ಆರೋಗ್ಯವಾಗಿದ್ದಾಗಲೇ ವಾಜಪೇಯಿ ಅವರಿಗೆ ಕಾಂಗ್ರೆಸ್ ಭಾರತ ರತ್ನ ನೀಡಬೇಕಿತ್ತು: ಫಾರೂಕ್ ಅಬ್ದುಲ್

ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ದೇಶದ ಅತ್ಯುನ್ನತ ಗೌರವವಾದ ಭಾರತರತ್ನ ಪ್ರಶಸ್ತಿ ಪುರಸ್ಕಾರ ನೀಡುವುದು ಕಾಂಗ್ರೆಸ್ ಗೆ ...
ಫಾರೂಖ್ ಅಬ್ದುಲ್ಲಾ
ಫಾರೂಖ್ ಅಬ್ದುಲ್ಲಾ
ನವದೆಹಲಿ: ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ದೇಶದ ಅತ್ಯುನ್ನತ ಗೌರವವಾದ ಭಾರತರತ್ನ ಪ್ರಶಸ್ತಿ ಪುರಸ್ಕಾರ ನೀಡುವುದು ಕಾಂಗ್ರೆಸ್ ಗೆ ಇಷ್ಟವಿರಲಿಲ್ಲ, ಹೀಗಾಗಿ ಕಾಂಗ್ರೆಸ್ ವಾಜಪೇಯಿ ಅವರಿಗೆ ಭಾರತ ರತ್ನ ಪುರಸ್ಕಾರ ನೀಡಲಿಲ್ಲ ಎಂದು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.
 ನರೇಂದ್ರ ಮೋದಿ ಪ್ರಧಾನ ಮಂತ್ರಿಯಾಗಿ ಆಯ್ಕೆ ಗೊಂಡ ನಂತರ 2015 ರಲ್ಲಿ ವಾಜಪೇಯಿ ಅವರಿಗೆ ಅವರ ನಿವಾಸದಲ್ಲಿ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಒಂದು ದಿನ ನೀವು ದೇಶದ  ಪ್ರದಾನಿಯಾಗುತ್ತೀರಿ ಎಂದು  ಅಂದಿನ ಪ್ರಧಾನ ಜವಹರಲಾಲ್ ನೆಹರು ಹೇಳಿದ್ದರು ಎಂಬುದನ್ನು ವಾಜಪೇಯಿ ನನ್ನ ಬಳಿ ತಿಳಿಸಿದ್ದರು ಎಂದು ಫಾರೂಕ್ ಅಬ್ದುಲ್ಲಾ ತಿಳಿಸಿದ್ದಾರೆ.
ಆರ್ ಎಸ್ ಎಸ್ ಹಿನ್ನೆಲೆಯಿಂದ ಬಂದಿದ್ದ ವಾಜಪೇಯಿ ಅವರಿಗೆ ದೇಶವನ್ನು ಒಬ್ಬರೇ ಕಟ್ಟು ಸಾಧ್ಯವಿಲ್ಲ ಎಂಬುದು ತಿಳಿದಿತ್ತು. ದೇಶವನ್ನು ಹಿಂದೆ ಕಟ್ಟಿದವರನ್ನು ಮರೆಯಬಾರದು ಎಂದು ಹೇಳಿದ್ದಾರೆ.
ವಾಜಪೇಯಿ ಅವರು ಆರೋಗ್ಯದಿಂದ ಇರುವಾಗ ಅವರಿಗೆ ಕಾಂಗ್ರೆಸ್ ಭಾರತ ರತ್ನ ಗೌರವ ನೀಡಬೇಕಿತ್ತು ಎಂಬುದು ನನ್ನ ವಾದ ಎಂದು ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ,  ನರೇಂದ್ರ ಮೋದಿ ಪ್ರಧಾನ ಮಂತ್ರಿ ಕಾರ್ಯಾಲಯದ ಘನತೆ ಗೌರವ ಕಾಪಾಡುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com