ಸಿಐಸಿ ಆದೇಶದ ಹೊರತಾಗಿಯೂ ಕಪ್ಪು ಹಣ ಬಗ್ಗೆ ಮಾಹಿತಿ ನೀಡಲು ಪ್ರಧಾನಿ ಕಾರ್ಯಾಲಯ ನಕಾರ

ವಿದೇಶದಲ್ಲಿರುವ ಭಾರತೀಯ ಕಪ್ಪು ಹಣದ ಪ್ರಮಾಣದ ಬಗ್ಗೆ ಮಾಹಿತಿ ನೀಡಲು ಪ್ರಧಾನಮಂತ್ರಿ ಕಾರ್ಯಾಲಯ ನಿರಾಕರಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ವಿದೇಶದಲ್ಲಿರುವ ಭಾರತೀಯ ಕಪ್ಪು ಹಣದ ಪ್ರಮಾಣದ ಬಗ್ಗೆ  ಮಾಹಿತಿ ನೀಡಲು ಪ್ರಧಾನಮಂತ್ರಿ ಕಾರ್ಯಾಲಯ ನಿರಾಕರಿಸಿದೆ.

15 ದಿನಗಳಲ್ಲಿ ಕಪ್ಪು ಹಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡುವಂತೆ ಕೇಂದ್ರ ಮಾಹಿತಿ ಆಯೋಗ ಅಕ್ಟೋಬರ್ 16 ರಂದು ಆದೇಶ ನೀಡಿದ್ದರೂ ಪ್ರಧಾನಿ ಕಾರ್ಯಾಲಯ  ಮಾಹಿತಿ ನೀಡಿಲ್ಲ.

ಕಪ್ಪು ಹಣ ಸಂಬಂಧ ಸಲ್ಲಿಸಲಾದ ಆರ್ ಟಿಐ ಅರ್ಜಿಗೆ ಪ್ರತಿಕ್ರಿಯಿಸಿರುವ ಪ್ರಧಾನಿ ಕಾರ್ಯಾಲಯ, ವಿಶೇಷ ತನಿಖಾ ತಂಡವನ್ನು ಈಗಾಗಲೇ  ರಚಿಸಲಾಗಿದ್ದು, ಅದು ತನಿಖೆಯನ್ನು ಮುಂದುವರೆಸಿದೆ ಎಂದಷ್ಟೇ ಹೇಳಿಕೆ ನೀಡಿದೆ.

ಈ ನಿಟ್ಟಿನಲ್ಲಿ ಸರ್ಕಾರ ಕೈಗೊಂಡ ಎಲ್ಲಾ  ಪ್ರಯತ್ನಗಳ ಬಹಿರಂಗಪಡಿಸುವಿಕೆಯು ತನಿಖೆಯ ಸಂಪೂರ್ಣ ಪ್ರಕ್ರಿಯೆಯನ್ನು ತಡೆಯುತ್ತದೆ  ಹೀಗಾಗಿ  ಆರ್ ಟಿಐ ಕಾಯ್ದೆ ಸೆಕ್ಷನ್ 8 (1) (ಹೆಚ್ ) ಅಡಿಯಲ್ಲಿ  ವಿನಾಯಿತಿ ನೀಡಲಾಗಿದೆ ಎಂದು ಸಂಜಯ್ ಚತುರ್ವೇದಿ ಎಂಬವರು ಸಲ್ಲಿಸಿದ ಆರ್ ಟಿಐ ಅರ್ಜಿಗೆ ಪ್ರತಿಕ್ರಿಯಿಸಲಾಗಿದೆ.

ವಿದೇಶದಲ್ಲಿ ಇರುವ ಕಪ್ಪು ಹಣ ಸಂಬಂಧ ಮಾಹಿತಿ ನೀಡುವಂತೆ ಜೂನ್.1 2014 ರಲ್ಲಿ ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಚತುರ್ವೇದಿ ಆರ್ ಟಿಐ ಅರ್ಜಿ ಸಲ್ಲಿಸಿದ್ದರು.
ಈ ಸಂಬಂಧ ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಪ್ರತಿಕ್ರಿಯಿಸಿದ ಪ್ರಧಾನಿ ಕಾರ್ಯಾಲಯ, ಕೇಳಲಾದ ಪ್ರಶ್ನೆ ಪಾರದರ್ಶಕತೆ ಕಾನೂನು ಸೆಕ್ಷನ್  2(ಎಫ್ ) ಅಡಿ ವ್ಯಾಪ್ತಿಗೆ ಬರುವುದಿಲ್ಲ ಎಂದು  ಹೇಳಲಾಗಿತ್ತು. ಆದ್ದರಿಂದ ಚತುರ್ವೇದಿ  ಕೇಂದ್ರ ಮಾಹಿತಿ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com