ನಾಗ್ಪುರದಲ್ಲಿ ವಿಶ್ವಹಿಂದೂ ಪರಿಷತ್ ನ ಹೂಂಕಾರ್ ಸಭಾವನ್ನುದ್ದೇಶಿಸಿ ಮಾತನಾಡಿರುವ ಮೋಹನ್ ಭಾಗ್ವತ್, "ರಾಮ ಜನ್ಮಭೂಮಿ ಸಂಬಂಧದ ವಿಷಯ ಕೋರ್ಟ್ ನಲ್ಲಿದೆ, ಈ ಕುರಿತು ಆದಷ್ಟೂ ಶೀಘ್ರವಾಗಿ ನಿರ್ಧಾರ ಪ್ರಕಟವಾಗಬೇಕು, ರಾಮ ಜನ್ಮಭೂಮಿಯಲ್ಲಿ ರಾಮಮಂದಿರವಿತ್ತು ಎಂಬುದು ಸಾಬೀತಾಗಿರುವ ಅಂಶ. ಸುಪ್ರೀಂ ಕೋರ್ಟ್ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಆದ್ಯತೆ ನೀಡಿಲ್ಲ. ನ್ಯಾಯದಾನ ನಿಧಾನಗೊಳಿಸುವುದು ನ್ಯಾಯದಾನ ನಿರಾಕರಿಸಿದಂತೆಯೇ ಸರಿ, ಯಾವುದೋ ವಿಷಯಕ್ಕೆ ಕೋರ್ಟ್ ರಾಮ ಮಂದಿರವನ್ನು ಆದ್ಯತೆಯ ವಿಷಯವನ್ನಾಗಿ ಪರಿಗಣಿಸದೇ ಇದ್ದರೆ, ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕಾನೂನು ಜಾರಿಗೊಳಿಸಬೇಕು" ಎಂದು ಭಾಗ್ವತ್ ಸಭೆಯಲ್ಲಿ ಹೇಳಿದ್ದಾರೆ.