ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಅರುಣಾಚಲ ಪ್ರದೇಶ: ಸಜೀವ ಶಲ್ ಸ್ಪೋಟಗೊಂಡು ಮೂರು ಮಕ್ಕಳು ಸಾವು

ಸಜೀವ ಶೆಲ್ ಸ್ಪೋಟಗೊಂಡ ಪರಿಣಾಮ ಕನಿಷ್ಟ ಮೂವರು ಮಕ್ಕಳು ಸಾವನ್ನಪ್ಪಿರುವ ಘಟನೆ ಅರುಣಾಚಲ ಪ್ರದೇಶದ ಅಂಜಾವ್ ಜಿಲ್ಲೆ ಚಿರಾಂಗ್ ಗ್ರಾಮದಲ್ಲಿ ನಡೆದಿದೆ. ಸಾವನ್ನಪ್ಪಿದ ಮೂರು ಮಕ್ಕಳು 2-10 ವರ್ಷ ಒಳಗಿನವರು ಎನ್ನಲಾಗಿದೆ.
Published on
ಇಟಾನಗರ: ಸಜೀವ ಶೆಲ್ ಸ್ಪೋಟಗೊಂಡ ಪರಿಣಾಮ ಕನಿಷ್ಟ ಮೂವರು ಮಕ್ಕಳು ಸಾವನ್ನಪ್ಪಿರುವ ಘಟನೆ ಅರುಣಾಚಲ ಪ್ರದೇಶದ ಅಂಜಾವ್ ಜಿಲ್ಲೆ ಚಿರಾಂಗ್ ಗ್ರಾಮದಲ್ಲಿ ನಡೆದಿದೆ. ಸಾವನ್ನಪ್ಪಿದ ಮೂರು ಮಕ್ಕಳು 2-10 ವರ್ಷ ಒಳಗಿನವರು ಎನ್ನಲಾಗಿದೆ.
ಇಬ್ಬರು ಬಾಲಕಿಯರು ಸೇರಿ ಮೂರು ಮಕ್ಕಳು ಸಜೀವ ಶೆಲ್ (ಸ್ಪೋಟಕ) ದೊಡನೆ ಆಟವಾಡುತ್ತಿದ್ದರು ಇದನ್ನು ಅಅವರು ತಮ್ಮ ಪೋಷಕರಿಂದಲೇ ಪಡೆದಿದ್ದರು ಎನ್ನಲಾಗಿದೆ.
ಭಾರತೀಯ ಸೇನೆಯ ಫೈರಿಂಗ್ ರೇಂಜ್ ನಲ್ಲಿ ಬಳಸಲಾಗುವ ಶೆಲ್ ಇದು ಎನ್ನಲಾಗಿದ್ದು  ಒಮ್ಮೆ ಬಳಕೆಯಾಗಿದ್ದ ಶೆಲ್ ಅನ್ನು ಸ್ಥಳೀಯ ಗ್ರಾಮನಿವಾಸಿಗಳು ಸಂಗ್ರಹಿಸಿ ಅದರಲ್ಲಿನ ಅಲ್ಯುಮಿನಿಯಂ ಅನ್ನು ಕರಗಿಸುತ್ತಿದ್ದರು ಎಂದು ಪೋಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಮೃತ ಮಕ್ಕಳನ್ನು ಯುಮನ್ ಕ್ರಾಂಗ್ (2) ರಿಯಾ ಕ್ರಾಂಗ್ ((8)  ಮತ್ತು  ಅನಿಶಾ ಕ್ರಾಂಗ್ (10) ಎಂದು ಗುರುತಿಸಲಾಗಿದೆ.
ಘಟನೆಯ ಕುರಿತು ಮುಖ್ಯಮಂತ್ರಿ ಪೆಮಾ ಖಂಡು ಆಘಾತ ಮತ್ತು ದುಃಖ ವ್ಯಕ್ತಪಡಿಸಿದ್ದಾರೆ. ಮೃತ ಮಕ್ಕಳ ಕುಟುಂಬಗಳಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 4 ಲಕ್ಷ ರೂ. ಪರಿಹಾರ ನೀಡುವುದಾಗಿ ಅವರು ಹೇಳಿದ್ದಾರೆ. ಇದೇವೇಳೆ ಸೇನಾ ಶಿಬಿರಗಳು, ಸೈನಿಕರು ಅಭ್ಯಾಸ ನಡೆಸುವ ಸ್ಥಳಗಳಿಗೆ ಗ್ರಾಮಸ್ಥರು ತೆರಳಬಾರದು ಎಂದು ಎಚ್ಚರಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com