ್ಧನಾಗಿದ್ದೇನೆ.  ನಾನು ಮೊದಲು ರಾಜಕೀಯಕ್ಕೆ ಬಂದ ನಂತರದ ಹೇಳಿಕೆ ಮಥುರಾ, ಕಾಶಿ ಅಯೋಧ್ಯೆಯನ್ನು ಪಕ್ಕಕೆ ಇಡಿ ದೆಹಲಿಯಲ್ಲಿರುವ ಜಮಾ ಮಸೀದಿಯನ್ನು ಒಡೆಯಿರಿ ಅಲ್ಲಿನ ಸ್ಟೈರ್ ಕೇಸ್ ಕೆಳಗೆ ವಿಗ್ರಹಗಳು ಪತ್ತೆಯಾಗದೇ ಇದ್ದರೆ ನನ್ನನ್ನು ಗಲ್ಲಿಗೇರಿಸಿ ಎಂದು ಹೇಳಿದ್ದೆ. ಈಗಲೂ ಆ ಹೇಳಿಕೆಗೆ ನಾನು ಬದ್ಧ ಎಂದು ಸಾಕ್ಷಿ ಮಹಾರಾಜ್ ಹೇಳಿದ್ದಾರೆ. 
ಮುಘಲರು ಹಿಂದೂಗಳ ಭಾವನೆಗಳ ಜೊತೆ ಆಟವಾಡಿದ್ದಾರೆ, 3000 ಮಂದಿರಗಳನ್ನು ಕೆಡವಿ ಮಸೀದಿ ಕಟ್ಟಿದ್ದಾರೆ ಎಂದು ಸಾಕ್ಷಿ ಮಹಾರಾಜ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com