ಸರ್ಜಿಕಲ್ ಸ್ಟ್ರೈಕ್ ವಿಡಿಯೋ ಸಾಕ್ಷಿ ಕೇಳುವ ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ

ಮುಂಬೈ ದಾಳಿ ನಡೆದಾಗ ಅಧಿಕಾರದಲ್ಲಿದ್ದ ಕಾಂಗ್ರೆಸ್ , ಪಾಕಿಸ್ತಾನದಲ್ಲಿ ಬಿಜೆಪಿ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಬಳಿ ಪ್ರಶ್ನೆ ಮಾಡುತ್ತದೆ ಎಂದು ಭಯೋತ್ಪಾದನೆ ಹಾಗೂ ನಕ್ಸಲ್ ವಿಚಾರದಲ್ಲಿ ಪ್ರತಿಪಕ್ಷ ಕಾಂಗ್ರೆಸ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ

ಬಿಲ್ವಾರಾ: ಮುಂಬೈ ದಾಳಿ ನಡೆದಾಗ ಅಧಿಕಾರದಲ್ಲಿದ್ದ ಕಾಂಗ್ರೆಸ್  , ಪಾಕಿಸ್ತಾನದಲ್ಲಿ ಬಿಜೆಪಿ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಬಳಿ ಪ್ರಶ್ನೆ ಮಾಡುತ್ತದೆ ಎಂದು ಭಯೋತ್ಪಾದನೆ ಹಾಗೂ ನಕ್ಸಲ್ ವಿಚಾರದಲ್ಲಿ  ಪ್ರತಿಪಕ್ಷ ಕಾಂಗ್ರೆಸ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.

ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮುಂಬೈ ದಾಳಿ ನಡೆದು ಇಂದಿಗೆ 10 ವರ್ಷವಾಗಿದೆ. ಮುಂಬೈಗೆ ನುಗಿದ್ದ ಪಾಕಿಸ್ತಾನದ 10 ಉಗ್ರರಿಂದ 166 ಜನರು ಮೃತಪಟ್ಟಿದ್ದರು. ಅಂದಿನ ಸಂದರ್ಭದಲ್ಲಿ ಅಧಿಕಾರದಲ್ಲಿದ್ದ ಸರ್ಕಾರ ಸೋನಿಯಾ ಮೇಡಂ ಕೈಯಲ್ಲಿದ್ದ ರಿಮೋಟ್  ಕಂಟ್ರೋಲ್ ನಲ್ಲಿತ್ತು ಎಂದರು.

ಭಾರತೀಯ ಸೇನೆ ಗಡಿಯನ್ನು ದಾಟಿ ಸರ್ಜಿಕಲ್ ಸ್ಟ್ರೈಕ್ ನಡೆಸಿರುವ ಬಗ್ಗೆ ಕಾಂಗ್ರೆಸ್ ಪಕ್ಷ ಪ್ರಶ್ನಿಸುವುದಲ್ಲದೇ,  ವಿಡಿಯೋ ಸಾಕ್ಷ್ಯ ತೋರಿಸುವಂತೆ ಕೇಳಿದೆ. ನಮ್ಮ ಸೈನಿಕರು ಕೈಯಲ್ಲಿ ಜೀವ ಹಿಡಿದಿಟ್ಟುಕೊಂಡಿದ್ದರು. ಕ್ಯಾಮರಾ ಇಟ್ಟುಕೊಂಡಿರಲಿಲ್ಲ ಎಂದು ಮೋದಿ ಹೇಳಿದರು.

ಭಾರತ ನವೆಂಬರ್ 26ರ ಮುಂಬೈ ದಾಳಿ ಅಥವಾ ಸಂಚುಕೋರರನ್ನು ಎಂದಿಗೂ ಮರೆಯಲಾಗದು, ಈ ದಾಳಿಗೆ ಖಂಡಿತಾ ನ್ಯಾಯ ಒದಗಿಸಲಾಗುವುದು ಎಂದು ದೇಶದ ಜನತೆಗೆ ಭರವಸೆ ನೀಡುವುದಾಗಿ ಹೇಳಿದ ಮೋದಿ , ಉಗ್ರರು ಹಾಗೂ ನಕ್ಸಲೀಯರಿಗೆ ಅವರ ಭಾಷೆಯಲ್ಲಿಯೇ ಉತ್ತರ ನೀಡುವುದಾಗಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com