ಮುಂಬೈ: ಆರ್ಥಿಕ ಸಂಕಷ್ಟದಲ್ಲಿರುವ ಜೆಟ್ ಏರ್ ವೇಸ್ ವಿಮಾನಯಾನ ಸಂಸ್ಥೆ ವೆಚ್ಚ ಕಡಿತಗೊಳಿಸಲು ಮತ್ತೆ 16 ನೌಕರರನ್ನು ಕೆಲಸದಿಂದ ತೆಗೆದುಹಾಕಿದೆ ಎಂದು ಸೋಮವಾರ ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ, ಕೊಚ್ಚಿ ಮತ್ತು ಹೈದರಾಬಾದ್ ನಲ್ಲಿ ಕೆಲಸ ಮಾಡುತ್ತಿದ್ದ 16 ಕೆಳ ಹಂತದ ಸಿಬ್ಬಂದಿಯನ್ನು ಜೆಟ್ ಏರ್ ವೇಸ್ ವಜಾಗೊಳಿಸಿದೆ.
ಜೆಟ್ ಏರ್ ವೇಸ್ ವೆಚ್ಚ ಕಡಿತದ ಭಾಗವಾಗಿ ಕಳೆದು ತಿಂಗಳು ಕೆಲವು ಹಿರಿಯ ಕಾರ್ಯನಿರ್ವಾಹಕ ಅಧಿಕಾರಿಗಳು ಸೇರಿದಂತೆ 20 ನೌಕರರನ್ನು ವಜಾಗೊಳಿಸಿತ್ತು.
ನರೇಶ್ ಗೋಯಲ್ ಮಾಲೀಕತ್ವದ ಜೆಟ್ ಏರ್ ವೇಸ್ 124 ವಿಮಾನಗಳನ್ನು ಹೊಂದಿದ್ದು, ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ.
ಹೆಚ್ಚುತ್ತಿರುವ ತೈಲ ಬೆಲೆ, ತೈಲದ ಮೇಲಿನ ತೆರಿಗೆ ಹೆಚ್ಚಳ, ದುರ್ಬಲ ರುಪಾಯಿ ಮೌಲ್ಯ, ಕಡಿಮೆ ಪ್ರಯಾಣ ದರ ಹಾಗೂ ದರ ಸ್ಪರ್ಧೆ ಇವೆಲ್ಲವೂ ಸೇರಿಕೊಂಡು ಜೆಟ್ ಏರ್ ವೇಸ್ ನಷ್ಟ ಅನುಭವಿಸುವಂತೆ ಮಾಡಿವೆ.