ಮಧ್ಯಪ್ರದೇಶ ಚುನಾವಣೆ: ಬಿಜೆಪಿಗೆ ಬಾಬಾಗಳಿಂದ ಗುನ್ನಾ, ಬೆಂಬಲಿಸ್ತಾರಂತೆ ಕಾಂಗ್ರೆಸ್ ನ್ನ!

ಮಧ್ಯಪ್ರದೇಶದಲ್ಲಿ ಬಿಜೆಪಿಯಿಂದ ರಾಜ್ಯ ಖಾತೆ ಸಚಿವ ಸ್ಥಾನ ಪಡೆದಿದ್ದ ಕಂಪ್ಯೂಟರ್ ಬಾಬ ಅಲಿಯಾಸ್ ಸ್ವಾಮಿ ನಾಮ್ ದೇವ್ ತ್ಯಾಗಿ ಈಗ ಬಿಜೆಪಿಗೆ ಕೈ ಕೊಟ್ಟಿದ್ದು ಕಾಂಗ್ರೆಸ್ ಜೊತೆ ಕೈ ಜೋಡಿಸಲು ಸಜ್ಜಾಗಿದ್ದಾರೆ.
ಮಧ್ಯಪ್ರದೇಶ ಚುನಾವಣೆ: ಬಿಜೆಪಿಗೆ ಬಾಬಾಗಳಿಂದ ಗುನ್ನಾ, ಬೆಂಬಲಿಸ್ತಾರಂತೆ ಕಾಂಗ್ರೆಸ್ ನ್ನ!
ಮಧ್ಯಪ್ರದೇಶ ಚುನಾವಣೆ: ಬಿಜೆಪಿಗೆ ಬಾಬಾಗಳಿಂದ ಗುನ್ನಾ, ಬೆಂಬಲಿಸ್ತಾರಂತೆ ಕಾಂಗ್ರೆಸ್ ನ್ನ!
ಭೋಪಾಲ್: ಮಧ್ಯಪ್ರದೇಶದಲ್ಲಿ ಬಿಜೆಪಿಯಿಂದ ರಾಜ್ಯ ಖಾತೆ ಸಚಿವ ಸ್ಥಾನ ಪಡೆದಿದ್ದ ಕಂಪ್ಯೂಟರ್ ಬಾಬ ಅಲಿಯಾಸ್ ಸ್ವಾಮಿ ನಾಮ್ ದೇವ್ ತ್ಯಾಗಿ ಈಗ ಬಿಜೆಪಿಗೆ ಕೈ ಕೊಟ್ಟಿದ್ದು ಕಾಂಗ್ರೆಸ್ ಜೊತೆ ಕೈ ಜೋಡಿಸಲು ಸಜ್ಜಾಗಿದ್ದಾರೆ. 
ಚುನಾವಣಾ ಕಣವಾಗಿರುವ ಮಧ್ಯಪ್ರದೇಶದಲ್ಲಿ ಬಾಬಾಗಳ ತಂಡವೊಂದು ಸ್ವಾಮಿ ನಾಮ್ ದೇವ್ ತ್ಯಾಗಿ ನೇತೃತ್ವದಲ್ಲಿ ಕಾಂಗ್ರೆಸ್ ಗೆ ಬೆಂಬಲಿಸಲು ತೀರ್ಮಾನಿಸಿದ್ದಾರೆ.  ಇದು ಕಾಂಗ್ರೆಸ್ ಪಾಲಿಗೆ ಸಕಾರಾತ್ಮಕವಾದ ಬೆಳವಣಿಗೆಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ನರ್ಮದಾ ಸಂಸದ್ ನ್ನು ಸಂಘಟಿಸಿರುವ ಕಂಪ್ಯೂಟರ್ ಬಾಬ, ಸಮಾನ ಮನಸ್ಕ ಬಾಬಾಗಳನ್ನು ಉತ್ತರ ಪ್ರದೇಶ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಸಂಘಟಿಸಿದ್ದು, ಮುಂದಿನ ಚುನಾವಣೆಯಲ್ಲಿ ಯಾವ ಪಕ್ಷವನ್ನು ಬೆಂಬಲಿಸಬೇಕೆಂಬ ಬಗ್ಗೆ ಚರ್ಚೆ ನಡೆಸಿದ್ದಾರೆ.
ಸಭೆಯ ಬಳಿಕ ಮಾತನಾಡಿರುವ ಕಂಪ್ಯೂಟರ್ ಬಾಬ, ಸಂತರು ಕಾಂಗ್ರೆಸ್ ನ್ನು ಬೆಂಬಲಿಸಲು ನಿರ್ಧರಿಸಿದ್ದಾರೆ. 15 ವರ್ಷ ಬಿಜೆಪಿಗೆ ಕೊಡಬಹುದಾದರೆ ಕಾಂಗ್ರೆಸ್ ಗೆ 5 ವರ್ಷ ಕೊಡುತ್ತೇವೆ ಎಂದು ಬಾಬಾ ಹೇಳಿದ್ದಾರೆ. ಕಾಂಗ್ರೆಸ್ ಹಿಂದೂ ಧರ್ಮವನ್ನು ಗೌರವಿಸುವುದಾದರೆ ಕಾಂಗ್ರೆಸ್ ನ್ನು ಬೆಂಬಲಿಸುತ್ತೇವೆ ಇಲ್ಲವಾದರೆ ಬೆಂಬಲ ಹಿಂಪಡೆಯುತ್ತೇವೆ ಎಂದು ಕಂಪ್ಯೂಟರ್ ಬಾಬಾ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com